ದಿಶಾ ಪಟಾನಿ ಹಾಟ್ ಅವತಾರಕ್ಕೆ ಸೆನ್ಸಾರ್ ಮಂಡಳಿ ಕತ್ತರಿ; ‘ಏಕ್ ವಿಲನ್ ರಿಟರ್ನ್ಸ್’ ತಂಡದವರು ಏನಂದ್ರು?
‘ಏಕ್ ವಿಲನ್ ರಿಟರ್ನ್ಸ್’ ಚಿತ್ರದಲ್ಲಿ ಅರ್ಜುನ್ ಕಪೂರ್, ಜಾನ್ ಅಬ್ರಾಹಂ, ದಿಶಾ ಪಟಾನಿ ನಟಿಸಿದ್ದಾರೆ. ಈ ಮೂವರಿಗೆ ಈ ಚಿತ್ರದ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.
‘ಎಕ್ ವಿಲನ್’ ಚಿತ್ರದ (Ek Villain) ಯಶಸ್ಸಿನ ನಂತರದಲ್ಲಿ ‘ಏಕ್ ವಿಲನ್ ರಿಟರ್ನ್ಸ್’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ಈ ಚಿತ್ರ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ಚಿತ್ರದಲ್ಲಿ ದಿಶಾ ಪಟಾನಿ (Disha Patani) ಹಾಟ್ ಅವತಾರ ತಾಳಿದ್ದಾರೆ. ಆದರೆ, ಇದಕ್ಕೆ ಕತ್ತರಿ ಹಾಕುವಂತೆ ‘ಏಕ್ ವಿಲನ್ ರಿಟರ್ನ್ಸ್’ ತಂಡಕ್ಕೆ ಸೂಚನೆ ನೀಡಿತ್ತು. ಇದನ್ನು ತಂಡದವರು ಒಪ್ಪಿದ್ದು, 9 ಸೆಕೆಂಡ್ನ ದೃಶ್ಯಕ್ಕೆ ಕತ್ತರಿ ಹಾಕಿದ್ದಾರೆ. ಇದಲ್ಲದೆ, ಇನ್ನೂ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ.
‘ಏಕ್ ವಿಲನ್ ರಿಟರ್ನ್ಸ್’ ಚಿತ್ರದಲ್ಲಿ ಅರ್ಜುನ್ ಕಪೂರ್, ಜಾನ್ ಅಬ್ರಾಹಂ, ದಿಶಾ ಪಟಾನಿ ನಟಿಸಿದ್ದಾರೆ. ಈ ಮೂವರಿಗೆ ಈ ಚಿತ್ರದ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಜಾನ್ ಈ ಚಿತ್ರದಲ್ಲಿ ವಿಲನ್ ಎನ್ನಲಾಗಿದೆ. ಈ ಸಿನಿಮಾದಲ್ಲಿ ಅನೇಕ ಕಡೆಗಳಲ್ಲಿ ಅವಾಚ್ಯ ಶಬ್ದಗಳ ಬಳಕೆ ಆಗಿದೆ. ಇವುಗಳ ಬದಲು ಸೌಮ್ಯ ಶಬ್ದಗಳ ಬಳಕೆಗೆ ಸೆನ್ಸಾರ್ ಮಂಡಳಿ ಸೂಚನೆ ನೀಡಿತ್ತು.
ಸಿನಿಮಾದಲ್ಲಿ ಅನೇಕ ಕಡೆಗಳಲ್ಲಿ ರಕ್ತವನ್ನು ತೋರಿಸಲಾಗಿದೆ, ಕೆಲ ಇಂಟಿಮೇಟ್ ದೃಶ್ಯಗಳಿವೆ. ಇದಕ್ಕೆ ಕತ್ತರಿ ಹಾಕುವಂತೆ ಅಥವಾ ಈ ರೀತಿಯ ದೃಶ್ಯಗಳನ್ನು ಕಡಿಮೆ ಮಾಡುವಂತೆ ತಂಡಕ್ಕೆ ಸೂಚನೆ ನೀಡಲಾಗಿತ್ತು. ಈಗ ಒಟ್ಟೂ 9 ಸೆಕೆಂಡ್ಗಳ ದೃಶ್ಯವನ್ನು ಕಟ್ ಮಾಡಲಾಗಿದೆ. ಇದರಲ್ಲಿ ಇಂಟಿಮೇಟ್ ದೃಶ್ಯ ಪ್ರಮುಖವಾಗಿದೆ ಎನ್ನಲಾಗಿದೆ. ಈ ಬದಲಾವಣೆಗಳನ್ನು ಮಾಡಿ ತಂಡದವರು ಸೆನ್ಸಾರ್ ಮಂಡಳಿಗೆ ‘ಎಕ್ ವಿಲನ್ ರಿಟರ್ನ್ಸ್’ ಸಿನಿಮಾ ತೋರಿಸಲಾಗಿದೆ. ಚಿತ್ರಕ್ಕೆ ‘ಯು/ಎ’ ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರದ ಅವಧಿ 128 ನಿಮಿಷ ಇದೆ. ಅಂದರೆ, ಈ ಚಿತ್ರ 2 ಗಂಟೆ 8 ನಿಮಿಷ ಪ್ರದರ್ಶನ ಕಾಣಲಿದೆ.
ಇದನ್ನೂ ಓದಿ: ಹೀರೋ ಅಂತ ಜಂಭ ತೋರಿದ್ದ ಜಾನ್ ಅಬ್ರಾಹಂ ವಿಲನ್ ಆಗಿಬಿಟ್ರು; ಇದಕ್ಕೆ ನಟನ ಪ್ರತಿಕ್ರಿಯೆ ಏನು?
ಈ ವಾರ ತೆರೆಗೆ ಬಂದ ರಣಬೀರ್ ಕಪೂರ್ ನಟನೆಯ ‘ಶಂಷೇರಾ’ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತ ‘ಥಗ್ಸ್ ಆಫ್ ಹಿಂದೂಸ್ಥಾನ್’ ಚಿತ್ರವನ್ನು ‘ಶಂಷೇರಾ’ ನೆನಪಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಜುಲೈ 29ರಂದು ರಿಲೀಸ್ ಆಗಲಿರುವ ‘ಏಕ್ ವಿಲನ್ ರಿಟರ್ನ್ಸ್’ಗೆ ಇದು ಸಹಕಾರಿ ಆಗಲಿದೆ.