AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiara Advani: ‘ಮತ್ತೆ ನಮ್ಮ ಮನೆಗೆ ಕಾಲಿಡಬೇಡ’: ನಟಿ ಕಿಯಾರಾ ಅಡ್ವಾಣಿ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

‘ನೀವೆಂದರೆ ನನಗೆ ಎಷ್ಟು ಇಷ್ಟ ಅಂತ ತೋರಿಸಲು ಹೀಗೆ ಮಾಡಿದೆ’ ಎಂದು ಆತ ಉತ್ತರಿಸಿದ್ದ. ‘ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ’ ಎಂದು ವಾರ್ನಿಂಗ್​ ನೀಡಿ ಆತನನ್ನು ಕಳಿಸಿದ್ದರು ಕಿಯಾರಾ ಅಡ್ವಾಣಿ.

Kiara Advani: ‘ಮತ್ತೆ ನಮ್ಮ ಮನೆಗೆ ಕಾಲಿಡಬೇಡ’: ನಟಿ ಕಿಯಾರಾ ಅಡ್ವಾಣಿ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?
ಕಿಯಾರಾ ಅಡ್ವಾಣಿ
TV9 Web
| Edited By: |

Updated on: Jul 04, 2022 | 9:22 AM

Share

ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಗೆಲುವಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಯಶಸ್ಸು ಕಾಣುತ್ತಿವೆ. ‘ಶೇರ್ಷಾ’, ‘ಭೂಲ್​ ಭುಲಯ್ಯ 2’ (Bhool Bhulaiyaa 2) ಹಾಗೂ ‘ಜುಗ್​ಜುಗ್​ ಜಿಯೋ’ ಸಿನಿಮಾದಿಂದ ಅವರಿಗೆ ಹ್ಯಾಟ್ರಿಕ್​ ಗೆಲುವು ಸಿಕ್ಕಿದೆ. ‘ಜುಗ್​ಜುಗ್​ ಜಿಯೋ’ ಚಿತ್ರ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದ ಪ್ರಚಾರದ ಸಲುವಾಗಿ ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಕೆಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ’ ಎಂದು ಅವರು ವ್ಯಕ್ತಿಯೊಬ್ಬರಿಗೆ ಖಡಕ್​ ಆಗಿ ಎಚ್ಚರಿಕೆ ನೀಡಿದ ಪ್ರಸಂಗವನ್ನು ಈಗ ನೆನಪು ಮಾಡಿಕೊಂಡಿದ್ದಾರೆ. ಆ ಘಟನೆಯು ತುಂಬ ಭಯಾನಕವಾಗಿತ್ತು ಎಂದು ಕಿಯಾರಾ ಅಡ್ವಾಣಿ ಅವರು ಹೇಳಿದ್ದಾರೆ.

ಕಿಯಾರಾ ಅಡ್ವಾಣಿ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಸೌತ್​ ಸಿನಿಮಾಗಳಲ್ಲೂ ನಟಿಸಿರುವ ಅವರನ್ನು ಕಂಡರೆ ಕೋಟ್ಯಂತರ ಮಂದಿಗೆ ಅಚ್ಚುಮೆಚ್ಚು. ಹಾಗಂತ ಅಭಿಮಾನದ ಉನ್ಮಾದದಲ್ಲಿ ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ. ಮುಂಬೈನಲ್ಲಿ ವ್ಯಕ್ತಿಯೊಬ್ಬ ಕಿಯಾರಾ ಅಡ್ವಾಣಿ ಅವರ ಮನೆಗೆ ಏಕಾಏಕಿ ಎಂಟ್ರಿ ನೀಡಿದ್ದ. ಆ ಘಟನೆಯನ್ನು ಅವರು ಈಗ ವಿವರಿಸಿದ್ದಾರೆ.

ಮುಂಬೈನ ಅಪಾರ್ಟ್​ಮೆಂಟ್​ ಒಂದರ ಮೇಲಿನ ಫ್ಲೋರ್​ನಲ್ಲಿ ಕಿಯಾರಾ ಅಡ್ವಾಣಿ ವಾಸವಾಗಿದ್ದಾರೆ. ಆ ಫ್ಲೋರ್​ ತುಂಬ ಎತ್ತರದಲ್ಲಿದೆ. ಅವರನ್ನು ಹುಡುಕಿಕೊಂಡು ಬಂದ ಅಭಿಮಾನಿಯು ಲಿಫ್ಟ್​ ಬಳಸುವ ಬದಲು ಎಲ್ಲ ಮೆಟ್ಟಿಲುಗಳನ್ನು ಹತ್ತಿದ್ದ. ಅದರಿಂದ ಆತ ಸಿಕ್ಕಾಪಟ್ಟೆ ಬಳಲಿ, ಮೈತುಂಬ ಬೆವರುತ್ತಿದ್ದ. ಅಂಥ ಸ್ಥಿತಿಯಲ್ಲಿ ಕಿಯಾರಾ ಮನೆಯ ಬಾಗಿಲು ಬಡಿದಿದ್ದ. ಅದನ್ನು ಕಂಡು ಕಿಯಾರಾ ಅಡ್ವಾಣಿ ಅವರಿಗೆ ಭಯವಾಗಿತ್ತು.

ಇದನ್ನೂ ಓದಿ
Image
‘ವೈಯಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ’; ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ
Image
ಪಡ್ಡೆಗಳ ನಿದ್ದೆ ಕದ್ದ ಕಿಯಾರಾ ಅಡ್ವಾಣಿ; ಇಲ್ಲಿದೆ ಫೋಟೋ ಗ್ಯಾಲರಿ
Image
ಕಿಯಾರಾ ಜತೆಗಿನ ಬ್ರೇಕಪ್​ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್​ ಮಲ್ಹೋತ್ರಾ; ಫ್ಯಾನ್ಸ್​ ಊಹಿಸಿದ್ದೇನು?
Image
ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​; ಸಿದ್ದಾರ್ಥ್​-ಕಿಯಾರಾ ಪ್ರೇಮ್​ ಕಹಾನಿಗೆ ಸ್ಯಾಡ್ ಎಂಡಿಂಗ್

‘ಯಾಕೆ ಹೀಗೆ ಮಾಡಿದೆ?’ ಎಂದು ಅವರು ಅಭಿಮಾನಿಗೆ ಕೇಳಿದಾಗ, ‘ನೀವೆಂದರೆ ನನಗೆ ಎಷ್ಟು ಇಷ್ಟ ಅಂತ ತೋರಿಸಲು ಹೀಗೆ ಮಾಡಿದೆ’ ಎಂದು ಆತ ಉತ್ತರಿಸಿದ್ದ. ‘ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ’ ಎಂದು ವಾರ್ನಿಂಗ್​ ನೀಡಿ ಆತನನ್ನು ಕಳಿಸಿದ್ದ ಘಟನೆಯನ್ನು ಕಿಯಾರಾ ಅಡ್ವಾಣಿ ಈಗ ನೆನಪಿಸಿಕೊಂಡಿದ್ದಾರೆ.

‘ಆತ ಒಳ್ಳೆಯ ವ್ಯಕ್ತಿ ಆಗಿದ್ದ’ ಎಂದು ಕೂಡ ಕಿಯಾರಾ ಅಡ್ವಾಣಿ ಹೇಳಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಆಫರ್​ಗಳಿವೆ. ರಾಮ್​ ಚರಣ್​ ಅವರ ಮುಂದಿನ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ಸಿದ್ದಾರ್ಥ್​ ಮಲ್ಹೋತ್ರಾ ಜೊತೆಗಿನ ಲವ್​ ಮತ್ತು ಬ್ರೇಕಪ್​ ಗಾಸಿಪ್​ನ ಕಾರಣದಿಂದಲೂ ಅವರು ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದಾರೆ.

ಇದನ್ನೂ ಓದಿ: Kiara Advani: ಹ್ಯಾಟ್ರಿಕ್​ ಗೆಲುವು ಪಡೆದ ಕಿಯಾರಾ ಅಡ್ವಾಣಿ; ಬಾಲಿವುಡ್​ನಲ್ಲಿ ಮೈಲೇಜ್​ ಹೆಚ್ಚಿಸಿಕೊಂಡ ಬೆಡಗಿ

‘ವೈಯಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ’; ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?