Ranveer Singh: ಸಂಪೂರ್ಣ ಬೆತ್ತಲಾದ ರಣವೀರ್​ ಸಿಂಗ್​; ದೀಪಿಕಾ ಪಡುಕೋಣೆ ಪತಿಯ ಹಲವು ಫೋಟೋ ವೈರಲ್​

Ranveer Singh Viral Photo: ರಣವೀರ್​ ಸಿಂಗ್ ಅವರು ಪೂರ್ತಿ ನಗ್ನವಾಗಿ ಪೋಸ್​ ನೀಡಿದ್ದಾರೆ. ಅವರ ಈ ಅವತಾರ ಕಂಡು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

Ranveer Singh: ಸಂಪೂರ್ಣ ಬೆತ್ತಲಾದ ರಣವೀರ್​ ಸಿಂಗ್​; ದೀಪಿಕಾ ಪಡುಕೋಣೆ ಪತಿಯ ಹಲವು ಫೋಟೋ ವೈರಲ್​
ರಣವೀರ್ ಸಿಂಗ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 22, 2022 | 9:58 AM

ಇಷ್ಟು ದಿನಗಳ ಕಾಲ ನಟ ರಣವೀರ್​ ಸಿಂಗ್​ (Ranveer Singh) ಅವರು ಬಟ್ಟೆಗಳ ವಿಚಾರದಲ್ಲಿ ಗಮನ ಸೆಳೆಯುತ್ತಿದ್ದರು. ಆದರೆ ಈಗ ಅವರು ಬಟ್ಟೆಗಳೇ ಇಲ್ಲದೇ ಸುದ್ದಿ ಆಗಿದ್ದಾರೆ. ಅಂದರೆ, ಕಿಂಚಿತ್ತೂ ಬಟ್ಟೆ ಧರಿಸದೇ ಕಾಣಿಸಿಕೊಂಡಿದ್ದಾರೆ! ಹೌದು, ಸಂಪೂರ್ಣ ಬೆತ್ತಲಾಗಿ ಅವರು ಪೋಸ್​ ನೀಡಿದ್ದಾರೆ. ಅವರ ಅನೇಕ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಸ್ಟಾರ್​ ನಟನ ಈ ನಡೆಯನ್ನು ಅನೇಕರು ಖಂಡಿಸಿದ್ದಾರೆ. ಕಮೆಂಟ್​ ಬಾಕ್ಸ್​ನಲ್ಲಿ ದೀಪಿಕಾ ಪಡುಕೋಣೆ (Deepika Padukone) ಅವರ ಗಮನ ಸೆಳೆಯಲು ನೆಟ್ಟಿಗರು ಪ್ರಯತ್ನಿಸಿದ್ದಾರೆ. ಅಂದಹಾಗೆ, ರಣವೀರ್​ ಸಿಂಗ್​ ಅವರು ಈ ರೀತಿ ಬೆತ್ತಲಾಗಿ ಪೋಸ್ ನೀಡಿರುವುದು ‘ಪೇಪರ್​’ ಮ್ಯಾಗಜಿನ್ (Paper magazine)​ ಮುಖಪುಟಕ್ಕಾಗಿ. ಇದರ ಹೊಸ ಸಂಚಿಕೆಯಲ್ಲಿ ನಗ್ನ ಫೋಟೋಗಳ ಜೊತೆಗೆ ರಣವೀರ್​ ಸಿಂಗ್​ ಅವರ ಸಂದರ್ಶನ ಕೂಡ ಪ್ರಕಟ ಆಗಿದೆ.

ರಣವೀರ್​ ಸಿಂಗ್​ ಅವರು ನೇರ ನಡೆ-ನುಡಿಯ ಕಾರಣದಿಂದ ಫೇಮಸ್​ ಆಗಿದ್ದಾರೆ. ತಮಗೆ ಇಷ್ಟಬಂದ ರೀತಿಯಲ್ಲಿ ಅವರು ಬಟ್ಟೆ ಧರಿಸುತ್ತಾರೆ. ಎಷ್ಟೇ ಟ್ರೋಲ್​ ಆದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಬಾರಿ ಅವರು ಬಟ್ಟೆಯನ್ನೇ ಧರಿಸಿಲ್ಲ. ಹೀಗೆ ಸಂಪೂರ್ಣ ಬೆತ್ತಲಾಗಿ ಅವರು ಪೋಸ್​ ನೀಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಉಂಟುಮಾಡಿದೆ.

ಇದನ್ನೂ ಓದಿ
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Ranveer Singh: ರಣವೀರ್​ ಸಿಂಗ್​ ಒಟ್ಟು ಆಸ್ತಿ ಎಷ್ಟು? 2 ಸಿನಿಮಾ ಸೋತ ಮಾತ್ರಕ್ಕೆ ಕರಗಿಲ್ಲ ಸ್ಟಾರ್​ ನಟನ ನೂರಾರು ಕೋಟಿ ಸಂಪತ್ತು
Image
ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ರಣವೀರ್​ ಸಿಂಗ್​ ಹೊಸ ಸಿನಿಮಾ ಲೀಕ್​; ‘ಜಯೇಶ್​ಭಾಯ್​’ಗೆ 2 ಆಘಾತ
Image
ರಣವೀರ್​ ಸಿಂಗ್​ ಹೀಗೆಲ್ಲ ಚಿತ್ರ-ವಿಚಿತ್ರ ಬಟ್ಟೆ ಹಾಕೋದು ಯಾಕೆ? ಕಡೆಗೂ ಸತ್ಯ ಬಾಯ್ಬಿಟ್ಟ ನಟ

‘ನಟಿಸುವಾಗ ಬೆತ್ತಲಾಗುವುದು ನನಗೆ ತುಂಬ ಸುಲಭ. ಸಾವಿರಾರು ಜನರ ಎದುರಿನಲ್ಲಿ ನಾನು ನಗ್ನವಾಗಬಲ್ಲೆ. ಆದರೆ ಅವರಿಗೆ ಮುಜುಗರ ಆಗುತ್ತದೆ ಅಷ್ಟೇ’ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ. ಹಲವಾರು ಟ್ರೋಲ್​ ಪೇಜ್​ಗಳಲ್ಲಿ ಈ ಫೋಟೋಗಳನ್ನು ಶೇರ್​ ಮಾಡಿಕೊಳ್ಳಲಾಗಿದೆ. ಅನೇಕರು ನೆಗೆಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ‘ದೀಪಿಕಾ ಪಡುಕೋಣೆ ಅವರೇ.. ಈ ಕಡೆ ಸ್ವಲ್ಪ ನೋಡಿ’ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ರಣವೀರ್​ ಸಿಂಗ್ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಗೆಲುವು ಸಿಕ್ಕಿಲ್ಲ. ಅವರು ನಟಿಸಿದ ‘83’ ಮತ್ತು ‘ಜಯೇಶ್​ಭಾಯ್​ ಜೋರ್ದಾರ್​’ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಹೇಳಿಕೊಳ್ಳುವಷ್ಟು ಕಮಾಯಿ ಮಾಡಿಲ್ಲ. ಈಗ ಅವರು ‘ಸರ್ಕಸ್’ ಮತ್ತು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ​ ನಟಿಸುತ್ತಿದ್ದಾರೆ.

Published On - 9:43 am, Fri, 22 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ