‘ವೈಯಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ’; ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ

ಬ್ರೇಕಪ್​ ನಂತರದಲ್ಲಿ ಬಹುತೇಕರು ಬೇಸರಕ್ಕೆ ತುತ್ತಾಗುತ್ತಾರೆ. ಕಿಯಾರಾ ಈ ನೋವಿನಿಂದ ಹೊರ ಬಂದಂತೆ ಇದೆ. ಸಂದರ್ಶನವೊಂದರಲ್ಲಿ ಮಾತನಾಡುವಾಗ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

‘ವೈಯಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ’; ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ
ಕಿಯಾರಾ ಸಿದ್ದಾರ್ಥ್
TV9kannada Web Team

| Edited By: Rajesh Duggumane

Jul 01, 2022 | 6:35 AM

ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ನಟನೆಯ ‘ಭೂಲ್ ಭುಲಯ್ಯ 2’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ‘ಜುಗ್ ಜುಗ್ ಜಿಯೋ’ ಚಿತ್ರದ (Jug Jug Jeeyo) ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿರುವ ಅವರು, ವೈಯಕ್ತಿಕ ಜೀವನದಲ್ಲೂ ಖುಷಿಯಿಂದ ಇದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ಸ್ವತಃ ಕಿಯಾರಾ ಅಡ್ವಾಣಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಆದರೆ, ಇದನ್ನು ಅವರು ಖಚಿತಪಡಿಸಿಲ್ಲ. ಅವರದ್ದು ಬ್ರೇಕಪ್ ಆಗಿದೆ ಎಂಬ ವರದಿಗಳು ಕೂಡ ಪ್ರಕಟಗೊಂಡವು. ಈ ಬಗ್ಗೆಯೂ ಕಿಯಾರಾ ಮೌನ ತಾಳಿದ್ದಾರೆ. ಬ್ರೇಕಪ್​ ನಂತರದಲ್ಲಿ ಬಹುತೇಕರು ಬೇಸರಕ್ಕೆ ತುತ್ತಾಗುತ್ತಾರೆ. ಕಿಯಾರಾ ಈ ನೋವಿನಿಂದ ಹೊರ ಬಂದಂತೆ ಇದೆ.

ನವಭಾರತ್ ಟೈಮ್ಸ್​ಗೆ ಕಿಯಾರಾ ಅಡ್ವಾಣಿ ಸಂದರ್ಶನ ನೀಡಿದ್ದಾರೆ. ಈ ವೇಳೆ ಬ್ರೇಕಪ್​ ಬಗ್ಗೆ ಪ್ರಶ್ನೆ ಮಾಡಲಾಯಿತು. ‘ನಾನು ಈ ಬಗ್ಗೆ ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ನಾನು ಏನೂ ಹೇಳಿಲ್ಲ ಎಂದರೂ ಸುದ್ದಿ ಬರೆಯುತ್ತಾರೆ. ಇನ್ನು, ನಾನು ಏನಾದರೂ ಹೇಳಿದರೆ ಅದರ ಬಗ್ಗೆ ಹೇಗೆ ಬರೆಯುತ್ತಾರೋ ನನಗೆ ಗೊತ್ತಿಲ್ಲ. ನಾನು ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಖುಷಿಯಾಗಿದ್ದೇನೆ’ ಎಂದಿದ್ದಾರೆ ಅವರು.

ಕಿಯಾರಾಗೆ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಸಿಗುತ್ತಿದೆ. ಕಾರ್ತಿಕ್ ಆರ್ಯನ್ ಜತೆಯಾಗಿ ನಟಿಸಿದ ‘ಭೂಲ್​ ಭುಲಯ್ಯ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 230 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಕಿಯಾರಾ ಇದರಿಂದ ಖುಷಿಯಾಗಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಜುಗ್​ ಜುಗ್​ ಜಿಯೋ’ದಲ್ಲಿ ವರುಣ್ ಧವನ್​ಗೆ ಜತೆಯಾಗಿ ಅವರು ನಟಿಸಿದ್ದಾರೆ. ಈ ಸಿನಿಮಾ ಆರು ದಿನಕ್ಕೆ 50 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಈ ವಾರ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ.

ಇದನ್ನೂ ಓದಿ: ನಟಿ ಕಿಯಾರಾ ಅಡ್ವಾಣಿಯ ಬಗ್ಗೆ ನಿಮಗೆ ಗೊತ್ತಿಲ್ಲದ 5 ಸಂಗತಿಗಳು..!

ಇದನ್ನೂ ಓದಿ

ಬ್ರೇಕಪ್​ ಗಾಸಿಪ್​ಗೆ ಕಿವಿಗೊಡದೇ ‘ಭೂಲ್​ ಭುಲಯ್ಯ 2’ ಪ್ರಮೋಷನ್​ನಲ್ಲಿ ಬ್ಯುಸಿ ಆದ ಕಿಯಾರಾ ಅಡ್ವಾಣಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada