AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jennifer Lopez: ಬೆತ್ತಲೆ ಫೋಟೋ ಮೂಲಕ ಬರ್ತ್​ಡೇ ಆಚರಿಸಿಕೊಂಡ ನಟಿ ಜೆನಿಫರ್​ ಲೋಪೆಜ್​

Jennifer Lopez Photo: ನಟ ರಣವೀರ್​ ಸಿಂಗ್​ ಅವರು ಇತ್ತೀಚೆಗೆ ನಗ್ನವಾಗಿ ಪೋಸ್​ ನೀಡುವ ಮೂಲಕ ಟೀಕೆಗೆ ಒಳಗಾಗಿದ್ದರು. ಈಗಿನದ್ದು ಜೆನಿಫರ್​ ಲೋಪೆಜ್​ ಸರದಿ.

Jennifer Lopez: ಬೆತ್ತಲೆ ಫೋಟೋ ಮೂಲಕ ಬರ್ತ್​ಡೇ ಆಚರಿಸಿಕೊಂಡ ನಟಿ ಜೆನಿಫರ್​ ಲೋಪೆಜ್​
ಜೆನಿಫರ್ ಲೋಪೆಜ್
TV9 Web
| Edited By: |

Updated on:Jul 25, 2022 | 10:59 AM

Share

ನಟಿ, ಗಾಯಕಿ ಜೆನಿಫರ್​ ಲೋಪೆಜ್​ (Jennifer Lopez) ಅವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 20 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಾರೆ. ಸಿನಿಮಾ, ಸಂಗೀತ ಮಾತ್ರವಲ್ಲದೇ ವೈಯಕ್ತಿಕ ಕಾರಣದಿಂದಲೂ ಜೆನಿಫರ್​ ಲೋಪೆಜ್​ ಅವರು ಆಗಾಗ ಸುದ್ದಿ ಆಗುತ್ತಾರೆ. ಈ ಖ್ಯಾತ ನಟಿಗೆ ಜುಲೈ 24ರಂದು ಹುಟ್ಟುಹಬ್ಬದ ಸಂಭ್ರಮ. ಆ ಪ್ರಯುಕ್ತ ಎಲ್ಲರೂ ಅವರಿಗೆ ಶುಭಾಶಯ ಕೋರಿದ್ದಾರೆ. 53ನೇ ವಸಂತಕ್ಕೆ ಅವರು ಕಾಲಿಟ್ಟಿದ್ದಾರೆ. ಅಚ್ಚರಿ ಎಂದರೆ, ಈ ವಿಶೇಷ ದಿನದಂದು ಜೆನಿಫರ್​ ಲೋಪೆಜ್​ ಅವರು ಬೆತ್ತಲೆ ಫೋಟೋ (Jennifer Lopez Photo) ಹಂಚಿಕೊಂಡಿದ್ದಾರೆ! ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನೆಟ್ಟಿಗರು ಇದನ್ನು ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಇತ್ತೀಚೆಗೆ ನಟ ರಣವೀರ್​ ಸಿಂಗ್​ (Ranveer Singh) ಕೂಡ ಇದೇ ರೀತಿ ನಗ್ನವಾಗಿ ಪೋಸ್​ ನೀಡುವ ಮೂಲಕ ಟೀಕೆಗೆ ಒಳಗಾಗಿದ್ದರು. ಈಗಿನದ್ದು ಜೆನಿಫರ್​ ಲೋಪೆಜ್​ ಸರದಿ.

ಹಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ಜೆನಿಫರ್ ಲೋಪೆಜ್​ ಅವರು ಅನೇಕ ಪ್ರತಿಷ್ಠಿತ ಕಂಪನಿಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಅವುಗಳಿಂದಲೂ ಅವರಿಗೆ ಕೋಟ್ಯಂತರ ರೂಪಾಯಿ ಹಣ ಸಿಗುತ್ತದೆ. ಬರ್ತ್​ಡೇ ಪ್ರಯುಕ್ತ ಅವರು ಒಂದು ಸ್ಕಿನ್​​ ಕೇರ್​ ಉತ್ಪನ್ನದ ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಆ ಜಾಹೀರಾತಿನ ಸಲುವಾಗಿಯೇ ಅವರು ಬೆತ್ತಲಾಗಿ ಪೋಸ್​ ನೀಡಿದ್ದಾರೆ.

ಇದನ್ನೂ ಓದಿ
Image
‘ಯಾಕೆ ಬೆತ್ತಲೆಯಾಗಿ ತಿರುಗುತ್ತೀಯಾ’ ಅಂತ ಫ್ರೆಂಡ್ಸ್​ ಕೇಳಿದ್ರು, ಬಾಯ್​ಫ್ರೆಂಡ್​ ಬಿಟ್ಟುಹೋದ; ನಟಿ ನಿಯಾ ಬೇಸರದ ಕಥೆ
Image
‘ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್​ ಮಾಡಿಸಿದ್ದರು, ನಾನು ನೆಲದಮೇಲೆ ಬಿಕ್ಕಿಬಿಕ್ಕಿ ಅತ್ತಿದೆ’; ಕುಬ್ರಾ ಸೇಠ್​
Image
ನಗ್ನವಾಗಿ ಲೈವ್​ ಬಂದ ನಟಿ ಗೆಹನಾ; ಜನರಿಗೆ ಸವಾಲು ಹಾಕಿದ ಅಶ್ಲೀಲ ಸಿನಿಮಾ ಆರೋಪಿ
Image
ಬಿಗ್​ ಬಾಸ್​ ಮನೆಯಲ್ಲಿ ಬೆತ್ತಲೆ ಯೋಗ; ದಿನಕ್ಕೆ 50 ಲಕ್ಷ ಸಂಭಾವನೆ ಕೇಳಿದ ಸ್ಪರ್ಧಿ

53 ವರ್ಷ ವಯಸ್ಸಾಗಿದ್ದರೂ ಕೂಡ ಜೆನಿಫರ್​ ಲೋಪೆಜ್​ ಅವರು ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಗ್ಲಾಮರಸ್​ ಆಗಿ ಅವರು ಫೋಟೋಶೂಟ್​ ಮಾಡಿಸುತ್ತಾರೆ. ಅವರ ಚೆಲುವಿಗೆ ಕೋಟ್ಯಂತರ ಮಂದಿ ಮಾರುಹೋಗಿದ್ದಾರೆ. ಈ ವಯಸ್ಸಿನಲ್ಲಿ ಹದಿಹರೆಯದ ಹುಡುಗಿಯರನ್ನೂ ನಾಚಿಸುವಂತಿರುವ ಜೆನಿಫರ್​ ಲೋಪೆಜ್​ಗೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ. ಕೆಲವರು ಈ ಫೋಟೋ ಕಂಡು ಟ್ರೋಲ್​ ಕೂಡ ಮಾಡಿದ್ದಾರೆ.

View this post on Instagram

A post shared by Jennifer Lopez (@jlo)

ಕೆಲವೇ ದಿನಗಳ ಹಿಂದೆ ನಟ ರಣವೀರ್​ ಸಿಂಗ್​ ಕೂಡ ನಗ್ನವಾಗಿ ಪೋಸ್​ ನೀಡಿದ್ದರು. ‘ಪೇಪರ್​ ಮ್ಯಾಗಜಿನ್​’ ಸಲುವಾಗಿ ಅವರು ಆ ರೀತಿ ಫೋಟೋಶೂಟ್​ ಮಾಡಿಸಿದ್ದರು. ಆ ಸಂಚಿಕೆಯಲ್ಲಿ ಅವರ ಸಂದರ್ಶನ ಕೂಡ ಪ್ರಕಟ ಆಗಿತ್ತು. ‘ನಟಿಸುವಾಗ ಬೆತ್ತಲಾಗುವುದು ನನಗೆ ತುಂಬ ಸುಲಭ. ಸಾವಿರಾರು ಜನರ ಎದುರಿನಲ್ಲಿ ನಾನು ನಗ್ನವಾಗಬಲ್ಲೆ. ಆದರೆ ಅವರಿಗೆ ಮುಜುಗರ ಆಗುತ್ತದೆ ಅಷ್ಟೇ’ ಎಂದು ರಣವೀರ್​ ಸಿಂಗ್​ ಹೇಳಿದ್ದರು.

Published On - 10:59 am, Mon, 25 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್