Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranveer Singh Birthday: ರಣವೀರ್ ಸಿಂಗ್​-ದೀಪಿಕಾ ಪಡುಕೋಣೆ ಮಧ್ಯೆ ಇರುವ ವಯಸ್ಸಿನ ಅಂತರವೆಷ್ಟು?

ದೀಪಿಕಾ ಪಡುಕೋಣೆ ಅಮೆರಿಕದಲ್ಲಿದ್ದಾರೆ. ಇತ್ತೀಚೆಗೆ ಕೊಂಕಣಿ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ರಣವೀರ್ ಸಿಂಗ್ ಕೂಡ ದೀಪಿಕಾ ಜತೆ ಬರ್ತ್​ಡೇ ಆಚರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕ್ಯಾಲಿಫೋರ್ನಿಯಾಗೆ ತೆರಳಿದ್ದಾರೆ.

Ranveer Singh Birthday: ರಣವೀರ್ ಸಿಂಗ್​-ದೀಪಿಕಾ ಪಡುಕೋಣೆ ಮಧ್ಯೆ ಇರುವ ವಯಸ್ಸಿನ ಅಂತರವೆಷ್ಟು?
ರಣವೀರ್​-ದೀಪಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 06, 2022 | 6:30 AM

ರಣವೀರ್ ಸಿಂಗ್ (Ranveer Singh) ಅವರು ಇಂದು (ಜುಲೈ 6) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ಅವರು ಬರ್ತ್​ಡೇಯನ್ನು(Ranveer Singh Birthday)  ಪತ್ನಿ ದೀಪಿಕಾ ಪಡುಕೋಣೆ (Deepika Padukone) ಜತೆ ಅಮೆರಿಕದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದ ದಿನ ರಣವೀರ್ ಹಾಗೂ ದೀಪಿಕಾ ಮಧ್ಯೆ ಇರುವ ವಯಸ್ಸಿನ ಅಂತರದ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹಾಗಾದರೆ, ರಣವೀರ್ ಹಾಗೂ ದೀಪಿಕಾ ಇಬ್ಬರಲ್ಲಿ ಹಿರಿಯರು ಯಾರು? ಆ ಪ್ರಶ್ನೆಗೆ ಈ ಸುದ್ದಿಯಲ್ಲಿದೆ ಉತ್ತರ.

ದೀಪಿಕಾ ಪಡುಕೋಣೆ ಅಮೆರಿಕದಲ್ಲಿದ್ದಾರೆ. ಇತ್ತೀಚೆಗೆ ಕೊಂಕಣಿ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ರಣವೀರ್ ಸಿಂಗ್ ಕೂಡ ದೀಪಿಕಾ ಜತೆ ಬರ್ತ್​ಡೇ ಆಚರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕ್ಯಾಲಿಫೋರ್ನಿಯಾಗೆ ತೆರಳಿದ್ದಾರೆ. ರಣವೀರ್ ಸಿಂಗ್​ಗೆ ಬರ್ತ್​ಡೇ ಪ್ರಯುಕ್ತ ಹಲವರಿಂದ ಶುಭಾಶಯಗಳು ಬರುತ್ತಿವೆ. ಸಾಕಷ್ಟು ಸೆಲೆಬ್ರಿಟಿಗಳು ರಣವೀರ್ ಸಿಂಗ್​ಗೆ ಬರ್ತ್​​ಡೇ ವಿಶ್​ ತಿಳಿಸುತ್ತಿದ್ದಾರೆ.

ರಣವೀರ್ ಹಾಗೂ ದೀಪಿಕಾ ಇವರಿಬ್ಬರಲ್ಲಿ ರಣವೀರ್ ಸಿಂಗ್​ ದೊಡ್ಡವರು. ರಣವೀರ್ ಸಿಂಗ್ ಜನಿಸಿದ್ದು 1985 ಜುಲೈ 6ರಂದು. ದೀಪಿಕಾ ಪಡುಕೋಣೆ ಹುಟ್ಟಿದ್ದು 1986 ಜನವರಿ 5ರಂದು. ವಯಸ್ಸಿನಲ್ಲಿ ದೀಪಿಕಾಗಿಂತ ರಣವೀರ್ ಸಿಂಗ್ 6 ತಿಂಗಳು ದೊಡ್ಡವರು.

ಇದನ್ನೂ ಓದಿ
Image
ಕೊಂಕಣಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದ ರಣವೀರ್ ಸಿಂಗ್​; ವಿಚಿತ್ರ ಕಾರಣ ವಿವರಿಸಿದ ದೀಪಿಕಾ ಪಡುಕೋಣೆ
Image
ಮಲಗಿದ್ದ ರಣವೀರ್ ಸಿಂಗ್ ಮೇಲೆ ದಾಳಿ ಮಾಡಲು ಬಂತು ಕರಡಿ; ಇದೆಂಥ ಹುಚ್ಚು ಸಾಹಸ?
Image
ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ರಣವೀರ್​ ಸಿಂಗ್​ ಹೊಸ ಸಿನಿಮಾ ಲೀಕ್​; ‘ಜಯೇಶ್​ಭಾಯ್​’ಗೆ 2 ಆಘಾತ

ರಣಬೀರ್ ಕಪೂರ್ ಜತೆ ದೀಪಿಕಾ ಪ್ರೀತಿಯಲ್ಲಿದ್ದರು. ಇಬ್ಬರ ಮಧ್ಯೆ ಬ್ರೇಕಪ್​ ಆದ ನಂತರ ರಣವೀರ್ ಜತೆ ದೀಪಿಕಾಗೆ ಪ್ರೀತಿ ಬೆಳೆಯಿತು. ರಣವೀರ್ ಹಾಗೂ ದೀಪಿಕಾ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸೆಟ್​ನಲ್ಲೇ ಇಬ್ಬರಿಗೂ ಪ್ರೀತಿ ಮೂಡಿತ್ತು. 2018ರಲ್ಲಿ ಇಬ್ಬರೂ ಇಟಲಿಯಲ್ಲಿ ಮದುವೆ ಆದರು. ಈಗ ಇಬ್ಬರೂ ಹಾಯಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ.

ರಣವೀರ್ ಸಿಂಗ್ ಅವರಿಗೆ ಇತ್ತೀಚೆಗೆ ಗೆಲುವು ಸಿಗುತ್ತಿಲ್ಲ. ‘83’ ಚಿತ್ರ ವಿಮರ್ಶೆಯಲ್ಲಿ ಗೆದ್ದರೂ ನಿರೀಕ್ಷಿತ ಮಟ್ಟದಲ್ಲಿ ದುಡ್ಡು ಮಾಡಿಲ್ಲ. ‘ಜಯೇಶ್​ಭಾಯ್​ ಜೋರ್ದಾರ್​’ ಹೀನಾಯ ಸೋಲು ಕಂಡಿತು. ‘ಸರ್ಕಸ್​’ ಹಾಗೂ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಕೆಲಸದಲ್ಲಿ ರಣವೀರ್ ಸಿಂಗ್ ಬ್ಯುಸಿ ಆಗಿದ್ದಾರೆ. ಬರ್ತ್​ಡೇ ಪ್ರಯುಕ್ತ ಸಿನಿಮಾ ಕೆಲಸಗಳಿಗೆ ಅವರು ಬ್ರೇಕ್ ನೀಡಿದ್ದಾರೆ. ಕೆಲ ದಿನಗಳ ಕಾಲ ಅವರು ದೀಪಿಕಾ ಜತೆ ಸಮಯ ಕಳೆಯಲಿದ್ದಾರೆ.

ಇದನ್ನೂ ಓದಿ: ಮಲಗಿದ್ದ ರಣವೀರ್ ಸಿಂಗ್ ಮೇಲೆ ದಾಳಿ ಮಾಡಲು ಬಂತು ಕರಡಿ; ಇದೆಂಥ ಹುಚ್ಚು ಸಾಹಸ?

ಕೊಂಕಣಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದ ರಣವೀರ್ ಸಿಂಗ್​; ವಿಚಿತ್ರ ಕಾರಣ ವಿವರಿಸಿದ ದೀಪಿಕಾ ಪಡುಕೋಣೆ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​