Kiara Advani: ಹ್ಯಾಟ್ರಿಕ್ ಗೆಲುವು ಪಡೆದ ಕಿಯಾರಾ ಅಡ್ವಾಣಿ; ಬಾಲಿವುಡ್ನಲ್ಲಿ ಮೈಲೇಜ್ ಹೆಚ್ಚಿಸಿಕೊಂಡ ಬೆಡಗಿ
Kiara Advani Photos: ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳ ಮೂಲಕ ಗೆಲುವು ಪಡೆಯುವುದು ಎಂದರೆ ಸುಲಭವಲ್ಲ. ನಟಿ ಕಿಯಾರಾ ಅಡ್ವಾಣಿ ಅವರು ಆ ಸಾಧನೆ ಮಾಡಿ ಬೀಗುತ್ತಿದ್ದಾರೆ.
Updated on: Jul 02, 2022 | 8:15 AM

Jugjugg Jeeyo actress Kiara Advani gets 3 back to back hits in Bollywood

Jugjugg Jeeyo actress Kiara Advani gets 3 back to back hits in Bollywood

2022ರಲ್ಲಿ ಕೂಡ ಕಿಯಾರಾ ಅಡ್ವಾಣಿ ಅವರ ಗೆಲುವಿನ ಓಟ ಮುಂದುವರಿದಿದೆ. ಕಾರ್ತಿಕ್ ಆರ್ಯನ್ ಜೊತೆ ಅವರು ನಟಿಸಿದ ‘ಭೂಲ್ ಭುಲಯ್ಯ 2’ ಸಿನಿಮಾ ವಿಶ್ವಾದ್ಯಂತ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದೆ. ಈ ಚಿತ್ರದಲ್ಲಿ ಕಿಯಾರಾ ಪಾತ್ರ ಗಮನ ಸೆಳೆದಿದೆ.

ಜೂನ್ 24ರಂದು ತೆರೆಕಂಡ ‘ಜುಗ್ಜುಗ್ ಜಿಯೋ’ ಚಿತ್ರ ಕೂಡ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದೆ. ಇದರಲ್ಲಿ ಕಿಯಾರಾ ಅಡ್ವಾಣಿ ಅವರು ವರುಣ್ ಧವನ್ಗೆ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿದೆ.

ಹಲವು ಆಫರ್ಗಳನ್ನು ಕೈಯಲ್ಲಿ ಇಟ್ಟುಕೊಂಡು ಕಿಯಾರಾ ಅಡ್ವಾಣಿ ಅವರು ಸಾಗುತ್ತಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರಿಗೆ ತುಂಬಾ ಬೇಡಿಕೆ ಇದೆ. ರಾಮ್ ಚರಣ್ ನಟನೆಯ ಮುಂದಿನ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ.




