Viral: ವಿಮಾನದ ಕಿಟಕಿ ಬಳಿ ಗುಟ್ಕಾ ಚಿತ್ತಾರ, ಥೂ ಅಸಹ್ಯ ಎಂದ ನೆಟ್ಟಿಗರಿಂದ ಟ್ರೋಲ್ಗಳ ಸುರಿಮಳೆ
ಇಂಥದ್ದೇ ಹಲವು ಚಿತ್ರಗಳು ಮತ್ತು ತಮಾಷೆ ಮೀಮ್ಗಳೊಂದಿಗೆ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಹಲವರು ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ.
ಬಸ್ ಪಕ್ಕದಲ್ಲಿ ಹೋಗುತ್ತಿರುವಾಗ ಕಿಟಕಿಯಿಂದ ಪಿಚಕ್ಕನೆ ತೂರಿಬರುವ ಕೆಂಪು ದ್ರವ ನಿಮ್ಮ ಬಟ್ಟೆಯನ್ನು ಹಾಳು ಮಾಡಿದ್ದು ನಿಮಗಿನ್ನೂ ನೆನಪಿರಬಹುದು. ಬಸ್ಗಳ ಕಿಟಕಿ ಸುತ್ತಮುತ್ತಲ ಜಾಗ, ಕಂಬಿಗಳ ಮೇಲೆ ಗುಟ್ಕಾದ (Gutka) ಉಗುಳಿನ ಅಸಹ್ಯದ ಚಿತ್ತಾರಗಳು ಸಾಮಾನ್ಯ ಎನಿಸಿಕೊಂಡಿವೆ. ಆದರೆ ಇಂಥದ್ದೇ ಅನುಭವ ವಿಮಾನದಲ್ಲಿಯೂ ಆದರೆ ಹೇಗಿರಬೇಡ? ವಿಮಾನದ ಕಿಟಕಿ ಬಳಿ ಗುಟ್ಕಾ ಚಿತ್ತಾರ ಕಂಡ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅದರ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇಂಥದ್ದೇ ಹಲವು ಚಿತ್ರಗಳು ಮತ್ತು ತಮಾಷೆ ಮೀಮ್ಗಳೊಂದಿಗೆ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಹಲವರು ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ.
ತಾವು ಪ್ರವಾಸ ಹೊರಟಿದ್ದ ಸಂದರ್ಭದಲ್ಲಿ ಕಿಟಕಿಯ ಚಿತ್ರ ತೆಗೆದು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆದರೆ ನೆಟಿಜನ್ನರು ಚಿತ್ರದಲ್ಲಿದ್ದ ಮತ್ತೊಂದು ಅಂಶದತ್ತ ಹೆಚ್ಚು ಗಮನ ಕೊಟ್ಟಿದ್ದಾರೆ. ಕಿಟಕಿಯ ಕೆಳಗೆ ಗುಟ್ಕಾದ ದೊಡ್ಡ ಚಿತ್ತಾರ ಮೂಡಿದೆ. ಇಲ್ಲಿ ಕುಳಿತಿದ್ದ ಯಾರೋ ಒಬ್ಬರು ತಮ್ಮ ಕುರುಹು ಉಳಿಸಿ ಹೋಗಿದ್ದಾರೆ ಎಂದು ನೆಟಿಜನ್ನರು ವ್ಯಂಗ್ಯವಾಡಿದ್ದಾರೆ.
ಕಳೆದ ಕೆಲ ದಿನಗಳಿಂದಲೂ ಈ ಚಿತ್ರವು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಈವರೆಗೆ 11 ಸಾವಿರ ಲೈಕ್ಸ್ ಮತ್ತು ಸಾವಿರಾರು ಪ್ರತಿಕ್ರಿಯೆಗಳು ಈ ಚಿತ್ರಕ್ಕೆ ಬಂದಿವೆ.
‘ಇದೆಂಥ ಅಸಹ್ಯ’ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಹೀಗೆ ಮಾಡಿದವರು ಯಾರು ಎಂದು ಪತ್ತೆಹೆಚ್ಚಿ, ದುಬಾರಿ ದಂಡ ವಿಧಿಸಬೇಕು’ ಎಂದು ಕೆಲವರು ಬರೆದಿದ್ದಾರೆ. ‘ಸೂಪರ್ಸ್ಟಾರ್ಗಳೇ ತಂಬಾಕು ಉತ್ಪನ್ನಗಳನ್ನು ಶಿಫಾರಸು ಮಾಡುತ್ತಿರುವುದರಿಂದ ಹೆಚ್ಚಿನ ಜನರು ಈ ಅಪಾಯಕಾರಿ ಗುಟ್ಕಾ ಬಳಕೆಗೆ ಮುಂದಾಗುತ್ತಿದ್ದಾರೆ. ಅಂಥ ಸೂಪರ್ಸ್ಟಾರ್ಗಳಿಗೆ ಎಚ್ಚರಿಕೆ ನೀಡಬೇಕು’ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಚಿತ್ರಕ್ಕೆ ಇಂಟರ್ನೆಟ್ ಬಳಕೆದಾರರ ಪ್ರತಿಕ್ರಿಯೆ ಹೀಗಿದೆ…
अपनी पहचान छोड़ दी किसी ने. pic.twitter.com/xsl68VfhH1
— Awanish Sharan (@AwanishSharan) May 25, 2022
Hefty fine which should be lesson and a deterrent. Confiscate all travel points/ rewards. Consider banning from any air travel for at least a year.
— Vivek Bhatnagar (@VivekBhatnaga20) May 26, 2022
Lovely gesture @airvistara (chewing gum) Highly hygienic experience pic.twitter.com/GJzoRjK5BX
— MahE (@MahE_1304) May 26, 2022
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 am, Fri, 27 May 22