ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​; ಸಿದ್ದಾರ್ಥ್​-ಕಿಯಾರಾ ಪ್ರೇಮ್​ ಕಹಾನಿಗೆ ಸ್ಯಾಡ್ ಎಂಡಿಂಗ್

ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​; ಸಿದ್ದಾರ್ಥ್​-ಕಿಯಾರಾ ಪ್ರೇಮ್​ ಕಹಾನಿಗೆ ಸ್ಯಾಡ್ ಎಂಡಿಂಗ್
ಕಿಯಾರಾ-ಸಿದ್ದಾರ್ಥ್

ಸಿದ್ದಾರ್ಥ್ ಹಾಗೂ ಕಿಯಾರಾ ಬಾಲಿವುಡ್​ನ ಕ್ಯೂಟ್​ ಕಪಲ್ ಆಗಿದ್ದರು. ಹಲವು ಕಡೆಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇಷ್ಟೆಲ್ಲ ಸುತ್ತಾಟ ನಡೆಸಿದರೂ ಪ್ರೀತಿ ವಿಚಾರವನ್ನು ಎಲ್ಲಿಯೂ ಅಧಿಕೃತ ಮಾಡಿರಲಿಲ್ಲ.

TV9kannada Web Team

| Edited By: Rajesh Duggumane

Apr 23, 2022 | 7:21 AM

ಚಿತ್ರರಂಗದ ಪಾಲಿಗೆ ಬ್ರೇಕಪ್​, ವಿಚ್ಛೇದನಗಳು ಹೊಸತಲ್ಲ. ಅದೆಷ್ಟೋ ಬ್ರೇಕಪ್​​ಗಳನ್ನು ಸಿನಿಮಾ ಇಂಡಸ್ಟ್ರಿ ಕಂಡಿದೆ. ಇದಕ್ಕೆ ಬಾಲಿವುಡ್ (Bollywood)​ ಕೂಡ ಹೊರತಾಗಿಲ್ಲ. ಈಗ ಬಾಲಿವುಡ್​ನಲ್ಲಿ ಬ್ರೇಕಪ್​ ಸುದ್ದಿ ಜೋರಾಗಿದೆ. ನಟಿ ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ನಡುವೆ ಪ್ರೀತಿ ಮೊಳೆತಿತ್ತು. ಸಾಕಷ್ಟು ಬಾರಿ ಇಬ್ಬರೂ ವಿದೇಶಕ್ಕೆ ಒಟ್ಟಾಗಿ ತೆರಳಿ ವೆಕೇಶನ್ ಮುಗಿಸಿ ಬಂದಿದ್ದಿದೆ. ‘ಶೇರ್ಷಾ’ ಸಿನಿಮಾದಲ್ಲಿ ಈ ಜೋಡಿಯ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದರು. ರಿಯಲ್ ಲೈಫ್​ನಲ್ಲಿ ಇವರು ಬೇಗ ಮದುವೆ ಆಗಲಿ ಎಂದು ಹಾರೈಸಿದ್ದರು. ಆದರೆ, ಇವರ ಪ್ರೀತಿ ಬ್ರೇಕಪ್​ನಲ್ಲಿ ಅಂತ್ಯವಾಗಿದೆ ಎನ್ನುವ ಬಗ್ಗೆ ಈಗ ಸುದ್ದಿ ಹುಟ್ಟಿಕೊಂಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಸಿದ್ದಾರ್ಥ್ ಹಾಗೂ ಕಿಯಾರಾ ಬಾಲಿವುಡ್​ನ ಕ್ಯೂಟ್​ ಕಪಲ್ ಆಗಿದ್ದರು. ಹಲವು ಕಡೆಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಬಾಲಿವುಡ್ ಪಾರ್ಟಿಗಳನ್ನು ಇವರು ಒಟ್ಟಾಗಿ ಅಟೆಂಡ್ ಮಾಡುತ್ತಿದ್ದರು. ಇಷ್ಟೆಲ್ಲ ಸುತ್ತಾಟ ನಡೆಸಿದರೂ ಪ್ರೀತಿ ವಿಚಾರವನ್ನು ಎಲ್ಲಿಯೂ ಅಧಿಕೃತ ಮಾಡಿರಲಿಲ್ಲ. ಆದರೆ, ಈಗ ಇವರ ಸಂಬಂಧ ಮುರಿದು ಬಿದ್ದಿದೆ ಎಂದು ಮೂಲಗಳು ಖಚಿತಪಡಿಸಿರುವುದಾಗಿ ‘ಬಾಲಿವುಡ್ ಲೈಫ್’ ವೆಬ್​ಸೈಟ್​ ವರದಿ ಮಾಡಿದೆ.

‘ಕಿಯಾರಾ ಹಾಗೂ ಸಿದ್ದಾರ್ಥ್ ಬೇರೆ ಆಗಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಭೇಟಿ ಮಾಡುವುದನ್ನು ನಿಲ್ಲಿಸಿದ್ದಾರೆ. ರಿಲೇಶನ್​ಶಿಪ್​ ಕೊನೆಯಾಗಲು ಕಾರಣ ಏನು ಎಂಬುದು ತಿಳಿದಿಲ್ಲ. ಇಬ್ಬರ ನಡುವೆ ತುಂಬಾನೇ ಅನ್ಯೋನ್ಯತೆ ಇತ್ತು. ಇಬ್ಬರೂ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ಆ ಸೂಚನೆ ಸದ್ಯಕ್ಕಂತೂ ಇಲ್ಲ’ ಎಂದು ವರದಿ ಆಗಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ, ಸಿದ್ದಾರ್ಥ್ ನಟನೆಯ ‘ಮಿಷನ್ ಮಜ್ನು’ ಚಿತ್ರ ರಿಲೀಸ್​ಗೆ ರೆಡಿ ಇದೆ. ಸಿದ್ದಾರ್ಥ್​ಗೆ ಜತೆಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ಜತೆ ಅವರು ವೆಬ್​ ಸೀರಿಸ್ ಮಾಡುತ್ತಿದ್ದಾರೆ. ಈ ವೆಬ್​ ಸರಣಿಯಲ್ಲಿ ಅವರದ್ದು ಪೊಲೀಸ್ ಪಾತ್ರ. ‘ಯೋಧ’, ‘ಥ್ಯಾಂಕ್ ಗಾಡ್’ ಚಿತ್ರಗಳ ಕೆಲಸಗಳಲ್ಲಿ ಸಿದ್ದಾರ್ಥ್ ಬ್ಯುಸಿ ಇದ್ದಾರೆ. ಕಿಯಾರಾ ಕೈಯಲ್ಲೂ ಹಲವು ಸಿನಿಮಾಗಳಿವೆ. ‘ಭೂಲ್​ ಭುಲಯ್ಯ 2’, ‘ಗೋವಿಂದ ನಾಮ್ ಮೇರಾ’, ರಾಮ್ ಚರಣ್ 15ನೇ ಸಿನಿಮಾ ಕೆಲಸಗಳಲ್ಲಿ ಕಿಯಾರಾ ಬ್ಯುಸಿ ಆಗಿದ್ದಾರೆ. ‘ಶೇರ್ಷಾ’ ಸಿನಿಮಾದಲ್ಲಿ ಈ ಜೋಡಿ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದರು. ಮತ್ತೊಂದು ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಲಿ ಎನ್ನುವ ಕೋರಿಕೆ ಇಟ್ಟಿದ್ದರು. ಆದರೆ, ಅಷ್ಟರೊಳಗೆ ಇವರ ನಡುವಿನ ಸಂಬಂಧ ಮುರಿದು ಬಿದ್ದಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಇದನ್ನೂ ಓದಿ: ಸಿದ್ದಾರ್ಥ್​ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ

ನಟಿ ಕಿಯಾರಾ ಅಡ್ವಾಣಿಯ ಬಗ್ಗೆ ನಿಮಗೆ ಗೊತ್ತಿಲ್ಲದ 5 ಸಂಗತಿಗಳು..!

Follow us on

Related Stories

Most Read Stories

Click on your DTH Provider to Add TV9 Kannada