AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಒನ್-ನೈಟ್ ಸ್ಟ್ಯಾಂಡ್ ಮಾಡಿದ್ದೆ’; ಹೀಗೆ ಒಪ್ಪಿಕೊಂಡ ಸೆಲೆಬ್ರಿಟಿಗಳು ಇವರೇ ನೋಡಿ

ರಣವೀರ್ ಸಿಂಗ್ ಅವರು ಎಲ್ಲಾ ವಿಚಾರಗಳನ್ನು ಓಪನ್ ಆಗಿಯೇ ಮಾತನಾಡುತ್ತಾರೆ. ಅವರು ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಮಾತನಾಡಿದ್ದರು.

‘ನಾನು ಒನ್-ನೈಟ್ ಸ್ಟ್ಯಾಂಡ್ ಮಾಡಿದ್ದೆ’; ಹೀಗೆ ಒಪ್ಪಿಕೊಂಡ ಸೆಲೆಬ್ರಿಟಿಗಳು ಇವರೇ ನೋಡಿ
‘ನಾನು ಒನ್-ನೈಟ್ ಸ್ಟ್ಯಾಂಡ್ ಮಾಡಿದ್ದೆ’; ಹೀಗೆ ಒಪ್ಪಿಕೊಂಡ ಸೆಲೆಬ್ರಿಟಿಗಳು ಇವರೇ ನೋಡಿ
TV9 Web
| Edited By: |

Updated on: Jul 04, 2022 | 8:54 PM

Share

‘ಒನ್ ನೈಟ್ ಸ್ಟ್ಯಾಂಡ್’– ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯ ಇದೆ. ಈ ಬಗ್ಗೆ ಅನೇಕರು ಓಪನ್ ಆಗಿ ಮಾತನಾಡುತ್ತಾರೆ. ಸೆಲೆಬ್ರಿಟಿಗಳ ವಲಯದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಕೆಲವರು ಈ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ. ಒನ್ ನೈಟ್ ಸ್ಟ್ಯಾಂಡ್​ಗೆ ಕನ್ನಡದಲ್ಲಿ ‘ಒಂದು ರಾತ್ರಿಯ ಸಂಬಂಧ’ ಎಂದು ಕರೆಯಬಹುದು. ದೈಹಿಕ ಸಂಪರ್ಕಕ್ಕಾಗಿ ಗಂಡು-ಹೆಣ್ಣು ಒಂದು ರಾತ್ರಿ ಸೇರುತ್ತಾರೆ. ಈ ವೇಳೆ ಅವರಿಗೆ ಯಾವುದೇ ಕಮಿಟ್​ಮೆಂಟ್ ಇರುವುದಿಲ್ಲ. ರಾತ್ರಿ ಕಳೆದ ನಂತರ ಇಬ್ಬರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಹೀಗಾಗಿ, ಯಾವುದೇ ಸಂಬಂಧ ಅಥವಾ ಬದ್ಧತೆ ಇಲ್ಲದೆ ನಡೆಯುವ ದೈಹಿಕ ಸಂಪರ್ಕಕ್ಕೆ ‘ಒನ್ ನೈಟ್ ಸ್ಟ್ಯಾಂಡ್’ (one-night stands) ಎನ್ನಬಹುದು. ಹಾಗಾದರೆ, ಈ ಬಗ್ಗೆ ಓಪನ್ ಆಗಿ ಮಾತನಾಡಿದ ಸೆಲೆಬ್ರಿಟಿಗಳು ಯಾರು? ಇಲ್ಲಿದೆ ವಿವರ.

ರಣವೀರ್ ಸಿಂಗ್ ಅವರು ಎಲ್ಲಾ ವಿಚಾರಗಳನ್ನು ಓಪನ್ ಆಗಿಯೇ ಮಾತನಾಡುತ್ತಾರೆ. ಅವರು ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಮಾತನಾಡಿದ್ದರು. ಅವರು ಒನ್​ ನೈಟ್​ ಸ್ಟ್ಯಾಂಡ್ ಮಾಡಿದ ಬಗ್ಗೆ ‘ಕಾಫಿ ವಿತ್ ಕರಣ್​’ ಶೋನಲ್ಲಿ ಒಪ್ಪಿಕೊಂಡಿದ್ದರು.

ಶೆರ್ಲಿನ್ ಚೋಪ್ರಾ ಅವರು ಬೋಲ್ಡ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಾರೆ. ಅವರು ಒಂದು ರಾತ್ರಿಯ ಸಂಬಂಧದ ಬಗ್ಗೆ ಮಾತನಾಡಿದ್ದರು. ಒನ್​ ನೈಟ್ ಸ್ಟ್ಯಾಂಡ್ ಮಾಡಿದ ವ್ಯಕ್ತಿಯ ಜತೆ ಅವರಿಗೆ ರಿಲೇಶನ್​ಶಿಪ್​ ಬೆಳೆಯಿತು. ಆದರೆ, ಕಮಿಟ್​ಮೆಂಟ್​ಗೆ ಅವರು ರೆಡಿ ಇಲ್ಲದ ಕಾರಣ ಆ ರಿಲೇಶನ್​ಶಿಪ್ ಕೊನೆಗೊಳಿಸಿದರು.

ಇದನ್ನೂ ಓದಿ
Image
ಹೊಸ ಫೋಟೋದಲ್ಲಿ ಮಿಂಚಿದ ನಟಿ ಅಮೂಲ್ಯ; ಎರಡು ಮಕ್ಕಳ ತಾಯಿಗೆ ಫ್ಯಾನ್ಸ್ ಕೇಳಿದ್ದು ಒಂದೇ ಪ್ರಶ್ನೆ
Image
Rakshit Shetty: ‘777 ಚಾರ್ಲಿ’ ಸಿನಿಮಾಗೆ ಸೀಕ್ವೆಲ್​; ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ
Image
ಅಪ್ರಾಪ್ತೆ ಆಗಿದ್ದಾಗ ಲೈಂಗಿಕ ಶೋಷಣೆ: ಮರುಕ ವ್ಯಕ್ತಪಡಿಸಿದವರಿಗೆ ಒಂದೇ ಮಾತಲ್ಲಿ ಉತ್ತರಿಸಿದ ಕುಬ್ರಾ ಸೇಠ್​
Image
‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ

ಬಾಲಿವುಡ್​ನಲ್ಲಿ ಸೀರಿಯಲ್ ಕಿಸ್ಸರ್ ಎಂದೇ ಫೇಮಸ್ ಆದವರು ಇಮ್ರಾನ್ ಹಶ್ಮಿ. ಅವರು ಕೂಡ ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಮಾತನಾಡಿದ್ದರು. ‘ನಾನು ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದೆ. ಈಗ ಮದುವೆ ನಂತರ ಅದನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅವರು ಹೇಳಿದ್ದರು.

ಕುಬ್ರಾ ಸೇಠ್​ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಕೂಡ ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದರು. ಅವರ ‘ಓಪನ್​ ಬುಕ್’ ಪುಸ್ತಕದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.  ‘ನಾನು ಅಮ್ಮನಾಗಲು ರೆಡಿ ಇರಲಿಲ್ಲ. ಫ್ರೆಂಡ್ ಜತೆ ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದೆ. ಈ ವೇಳೆ ಪ್ರೆಗ್ನೆಂಟ್ ಆಗಿದ್ದೆ. ನಂತರ ಅಬಾರ್ಷನ್ ಮಾಡಿಕೊಂಡೆ’ ಎಂದು ಹೇಳಿದ್ದರು.

ಆದಿತ್ಯ ರಾಯ್ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಮಾತನಾಡಿದ್ದಾರೆ. ಅವರು ಎಂದಿಗೂ ಒನ್ ನೈಟ್ ಸ್ಟ್ಯಾಂಡ್ ಮಾಡೇ ಇಲ್ಲ ಎಂದು ಹೇಳಿದ್ದರು. ‘ನನಗೆ ಒನ್ ನೈಟ್​ ಸ್ಟ್ಯಾಂಡ್ ಇಷ್ಟವಿಲ್ಲ. ಅದು ಅವರವರ ಆಯ್ಕೆ’ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ

ಅಪ್ರಾಪ್ತೆ ಆಗಿದ್ದಾಗ ಲೈಂಗಿಕ ಶೋಷಣೆ: ಮರುಕ ವ್ಯಕ್ತಪಡಿಸಿದವರಿಗೆ ಒಂದೇ ಮಾತಲ್ಲಿ ಉತ್ತರಿಸಿದ ಕುಬ್ರಾ ಸೇಠ್​

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್