Ranveer Singh: ರಣವೀರ್​ ಸಿಂಗ್​ ಒಟ್ಟು ಆಸ್ತಿ ಎಷ್ಟು? 2 ಸಿನಿಮಾ ಸೋತ ಮಾತ್ರಕ್ಕೆ ಕರಗಿಲ್ಲ ಸ್ಟಾರ್​ ನಟನ ನೂರಾರು ಕೋಟಿ ಸಂಪತ್ತು

Ranveer Singh Net Worth: ಜಾಹೀರಾತುಗಳಲ್ಲಿ ನಟಿಸುವ ಮೂಲಕ ರಣವೀರ್​ ಸಿಂಗ್​ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಬಾಲಿವುಡ್​ನಲ್ಲಿ ಅವರಿಗೆ ಸಖತ್​ ಬೇಡಿಕೆ ಇದೆ.

Ranveer Singh: ರಣವೀರ್​ ಸಿಂಗ್​ ಒಟ್ಟು ಆಸ್ತಿ ಎಷ್ಟು? 2 ಸಿನಿಮಾ ಸೋತ ಮಾತ್ರಕ್ಕೆ ಕರಗಿಲ್ಲ ಸ್ಟಾರ್​ ನಟನ ನೂರಾರು ಕೋಟಿ ಸಂಪತ್ತು
ರಣವೀರ್ ಸಿಂಗ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 06, 2022 | 8:59 AM

ನಟ ರಣವೀರ್​ ಸಿಂಗ್​ (Ranveer Singh) ಅವರು ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರ ಪ್ರತಿಭೆ ಏನು ಎಂಬುದು ಸಾಬೀತಾಗಿದೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ರಣವೀರ್​ ಸಿಂಗ್​ ನೀಡಿದ್ದಾರೆ. ಪ್ರತಿ ಸಿನಿಮಾಗೆ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುತ್ತದೆ. ಜಾಹೀರಾತು, ಬಿಸ್ನೆಸ್​ ಸೇರಿದಂತೆ ಹಲವು ಮೂಲಗಳಿಂದ ಅವರಿಗೆ ಆದಾಯ ಹರಿದುಬರುತ್ತದೆ. ರಣವೀರ್​ ಸಿಂಗ್​ ಅವರು ಒಟ್ಟು ಎಷ್ಟು ಆಸ್ತಿ (Ranveer Singh Net Worth) ಹೊಂದಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಪ್ರತಿ ವರ್ಷದ ಆದಾಯಕ್ಕೆ ಅನುಗುಣವಾಗಿ ಈ ಸಂಖ್ಯೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ರಣವೀರ್​ ಸಿಂಗ್ ಅವರು 223 ಕೋಟಿ ರೂಪಾಯಿಗಳ ಒಡೆಯ. ಅವರ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಕೂಡ ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಅವರ ಬಳಿಯೂ ಬಹುಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.

2010ರಿಂದಲೂ ರಣವೀರ್​ ಸಿಂಗ್​ ಅವರು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಬ್ಯಾಂಡ್​ ಬಾಜಾ ಬಾರಾತ್​’ ಸಿನಿಮಾದಿಂದ ಆರಂಭವಾದ ಅವರ ಬಣ್ಣದ ಲೋಕದ ಪಯಣ ಈವರೆಗೂ ಯಶಸ್ವಿಯಾಗಿ ಸಾಗಿ ಬಂದಿದೆ. ಇತ್ತೀಚಿಗೆ ರಿಲೀಸ್​ ಆದ ರಣವೀರ್​ ಸಿಂಗ್​ ಅವರ ಎರಡು ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಸೋತಿವೆ. ‘83’ ಹಾಗೂ ‘ಜಯೇಶ್​ ಭಾಯ್​ ಜೋರ್ದಾರ್​’ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಆಗಿಲ್ಲ. ಹಾಗೆಂದಮಾತ್ರಕ್ಕೆ ರಣವೀರ್​ ಸಿಂಗ್​ ಅವರ ಆಸ್ತಿ ಕಡಿಮೆ ಆಗಿಲ್ಲ.

ಅನೇಕ ಜಾಹೀರಾತುಗಳಲ್ಲಿ ನಟಿಸುವ ಮೂಲಕ ರಣವೀರ್​ ಸಿಂಗ್​ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಯಾವುದಾದರೂ ಬ್ರ್ಯಾಂಡ್​ ಅನ್ನು ಪ್ರಚಾರ ಮಾಡಿದರೂ ಅವರಿಗೆ ಕೈತುಂಬ ಸಂಬಳ ಸಿಗುತ್ತದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರ ಆದಾಯ ಸೇರಿದರೆ 330 ಕೋಟಿ ರೂಪಾಯಿಗೂ ಅಧಿಕ ಆಗಲಿದೆ. ಇಬ್ಬರೂ ಈಗ ಅನೇಕ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಏಷ್ಯಾದ ಶ್ರೀಮಂತ ಸೆಲೆಬ್ರಿಟಿ ದಂಪತಿಗಳ ಪಟ್ಟಿಯಲ್ಲಿ ಈ ಜೋಡಿಗೆ ನಾಲ್ಕನೇ ಸ್ಥಾನವಿದೆ.

ಇದನ್ನೂ ಓದಿ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

ಪ್ರಸ್ತುತ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದ ಶೂಟಿಂಗ್​ನಲ್ಲಿ ರಣವೀರ್​ ಸಿಂಗ್​ ತೊಡಗಿಕೊಂಡಿದ್ದಾರೆ. ಅತ್ತ ದೀಪಿಕಾ ಪಡುಕೋಣೆ ಅವರು ಶಾರುಖ್​ ಖಾನ್​ ಜೊತೆ ‘ಪಠಾಣ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸ್ಟಾರ್​ ದಂಪತಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಇದನ್ನೂ ಓದಿ: ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ರಣವೀರ್​ ಸಿಂಗ್​ ಹೊಸ ಸಿನಿಮಾ ಲೀಕ್​; ‘ಜಯೇಶ್​ಭಾಯ್​’ಗೆ 2 ಆಘಾತ

ರಣವೀರ್​ ಸಿಂಗ್​ ಹೀಗೆಲ್ಲ ಚಿತ್ರ-ವಿಚಿತ್ರ ಬಟ್ಟೆ ಹಾಕೋದು ಯಾಕೆ? ಕಡೆಗೂ ಸತ್ಯ ಬಾಯ್ಬಿಟ್ಟ ನಟ

Published On - 8:59 am, Wed, 6 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ