AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇಪದೇ ಬೆತ್ತಲೆ ಫೋಟೋ ಶೇರ್​ ಮಾಡುತ್ತಿರುವ ಆರ್​ಜಿವಿ; ಕಾಂಟ್ರವರ್ಸಿ ನಿರ್ದೇಶಕನ ವಾದವೇ ಬೇರೆ

Ranveer Singh Viral Photo: ಸ್ತ್ರೀಯರು ಪುರುಷರ ನಗ್ನ ಫೋಟೋವನ್ನು ನೋಡಿ ಖುಷಿಪಡುತ್ತಾರೋ ಇಲ್ಲವೋ ಎಂಬ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಅವರು ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಅದರ ಫಲಿತಾಂಶವನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ.

ಪದೇಪದೇ ಬೆತ್ತಲೆ ಫೋಟೋ ಶೇರ್​ ಮಾಡುತ್ತಿರುವ ಆರ್​ಜಿವಿ; ಕಾಂಟ್ರವರ್ಸಿ ನಿರ್ದೇಶಕನ ವಾದವೇ ಬೇರೆ
ರಾಮ್ ಗೋಪಾಲ್ ವರ್ಮಾ
TV9 Web
| Updated By: ಮದನ್​ ಕುಮಾರ್​|

Updated on:Jul 27, 2022 | 10:17 AM

Share

ನಟ ರಣವೀರ್​ ಸಿಂಗ್ (Ranveer Singh) ಅವರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದಕ್ಕೆಲ್ಲ ಕಾರಣ ಆಗಿರುವುದು ಅವರ ಬೆತ್ತಲೆ ಫೋಟೋಶೂಟ್​ (Ranveer Singh Photoshoot). ಜನಪ್ರಿಯ ‘ಪೇಪರ್​’ ಮ್ಯಾಗಜಿನ್​ ಸಲುವಾಗಿ ಅವರು ಸಂಪೂರ್ಣ ನಗ್ನವಾಗಿ ಪೋಸ್​ ನೀಡಿದ್ದಾರೆ. ಆ ಪೋಟೋಗಳು ಸಖತ್​ ವೈರಲ್​ ಆಗಿವೆ. ಅದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಇನ್ನೂ ಕೆಲವರು ರಣವೀರ್​ ಸಿಂಗ್​ ಪರವಾಗಿ ವಾದ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಕೂಡ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಯಾವಾಗಲೂ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಅವರು ಈಗ ರಣವೀರ್ ಸಿಂಗ್​ ಕುರಿತು ಸರಣಿ ಟ್ವೀಟ್​ ಮಾಡುತ್ತಿದ್ದಾರೆ. ಪ್ರತಿ ಬಾರಿ ಪೋಸ್ಟ್​ ಮಾಡುವಾಗಲೂ ಅವರು ನಗ್ನ ಫೋಟೋಗಳನ್ನು ಶೇರ್​ ಮಾಡುತ್ತಿದ್ದಾರೆ. ಇದನ್ನು ಕಂಡು ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ನಗ್ನ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ರಣವೀರ್​ ಸಿಂಗ್​ ಅವರು ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ಆ ಮಾತನ್ನು ರಾಮ್​ ಗೋಪಾಲ್​ ವರ್ಮಾ ತಳ್ಳಿಹಾಕಿದ್ದಾರೆ. ‘ಮತ ಚಲಾಯಿಸಲು ಮಹಿಳೆಯರು ದಶಕಗಳ ಕಾಲ ಕಾಯಬೇಕಾಯಿತು. ಅದೇ ರೀತಿ ಪುರುಷನ ಬೆತ್ತಲೆ ಫೋಟೋವನ್ನು ನೋಡಲು ಮಹಿಳೆಯರು ಯಾಕೆ ಕಾಯಬೇಕು? ಗಂಡಸರು ದಶಕಗಳಿಂದಲೂ ಮಹಿಳೆಯರ ಬೆತ್ತಲೆ ಫೋಟೋ ನೋಡುತ್ತಿದ್ದಾರೆ. ರಣವೀರ್​ ಸಿಂಗ್​ ಅವರಿಂದ ಸ್ತ್ರೀಯರ ಭಾವನೆಗೆ ಧಕ್ಕೆ ಆಗಿದೆ ಎಂಬ ಆರೋಪ ಇದೆ. ಆದರೆ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ವ್ಯಕ್ತಿಯಾಗಿ ರಣವೀರ್​ ಸಿಂಗ್​ ಅವರನ್ನು ನಾನು ನೋಡುತ್ತೇನೆ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ
Image
Ranveer Singh: ಬೆತ್ತಲೆ ಫೋಟೋ ಹಂಚಿಕೊಂಡ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಿಸಿದ ಮುಂಬೈ ಪೊಲೀಸರು
Image
Jennifer Lopez: ಬೆತ್ತಲೆ ಫೋಟೋ ಮೂಲಕ ಬರ್ತ್​ಡೇ ಆಚರಿಸಿಕೊಂಡ ನಟಿ ಜೆನಿಫರ್​ ಲೋಪೆಜ್​
Image
Ranveer Singh: ಸಂಪೂರ್ಣ ಬೆತ್ತಲಾದ ರಣವೀರ್​ ಸಿಂಗ್​; ದೀಪಿಕಾ ಪಡುಕೋಣೆ ಪತಿಯ ಹಲವು ಫೋಟೋ ವೈರಲ್​
Image
ಸಾರ್ವಜನಿಕ ಸ್ಥಳದಲ್ಲಿ ನಟಿಯ ಬೆತ್ತಲೆ ಫೋಟೋಶೂಟ್​ ಕೇಸ್​; ಪೂನಂ ಪಾಂಡೆ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ

ಮಹಿಳೆಯರು ಪುರುಷರ ನಗ್ನ ಫೋಟೋವನ್ನು ನೋಡಿ ಖುಷಿಪಡುತ್ತಾರೋ ಇಲ್ಲವೋ ಎಂಬ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಅವರು ಟ್ವಿಟರ್​ನಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಅವರು ಪೋಲ್​ ಹಾಕಿದ್ದು, ಶೀಘ್ರದಲ್ಲೇ ಅದರ ಫಲಿತಾಂಶವನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಅವರು ರಣವೀರ್​ ಸಿಂಗ್​ ನಗ್ನ ಫೋಟೋಗಳನ್ನು ಇಟ್ಟುಕೊಂಡು ಅನೇಕ ವಿಚಾರಗಳನ್ನು ಮಂಡಿಸುತ್ತಿದ್ದಾರೆ.

ರಾಜಕೀಯ, ಸಿನಿಮಾ ಮುಂತಾದ ವಿಷಯಗಳ ಬಗ್ಗೆ ರಾಮ್​ ಗೋಪಾಲ್​ ಅವರು ಪದೇ ಪದೇ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಕೆಲವರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ದ್ರೌಪದಿ ಮುರ್ಮು ಕುರಿತು ಆರ್​ಜಿವಿ ಮಾಡಿದ ಟ್ವೀಟ್​ನಿಂದ ವಿವಾದ ಸೃಷ್ಟಿ ಆಗಿತ್ತು.

Published On - 10:17 am, Wed, 27 July 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ