Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​ ಆಫೀಸರ್​​ ಆಗಿ ಬರ್ತಿದ್ದಾರೆ ದಾನಿಶ್ ಸೇಠ್; ವೂಟ್​ನಲ್ಲಿ ರಿಲೀಸ್ ಆಗ್ತಿದೆ ‘ಸೋಲ್ಡ್’

ಬೆಂಗಳೂರಿನಲ್ಲಿ ಸಿನಿಮಾದ ಕಥೆ ಸಾಗಲಿದೆ. 10 ವರ್ಷದ ಹುಡುಗಿ ಕಿಡ್ನ್ಯಾಪ್ ಆಗುತ್ತಾಳೆ. ಅಂಡರ್‌ವರ್ಲ್ಡ್ ಕಿಂಗ್‌ಪಿನ್ ಲಾಲಾಜಿ ನಡೆಸುವ ಮಾನವ ಕಳ್ಳಸಾಗಣೆಯಲ್ಲಿ ಆಕೆ ಸಿಲುಕುತ್ತಾಳೆ. ಅವಳನ್ನು ಹೇಗೆ ಹೊರತರಲಾಗುತ್ತದೆ ಎಂಬುದು ಸಿನಿಮಾದ ಕಥೆ.

ಪೊಲೀಸ್​ ಆಫೀಸರ್​​ ಆಗಿ ಬರ್ತಿದ್ದಾರೆ ದಾನಿಶ್ ಸೇಠ್; ವೂಟ್​ನಲ್ಲಿ ರಿಲೀಸ್ ಆಗ್ತಿದೆ ‘ಸೋಲ್ಡ್’
ಸೋಲ್ಡ್ ಸಿನಿಮಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 28, 2022 | 6:49 PM

ನಟ ದಾನಿಶ್ ಸೇಠ್ ಅವರು (Danish Sait) ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ನೋಗರಾಜ್ ಪಾತ್ರದ ಮೂಲಕ ಗಮನ ಸೆಳೆದ ಅವರು ‘ಫ್ರೆಂಚ್ ಬಿರಿಯಾನಿ’ ಸಿನಿಮಾದಲ್ಲಿ (French Biryani Movie) ವಿಭಿನ್ನ ಪಾತ್ರ ಮಾಡಿ ಸೈ ಎನಿಸಿಕೊಂಡರು. ‘ಒನ್ ಕಟ್ ಟೂ ಕಟ್’ ಸಿನಿಮಾದಲ್ಲಿ  ಅವರದ್ದು ಪ್ರಯೋಗಾತ್ಮಕ ಪಾತ್ರ. ಈಗ ದಾನಿಶ್ ಸೇಠ್ ‘ಸೋಲ್ಡ್’ ಸಿನಿಮಾದಲ್ಲಿ (Sold Movie) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 29ರಂದು ಈ ಸಿನಿಮಾ ವೂಟ್​ ಮೂಲಕ ರಿಲೀಸ್ ಆಗುತ್ತಿದೆ.

ಕೊವಿಡ್ ಕಾಣಿಸಿಕೊಂಡ ನಂತರ ಒಟಿಟಿ ವೇದಿಕೆ ವಿಸ್ತರಣೆ ಆಗುತ್ತಿದೆ. ಹಲವು ಚಿತ್ರಗಳು ಒಟಿಟಿ ಹಾದಿ ಹಿಡಿಯುತ್ತಿವೆ. ಇನ್ನು ಒಟಿಟಿ ಮಂದಿ ಕೂಡ ಸ್ಪರ್ಧೆಗೆ ಬಿದ್ದು ಸಿನಿಮಾ ಖರೀದಿ ಮಾಡುತ್ತಿದ್ದಾರೆ. ಭಿನ್ನ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ಈ ಪೈಕಿ ವೂಟ್ ಕೂಡ ಮುಂಚೂಣಿಯಲ್ಲಿದೆ. ಈಗ ವೂಟ್ ಮೂಲಕ ಹೊಸ ನಿರ್ದೇಶಕಿ ಪ್ರೇರಣಾ ಅಗರ್‌ವಾಲ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಸೋಲ್ಡ್’ ಪ್ರೇಕ್ಷಕರ ಎದುರು ಬರುತ್ತಿದೆ. ದಾನಿಶ್ ಜತೆಗೆ, ಕಾವ್ಯಾ ಶೆಟ್ಟಿ, ದೀಪಂ ಕೊಹ್ಲಿ, ಶಿವಾನಿ ಬಾಲಾ, ಸಿದ್ದಾರ್ಥ್ ಮಾಧ್ಯಮಿಕ ಮತ್ತು ಭವಾನಿ ಪ್ರಕಾಶ್ ಮೊದಲಾದವರು ನಟಿಸಿದ್ದಾರೆ. ದೀಪಂ ಕೊಹ್ಲಿ ಅವರು ಈ ಚಿತ್ರವನ್ನು ಹಾರ್ನ್ ಓಕೆ ಫಿಲ್ಮ್ಸ್​ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಿನಿಮಾದ ಕಥೆ ಸಾಗಲಿದೆ. 10 ವರ್ಷದ ಹುಡುಗಿ ಕಿಡ್ನ್ಯಾಪ್ ಆಗುತ್ತಾಳೆ. ಅಂಡರ್‌ವರ್ಲ್ಡ್ ಕಿಂಗ್‌ಪಿನ್ ಲಾಲಾಜಿ ನಡೆಸುವ ಮಾನವ ಕಳ್ಳಸಾಗಣೆಯಲ್ಲಿ ಆಕೆ ಸಿಲುಕುತ್ತಾಳೆ. ಅವಳನ್ನು ಹೇಗೆ ಹೊರತರಲಾಗುತ್ತದೆ ಎಂಬುದು ಸಿನಿಮಾದ ಕಥೆ.

‘ನಾನು ರುಚಿತಾ ರಾವ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ವೈಯಕ್ತಿಕ ಜೀವನದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೂ ತನಿಖಾ ಪತ್ರಕರ್ತೆಯಾಗಿ ರಶ್ಮಿಯನ್ನು ಹುಡುಕುವ ಹಠಕ್ಕೆ ಬೀಳುತ್ತೇನೆ. ನಟಿಯಾಗಿ ನಾನು ‘ಸೋಲ್ಡ್’ ಭಾಗವಾಗಲು ಬಹಳ ಸಂತವಾಗುತ್ತಿದೆ’ ಎಂದಿದ್ದಾರೆ ಕಾವ್ಯಾ ಶೆಟ್ಟಿ.

ದಾನಿಶ್ ಸೇಠ್​ ಅವರು ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಸೋಲ್ಡ್ ನನಗೆ ವಿಶೇಷ ಸಿನಿಮಾ. ನಾನು ಈ ಥ್ರಿಲ್ಲರ್‌ ಶೈಲಿಯ ಸಿನಿಮಾದಲ್ಲಿ ಸಿದ್ದಾರ್ಥ್ ಎಂಬ ಪೋಲಿಸ್ ಇನ್ಸ್ಪೆಕ್ಟರ್ ಪಾತ್ರ ಮಾಡಿದ್ದೇನೆ. ಕಳೆದು ಹೋದ ರಶ್ಮಿಯನ್ನು ಕಂಡುಕೊಳ್ಳಲು ರುಚಿತಾ ಜೊತೆ ಸೇರುತ್ತಾನೆ ಸಿದ್ದಾರ್ಥ್. ಪ್ರತಿಭಾವಂತ ಕಲಾವಿದರ ಜತೆ ನಟಿಸಿದ್ದು ಖುಷಿ ಇದೆ. ಪ್ರೇರಣಾ ಅವರ ಮೊದಲ ಚಿತ್ರದಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ಆಭಾರಿಯಾಗಿದ್ದೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಅವರ​ ಜತೆ ಸಾಕಷ್ಟು ನೆನಪುಗಳಿವೆ’; ಪುನೀತ್, ‘ಒನ್ ಕಟ್​ ಟೂ ಕಟ್​’ ಸಿನಿಮಾ ಬಗ್ಗೆ ನಟ ದಾನಿಶ್​ ಸೇಠ್​ ಮಾತು

Danish Sait: ಸಿಂಪಲ್​ ಆಗಿ ಮದುವೆ ಆದ ದಾನಿಶ್ ಸೇಠ್; ಇಲ್ಲಿವೆ ಫೋಟೋಗಳು

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ