AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ

‘ಒಮ್ಮೆ ಕಾರಿನಲ್ಲಿ ಹೋಗುವಾಗ ನನ್ನ ಬಟ್ಟೆಯನ್ನು ಸರಿಸಿ ತೊಡೆಯನ್ನು ಸವರಿದ್ದ. ನಂತರ ನಮ್ಮ ಮನೆಗೆ ಆತ ನಿರಂತರವಾಗಿ ಭೇಟಿ ನೀಡುತ್ತಿದ್ದ. ನನ್ನಮ್ಮ ನಗುತ್ತಲೇ ಅಡುಗೆ ಮಾಡಿ ಬಡಿಸುತ್ತಿದ್ದಳು’ ಎಂದು ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ
ಕುಬ್ರಾ ಸೇಠ್​
TV9 Web
| Edited By: |

Updated on:Jun 05, 2022 | 6:10 PM

Share

ನಟಿ ಕುಬ್ರಾ ಸೇಠ್ (Kubbra Sait)​ ಅವರು ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಅವರು ಬರಹಗಾರ್ತಿ ಕೂಡ ಹೌದು. ಅವರು ಈಗ ‘ಓಪನ್​ ಬುಕ್’ (Open Book) ಹೆಸರಿನ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ಅದರಲ್ಲಿ ಅವರು ತಮಗಾದ ಲೈಂಗಿಕ ದೌರ್ಜನ್ಯವನ್ನು ವಿವರಿಸಿದ್ದಾರೆ. ಇದು ಸಾಕಷ್ಟು ಚರ್ಚೆ ಆಗುತ್ತಿದೆ. ಕುಬ್ರಾ 17ನೇ ವಯಸ್ಸಿಗೆ ಲೈಂಗಿಕ ಶೋಷಣೆಗೆ ಒಳಗಾದರು ಅನ್ನೋದು ಬೇಸರದ ಸಂಗತಿ.

‘ನನಗೆ ಆಗಿನ್ನೂ 17 ವರ್ಷ. ನಾನು ಆಗ ನಿತ್ಯ ಬೆಂಗಳೂರಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡುತ್ತಿದೆ. ಈ ರೆಸ್ಟೋರೆಂಟ್​ನ ಮಾಲೀಕರು ನನಗೆ ಹಾಗೂ ನನ್ನ ಸಹೋದರ ದ್ಯಾನಿಶ್​​ಗೆ ಕ್ಲೋಸ್ ಇದ್ದರು. ನನ್ನ ತಾಯಿ ಆಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಹೊರ ಬರಲು ಆ ಹೋಟೆಲ್ ಮಾಲೀಕ ಸಹಾಯ ಮಾಡಿದ್ದ. ನಂತರ ನನಗೆ ಲೈಂಗಿಕ ಕಿರುಕುಳ ನೀಡಿದ್ದ. ನನ್ನನ್ನು ಅಂಕಲ್ ಎಂದು ಕರೆಯಬೇಡ ಎಂದು ಹೇಳುತ್ತಿದ್ದ’ ಎಂದು ಪುಸ್ತಕದಲ್ಲಿ ತಮ್ಮ ದುಃಖ ತೋಡಿಕೊಂಡಿದ್ದಾರೆ ಅವರು.

‘ಒಮ್ಮೆ ಕಾರಿನಲ್ಲಿ ಹೋಗುವಾಗ ನನ್ನ ಬಟ್ಟೆಯನ್ನು ಸರಿಸಿ ತೊಡೆಯನ್ನು ಸವರಿದ್ದ. ನಂತರ ನಮ್ಮ ಮನೆಗೆ ಆತ ನಿರಂತರವಾಗಿ ಭೇಟಿ ನೀಡುತ್ತಿದ್ದ. ನನ್ನಮ್ಮ ನಗುತ್ತಲೇ ಅಡುಗೆ ಮಾಡಿ ಬಡಿಸುತ್ತಿದ್ದಳು. ಅವನು ನನ್ನ ಕತ್ತಿಗೆ ಕಿಸ್ ಮಾಡಿ ನೀನು ನನ್ನ ಫೇವರಿಟ್ ಎಂದು ಹೇಳುತ್ತಿದ್ದ. ನನಗೆ ಅದು ಸರಿ ಎನಿಸುತ್ತಿರಲಿಲ್ಲ. ಆದರೂ ನಾನು ಸುಮ್ಮನೆ ಇರುತ್ತಿದೆ’ ಎಂದು ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ಪೊಲೀಸ್​ ಆಫೀಸರ್​​ ಆಗಿ ಬರ್ತಿದ್ದಾರೆ ದಾನಿಶ್ ಸೇಠ್; ವೂಟ್​ನಲ್ಲಿ ರಿಲೀಸ್ ಆಗ್ತಿದೆ ‘ಸೋಲ್ಡ್’
Image
‘ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್​ ಮಾಡಿಸಿದ್ದರು, ನಾನು ನೆಲದಮೇಲೆ ಬಿಕ್ಕಿಬಿಕ್ಕಿ ಅತ್ತಿದೆ’; ಕುಬ್ರಾ ಸೇಠ್​
Image
ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

ಇದನ್ನೂ ಓದಿ: ‘ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್​ ಮಾಡಿಸಿದ್ದರು, ನಾನು ನೆಲದಮೇಲೆ ಬಿಕ್ಕಿಬಿಕ್ಕಿ ಅತ್ತಿದೆ’; ಕುಬ್ರಾ ಸೇಠ್​

‘ಆತ ನನ್ನನ್ನು ಹೋಟೆಲ್​ಗೆ ಕರೆದುಕೊಂಡು ಹೋದ. ನನ್ನ ತಲೆಯನ್ನು ಹಿಡಿದುಕೊಂಡು ತುಟಿಗೆ ಕಿಸ್ ಮಾಡಿದ. ನಾನು ಆಗ ಗೊಂದಲಕ್ಕೆ ಒಳಗಾದೆ. ಒಂದೇ ಒಂದು ಶಬ್ದವನ್ನೂ ಹೇಳಲಿಲ್ಲ. ಹಾಗೆ ಆಗಬಾರದಿತ್ತು. ನಾನು ಆಗ ಕೂಗಬೇಕಿತ್ತು. ಆದರೆ ಕೂಗೋಕೆ ಆಗಲಿಲ್ಲ. ನಾನು ಅಲ್ಲಿಂದ ಓಡಿ ಹೋಗಬೇಕಿತ್ತು. ಆದರೆ, ಶಾಕ್​ನಲ್ಲಿದ್ದೆ. ಅವನು ತನ್ನ ಪ್ಯಾಂಟ್ ಬಿಚ್ಚಿದ. ನನ್ನ ಕನ್ಯತ್ವ ಕಳೆದುಹೋಗುತ್ತದೆ ಎಂದು ನನಗೆ ಅನಿಸುತ್ತಿತ್ತು’ ಎಂದು ಕುಬ್ರಾ ಹೇಳಿಕೊಂಡಿದ್ದಾರೆ.

‘ಆತನಿಗೆ ಮದುವೆ ಆಯಿತು. ಎರಡು ಮಗು ಕೂಡ ಆಯಿತು. ನಾನು ಇದನ್ನು ಮನೆಯಲ್ಲಿ ಹೇಳುತ್ತೇನೆ ಎನ್ನುವ ಭಯ ಆತನಿಗೆ ಇತ್ತು. ಹಾಗೆ ಮಾಡಿದರೆ ಇಡೀ ಕುಟುಂಬವನ್ನೇ ನಾಶ ಮಾಡುವುದಾಗಿ ಆತ ಎಚ್ಚರಿಸಿದ್ದ. ನಾನು ಇದನ್ನು ಯಾರ ಬಳಿಯೂ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ನಾನು ಹಾಗೂ ನನ್ನ ಮನಸ್ಸು ಎರಡೂ ಸತ್ತಿದೆ ಎನ್ನುವಂತೆ ಭಾಸವಾಗುತ್ತಿತ್ತು’ ಎಂದು ಪುಸ್ತಕದಲ್ಲಿ ಕುಬ್ರಾ ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:57 pm, Sun, 5 June 22

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ