ಗುಟ್ಕಾ ಜಾಹೀರಾತಿನಲ್ಲಿ ಅಕ್ಷಯ್​, ಅಜಯ್​, ಶಾರುಖ್​ ನಟಿಸಿದ್ದು ತಪ್ಪಲ್ಲ ಎಂದ ಮತ್ತೊಬ್ಬ ನಟ

Akshay Kumar | Ajay Devgn: ‘ಜಾಹೀರಾತು ಎಂಬುದು ಪ್ರತಿಯೊಬ್ಬ ನಟನ ವೈಯಕ್ತಿಕ ಆಯ್ಕೆ. ಅವರು ಸಿನಿಮಾ ನಟರೇ ಹೊರತು ನೀತಿ ಪಾಠದ ಶಿಕ್ಷಕರಲ್ಲ’ ಎಂದು ಮಿಷ್ಕತ್​ ವರ್ಮಾ ಹೇಳಿದ್ದಾರೆ.

ಗುಟ್ಕಾ ಜಾಹೀರಾತಿನಲ್ಲಿ ಅಕ್ಷಯ್​, ಅಜಯ್​, ಶಾರುಖ್​ ನಟಿಸಿದ್ದು ತಪ್ಪಲ್ಲ ಎಂದ ಮತ್ತೊಬ್ಬ ನಟ
ಅಕ್ಷಯ್ ಕುಮಾರ್, ಅಜಯ್​ ದೇವಗನ್​, ಶಾರುಖ್ ಖಾನ್
TV9kannada Web Team

| Edited By: Madan Kumar

Jul 05, 2022 | 9:17 AM

ಸಿನಿಮಾ, ಸೀರಿಯಲ್​, ಕ್ರೀಡೆ ಮುಂತಾದ ಕ್ಷೇತ್ರಗಳ ಸೆಲೆಬ್ರಿಟಿಗಳು ಕೈತುಂಬ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಲ್ಲಿ ನಟಿಸಿದರೆ ಅವರಿಗೆ ಸಿಕ್ಕಾಪಟ್ಟೆ ಹಣ ಸಿಗುತ್ತದೆ. ಆದರೆ ಯಾವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬೇಕು ಅಥವಾ ಕಾಣಿಸಿಕೊಳ್ಳಬಾರದು ಎಂಬುದರ ಮೇಲೆ ಅವರು ಕೆಲವು ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ನಟ ಅಕ್ಷಯ್​ ಕುಮಾ​ರ್​  (Akshay Kumar) ಅವರು ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಜನರಿಂದ ತೀವ್ರ ಟೀಕೆಗೆ ಗುರಿ ಆಗಬೇಕಾಯಿತು. ಅವರ ರೀತಿಯೇ ಅಜಯ್​ ದೇವಗನ್​ ಮತ್ತು ಶಾರುಖ್​ ಖಾನ್​ (Shah Rukh Khan) ಕೂಡ ಅದೇ ಜಾಹೀರಾತಿನಲ್ಲಿ ನಟಿಸಿದ್ದಾರೆ. ಆದರೆ ಅವರು ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ. ನಟರು ಇಂಥ ಜಾಹೀರಾತುಗಳಲ್ಲಿ ಅಭಿನಯಿಸುವುದು ತಪ್ಪಲ್ಲ ಎಂದು ಹಿಂದಿ ಕಿರುತೆರೆಯ ಜನಪ್ರಿಯ ನಟ ಮಿಷ್ಕತ್​ ವರ್ಮಾ (Mishkat Verma) ಹೇಳಿದ್ದಾರೆ. ಅವರ ಈ ಹೇಳಿಕೆ ಈಗ ಚರ್ಚೆ ಹುಟ್ಟುಹಾಕಿದೆ.

ಮೊದಲು ಜಾಹೀರಾತು ಕ್ಷೇತ್ರದಲ್ಲಿ ಮಿಂಚಿದವರು ಮಿಷ್ಕತ್ ವರ್ಮಾ. ಬಳಿಕ ಅವರಿಗೆ ಕಿರುತೆರೆಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡರು. ಕೆಲವು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಜನರ ಟೀಕೆಗೆ ಒಳಗಾಗಬೇಕಾಗುತ್ತದೆ ಎಂಬುದು ಅವರಿಗೂ ತಿಳಿದಿದೆ. ಆದರೆ ಈ ಬಗ್ಗೆ ಅವರು ಬೇರೆಯದೇ ಅಭಿಪ್ರಾಯ ಹೊಂದಿದ್ದಾರೆ.

‘ಇದು ಪ್ರತಿಯೊಬ್ಬ ನಟನ ವೈಯಕ್ತಿಕ ಆಯ್ಕೆ. ಅವರು ಸಿನಿಮಾ ನಟರೇ ಹೊರತು ನೀತಿ ಪಾಠದ ಶಿಕ್ಷಕರಲ್ಲ. ವೀಕ್ಷಕರು ಕೂಡ ತಮ್ಮ ಬುದ್ಧಿ ಉಪಯೋಗಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿರುವ ಓರ್ವ ಹೀರೋ ತಂಬಾಕಿನ ಜಾಹೀರಾತಿನಲ್ಲಿ ನಟಿಸಿದಾಗ ಅದನ್ನೇ ಗುರಿಯಾಗಿಸಿಕೊಂಡು ನೀವು ಅವರನ್ನು ಜಡ್ಜ್​ ಮಾಡಿದರೆ ಅದು ನಿಮ್ಮ ತಪ್ಪು’ ಎಂದು ಮಿಷ್ಕತ್ ವರ್ಮಾ ಹೇಳಿದ್ದಾರೆ.

‘ಶಾರುಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಅವರು ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ಅವರು ಅನೇಕ ಸಮಾಜಮುಖಿ ಕೆಲಸ ಮಾಡಿದ್ದಾರೆ. ಅವರನ್ನು ಟೀಕಿಸಬೇಕು ಎಂಬ ಕಾರಣಕ್ಕೆ ಒಂದು ಜಾಹೀರಾತಿನ ವಿಷಯವನ್ನೇ ಗುರಿಯಾಗಿಸಿಕೊಳ್ಳಬಾರದು. ಆ ನಟರು ಒಳ್ಳೆಯ ಕಾರ್ಯಗಳನ್ನೂ ಮಾಡಿದ್ದಾರೆ. ಅದನ್ನು ಜನರು ನೋಡಬೇಕು’ ಎಂಬುದು ಮಿಷ್ಕತ್ ವರ್ಮಾ ಅಭಿಪ್ರಾಯ.

ಜನರಿಂದ ಭಾರಿ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಅಕ್ಷಯ್​ ಕುಮಾರ್ ಅವರು ವಿಮಲ್​ ಪಾನ್​ ಮಸಾಲಾ ಜಾಹೀರಾತಿನಲ್ಲಿ ಇನ್ಮುಂದೆ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿದರು. ಒಪ್ಪಂದದ ಅವಧಿ ಮುಗಿಯುವವರೆಗೆ ಅವರ ಈ ಜಾಹೀರಾತು ಪ್ರಸಾರ ಆಗಲಿದೆ.

ಇದನ್ನೂ ಓದಿ: Viral: ವಿಮಾನದ ಕಿಟಕಿ ಬಳಿ ಗುಟ್ಕಾ ಚಿತ್ತಾರ, ಥೂ ಅಸಹ್ಯ ಎಂದ ನೆಟ್ಟಿಗರಿಂದ ಟ್ರೋಲ್​ಗಳ ಸುರಿಮಳೆ

ಇದನ್ನೂ ಓದಿ

Akshay Kumar: ರಾಜಕೀಯಕ್ಕೆ ಬರುತ್ತಾರಾ ಅಕ್ಷಯ್​ ಕುಮಾರ್​? ನೇರ ಪ್ರಶ್ನೆಗೆ ಉತ್ತರಿಸಿದ ‘ಕಿಲಾಡಿ’ ನಟ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada