Ranveer Singh: ಬೆತ್ತಲೆ ಫೋಟೋ ಹಂಚಿಕೊಂಡ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಿಸಿದ ಮುಂಬೈ ಪೊಲೀಸರು

Ranveer Singh Viral Photo: ಮುಂಬೈ ಪೊಲೀಸರು ನಟ ರಣವೀರ್​ ಸಿಂಗ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆತ್ತಲೆ ಫೋಟೋ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ.

Ranveer Singh: ಬೆತ್ತಲೆ ಫೋಟೋ ಹಂಚಿಕೊಂಡ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಿಸಿದ ಮುಂಬೈ ಪೊಲೀಸರು
ರಣವೀರ್ ಸಿಂಗ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 26, 2022 | 2:05 PM

ನಟ ರಣವೀರ್​ ಸಿಂಗ್ ಅವರು ನಗ್ನ ಫೋಟೋದಿಂದಾಗಿ (Ranveer Singh Nude Photo) ಕಾನೂನಿನ ಸಂಕಷ್ಟ ಎದುರಿಸುವಂತಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಬೆತ್ತಲೆ ಫೋಟೋ ಪೋಸ್ಟ್​ ಮಾಡಿದ್ದಕ್ಕಾಗಿ ಅವರ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ಕೂಡ ನೀಡಲಾಗಿದ್ದು, ನಟನ ಕೊರಳಿಗೆ ವಿವಾದ ಸುತ್ತಿಕೊಂಡಿದೆ. ಎನ್​ಜಿಒ ನೀಡಿದ ದೂರಿನ ಅನ್ವಯ ಮುಂಬೈ ಪೊಲೀಸರು (Mumbai Police) ರಣವೀರ್​ ಸಿಂಗ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಲವು ಕಾಯ್ದೆಗಳ ಅಡಿಯಲ್ಲಿ ಕೇಸ್​ ಹಾಕಲಾಗಿದೆ. ಪ್ರಕರಣದ ಕುರಿತು ರಣವೀರ್​ ಸಿಂಗ್​ (Ranveer Singh) ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಸೆಲೆಬ್ರಿಟಿಗಳನ್ನು ಜನರು ಫಾಲೋ ಮಾಡುತ್ತಾರೆ. ಹಾಗಾಗಿ ಅವರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ರಣವೀರ್​ ಸಿಂಗ್​ ಅವರು ಬೆತ್ತಲೆ ಫೋಟೋ ಹಂಚಿಕೊಂಡಿದ್ದು ಸರಿಯಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಐಪಿಸಿ ಸೆಕ್ಷನ್​ 292, 293 ಹಾಗೂ 509ರ ಅಡಿಯಲ್ಲಿ ‘ಗಲ್ಲಿ ಬಾಯ್​’ ನಟನ ವಿರುದ್ಧ ಕೇಸ್​ ದಾಖಲಾಗಿದೆ.

ಇದನ್ನೂ ಓದಿ
Image
Jennifer Lopez: ಬೆತ್ತಲೆ ಫೋಟೋ ಮೂಲಕ ಬರ್ತ್​ಡೇ ಆಚರಿಸಿಕೊಂಡ ನಟಿ ಜೆನಿಫರ್​ ಲೋಪೆಜ್​
Image
Ranveer Singh: ಸಂಪೂರ್ಣ ಬೆತ್ತಲಾದ ರಣವೀರ್​ ಸಿಂಗ್​; ದೀಪಿಕಾ ಪಡುಕೋಣೆ ಪತಿಯ ಹಲವು ಫೋಟೋ ವೈರಲ್​
Image
ಸಾರ್ವಜನಿಕ ಸ್ಥಳದಲ್ಲಿ ನಟಿಯ ಬೆತ್ತಲೆ ಫೋಟೋಶೂಟ್​ ಕೇಸ್​; ಪೂನಂ ಪಾಂಡೆ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ
Image
ಇನ್​ಸ್ಟಾಗ್ರಾಂ ಲೈವ್​ ಬರಲು ಮುಂದಾದ ಮಡೋನ್ನಗೆ ಶಾಕ್; ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದ ಪಾಪ್ ತಾರೆಗೆ ನಿರ್ಬಂಧದ ಬರೆ

ರಣವೀರ್​ ಸಿಂಗ್​ ಅವರ ಬೆತ್ತಲೆ ಫೋಟೋ ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ‘ಹೆಚ್ಚು ಹಣ ಗಳಿಸುವ ಉದ್ದೇಶದಿಂದ ರಣವೀರ್ ಸಿಂಗ್​ ಅವರು ಪೇಪರ್​ ಮ್ಯಾಗಜಿನ್​ಗೆ ಬೆತ್ತಲೆಯಾಗಿ ಪೋಸ್​ ನೀಡಿ, ಆ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಮಕ್ಕಳ ಮೇಲೆ ಹಾಗೂ ಸಮಾಜದ ಮೇಲೆ ಅವರು ಕೆಟ್ಟ ಪರಿಣಾಮ ಬೀರಿದ್ದಾರೆ. ಇದರಿಂದಾಗಿ ಮಹಿಳೆಯರ ಸಭ್ಯತೆಗೆ ಧಕ್ಕೆ ಆಗಿದೆ’ ಎಂದು ಹೇಳಲಾಗಿದೆ.

ಈ ರೀತಿ ಬೆತ್ತಲೆಯಾಗಿ ಪೋಸ್​ ನೀಡುವ ಮೂಲಕ ಅನೇಕ ಸೆಲೆಬ್ರಿಟಿಗಳು ಈ ಹಿಂದೆ ಕಾಂಟ್ರವರ್ಸಿ ಮಾಡಿಕೊಂಡಿದ್ದುಂಟು. ‘ನಟಿಸುವಾಗ ಬೆತ್ತಲಾಗುವುದು ನನಗೆ ತುಂಬ ಸುಲಭ. ಸಾವಿರಾರು ಜನರ ಎದುರಿನಲ್ಲಿ ನಾನು ನಗ್ನವಾಗಬಲ್ಲೆ. ಆದರೆ ಅವರಿಗೆ ಮುಜುಗರ ಆಗುತ್ತದೆ ಅಷ್ಟೇ’ ಎಂದು ರಣವೀರ್​ ಸಿಂಗ್​ ಅವರು ‘ಪೇಪರ್​ ಮ್ಯಾಗಜಿನ್​’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾರೆ ರಣವೀರ್​ ಸಿಂಗ್ ಅವರು ಸದ್ಯ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಹಾಗೂ ‘ಸರ್ಕಸ್​’ ಸಿನಿಮಾದಲ್ಲಿ ನಟಿಸುದ್ದಾರೆ. ನಗ್ನ ಪೋಟೋದ ಕಾರಣದಿಂದ ಅವರು ಈಗ ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

Published On - 1:41 pm, Tue, 26 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ