ಕಿಯಾರಾ ಜತೆಗಿನ ಬ್ರೇಕಪ್​ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್​ ಮಲ್ಹೋತ್ರಾ; ಫ್ಯಾನ್ಸ್​ ಊಹಿಸಿದ್ದೇನು?

ಕಿಯಾರಾ ಜತೆಗಿನ ಬ್ರೇಕಪ್​ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್​ ಮಲ್ಹೋತ್ರಾ; ಫ್ಯಾನ್ಸ್​ ಊಹಿಸಿದ್ದೇನು?
ಸಿದ್ದಾರ್ಥ್​ ಮಲ್ಹೋತ್ರ, ಕಿಯಾರಾ ಅಡ್ವಾಣಿ

Kiara Advani Sidharth Malhotra Breakup: ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಬ್ರೇಕಪ್​ ಬಗ್ಗೆ ಹಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ಕಿಯಾರಾ ಅವರಿಂದ ಪ್ರತಿಕ್ರಿಯೆ ಬರಲಿ ಎಂದು ನಿರೀಕ್ಷಿಸಲಾಗುತ್ತಿದೆ.

TV9kannada Web Team

| Edited By: Madan Kumar

Apr 24, 2022 | 9:35 AM

ಬಾಲಿವುಡ್​ನ ಬಹುಬೇಡಿಕೆಯ ನಟ ಸಿದ್ದಾರ್ಥ್​ ಮಲ್ಹೋತ್ರಾ (Sidharth Malhotra) ಅವರು ಈಗ ವಿರಹ ವೇದನೆ ಅನುಭವಿಸುತ್ತಿದ್ದಾರಾ? ಹೀಗೊಂದು ಅನುಮಾನ ಬಲವಾಗಿ ಮೂಡಿದೆ. ಈ ಅನುಮಾನ ಬರಲು ಕಾರಣಗಳು ಕೂಡ ಹಲವು. ನಟಿ ಕಿಯಾರಾ ಅಡ್ವಾಣಿ (Kiara Advani) ಜೊತೆ ಸಿದ್ದಾರ್ಥ್​ ಮಲ್ಹೋತ್ರಾ ಡೇಟಿಂಗ್​ ನಡೆಸುತ್ತಿದ್ದ ವಿಚಾರ ಗುಟ್ಟಾಗಿ ಏನೂ ಉಳಿದಿರಲಿಲ್ಲ. ಆದರೆ ಈಗ ಈ ಜೋಡಿ ಬ್ರೇಕಪ್​ ಮಾಡಿಕೊಂಡಿದೆ ಎಂಬುದು ಹೊಸ ಗುಸುಗುಸು. ಆ ಕುರಿತಾಗಿ ಸಿದ್ದಾರ್ಥ್​ ಮಲ್ಹೋತ್ರಾ ಅವರಾಗಲಿ, ಕಿಯಾರಾ ಅಡ್ವಾಣಿ ಅವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೂ ಅಭಿಮಾನಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ಈ ನಡುವೆ ಸಿದ್ದಾರ್ಥ್​ ಮಲ್ಹೋತ್ರಾ ಅವರು ಸೂಚ್ಯವಾಗಿ ಏನನ್ನೋ ಹೇಳಿದ್ದಾರೆ. ಅವರ ಮಾತುಗಳು ಬ್ರೇಕಪ್​ (Kiara Advani Sidharth Malhotra Breakup) ಕುರಿತಾಗಿಯೇ ಇದೆ ಎಂಬುದು ಅನೇಕರ ಊಹೆ. ಅಷ್ಟಕ್ಕೂ ಅವರು ಹೇಳಿರುವುದು ಏನು? ಇಲ್ಲಿದೆ ವಿವರ..

ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ನಡುವಿನ ಬ್ರೇಕಪ್​ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದಕ್ಕೆ ಯಾರಿಂದಲಾದರೂ ಸ್ಪಷ್ಟನೆ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಂದರ್ಭಕ್ಕೆ ಸರಿಯಾಗಿ ಸಿದ್ದಾರ್ಥ್​ ಮಲ್ಹೋತ್ರಾ ಅವರು ಒಂದು ಫೋಟೋ ಅಪ್​ಲೋಡ್​ ಮಾಡಿಕೊಂಡು ಕೌತುಕ ಮೂಡುವಂತೆ ಮಾಡಿದ್ದಾರೆ. ಆ ಫೋಟೋದಲ್ಲಿ ಅವರು ಸಿಂಗಲ್ ಆಗಿದ್ದಾರೆ. ಅದಕ್ಕೆ ನೀಡಿದ ಕ್ಯಾಪ್ಷನ್​ ಕೂಡ ಏನನ್ನೋ ಸೂಚಿಸುತ್ತಿದೆ.

ಬ್ರೇಕಪ್​ ಆಗಿದೆ ಎಂಬುದನ್ನು ಸಿದ್ದಾರ್ಥ್​ ಮಲ್ಹೋತ್ರಾ ನೇರವಾಗಿ ಹೇಳದೇ ಇರಬಹುದು. ಅವರು ನೀಡಿದ ಕ್ಯಾಪ್ಷನ್​ ನೋಡಿ ಅಭಿಮಾನಿಗಳು ಏನೇನನ್ನೋ ಊಹಿಸುತ್ತಿದ್ದಾರೆ. ‘ಸೂರ್ಯನ ಬೆಳಕು ಇಲ್ಲದ ದಿನ ಹೇಗಿರುತ್ತೆ ಅಂತ ನಿಮಗೆ ಗೊತ್ತು ಅಲ್ಲವೇ?’ ಎಂದು ಸಿದ್ದಾರ್ಥ್​ ಬರೆದುಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರು ಕಮೆಂಟ್​ ಮಾಡಿದ್ದು, ‘ಹಾಗಾದರೆ ನಿಮ್ಮ ಪಾಲಿಗೆ ಕಿಯಾರಾ ಅಡ್ವಾಣಿ ಅವರೇ ಸೂರ್ಯನ ಬೆಳಕು ಆಗಿದ್ರಾ?’ ಅಂತ ಮರುಪ್ರಶ್ನೆ ಹಾಕಿದ್ದಾರೆ. ಆದರೆ ಅದಕ್ಕೆ ಉತ್ತರ ನೀಡುವ ಗೋಜಿಗೆ ಸಿದ್ದಾರ್ಥ್​ ಮಲ್ಹೋತ್ರಾ ಕೈ ಹಾಕಿಲ್ಲ.

ಸಿದ್ದಾರ್ಥ್ ಹಾಗೂ ಕಿಯಾರಾ ಬಾಲಿವುಡ್​ನ ಕ್ಯೂಟ್​ ಕಪಲ್ ಎನಿಸಿಕೊಂಡಿದ್ದರು. ಹಲವು ಕಡೆಗಳಲ್ಲಿ ಇಬ್ಬರೂ ಒಟ್ಟಾಗಿ ತಿರುಗಾಡಿದ್ದು ಎಲ್ಲರ ಗಮನಕ್ಕೆ ಬಂದಿತ್ತು. ಬಾಲಿವುಡ್ ಪಾರ್ಟಿಗಳನ್ನು ಇವರು ಒಟ್ಟಾಗಿ ಅಟೆಂಡ್ ಮಾಡುತ್ತಿದ್ದರು. ಇಷ್ಟೆಲ್ಲ ಸುತ್ತಾಟ ನಡೆಸಿದರೂ ತಮ್ಮ ಲವ್​ ಕಹಾನಿಯ ವಿಚಾರವನ್ನು ಎಲ್ಲಿಯೂ ಅಧಿಕೃತ ಮಾಡಿರಲಿಲ್ಲ. ಆದರೆ, ಈಗ ಇವರ ಸಂಬಂಧ ಮುರಿದು ಬಿದ್ದಿದೆ ಅಂತ ಮೂಲಗಳು ತಿಳಿಸಿರುವುದಾಗಿ ‘ಬಾಲಿವುಡ್ ಲೈಫ್’ ವರದಿ ಮಾಡಿದೆ.

‘ಕಿಯಾರಾ ಹಾಗೂ ಸಿದ್ದಾರ್ಥ್ ಬೇರೆ ಆಗಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಭೇಟಿ ಮಾಡುವುದನ್ನು ನಿಲ್ಲಿಸಿದ್ದಾರೆ. ರಿಲೇಶನ್​ಶಿಪ್​ ಕೊನೆಯಾಗಲು ಕಾರಣ ಏನು ಎಂಬುದು ತಿಳಿದಿಲ್ಲ. ಇಬ್ಬರ ನಡುವೆ ತುಂಬಾನೇ ಅನ್ಯೋನ್ಯತೆ ಇತ್ತು. ಇಬ್ಬರೂ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ಆ ಸೂಚನೆ ಸದ್ಯಕ್ಕಂತೂ ಇಲ್ಲ’ ಎಂದು ವರದಿ ಪ್ರಕಟ ಆಗಿದೆ.

ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. 2021ರಲ್ಲಿ ಬಿಡುಗಡೆ ಆದ ‘ಶೇರ್ಷಾ’ ಸಿನಿಮಾದಿಂದ ಇಬ್ಬರಿಗೂ ದೊಡ್ಡ ಹಿಟ್​ ಸಿಕ್ಕಿತ್ತು. ಸಿದ್ದಾರ್ಥ್​ ನಟನೆಯ ‘ಮಿಷನ್​ ಮಜ್ನು’ ಚಿತ್ರ ರಿಲೀಸ್​ಗೆ ಸಿದ್ಧವಾಗಿದೆ. ಕಿಯಾರಾ ಕೈಯಲ್ಲೂ ಹಲವು ಸಿನಿಮಾಗಳಿವೆ. ‘ಭೂಲ್​ ಭುಲಯ್ಯ 2’, ‘ಗೋವಿಂದ ನಾಮ್ ಮೇರಾ’ ಹಾಗೂ ರಾಮ್ ಚರಣ್ ನಟನೆಯ 15ನೇ ಸಿನಿಮಾಗೂ ಕಿಯಾರಾ ನಾಯಕಿ ಆಗಿದ್ದಾರೆ.

ಇದನ್ನೂ ಓದಿ:

ನಟಿ ಕಿಯಾರಾ ಅಡ್ವಾಣಿಯ ಬಗ್ಗೆ ನಿಮಗೆ ಗೊತ್ತಿಲ್ಲದ 5 ಸಂಗತಿಗಳು..!

ದೇಸಿ ಲುಕ್​ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ; ಸೀರೆ ಧರಿಸಿ ಪೋಸ್​ ನೀಡಿದ ಚೆಲುವೆ

Follow us on

Related Stories

Most Read Stories

Click on your DTH Provider to Add TV9 Kannada