Automobile: ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಅನಾವರಣ, ಇಲ್ಲಿದೆ ನೋಡಿ ಫೀಚರ್ಸ್
ಟೊಯೊಟಾ ಇಂಡಿಯಾ ಶುಕ್ರವಾರ ಭಾರತದಲ್ಲಿ ಹೊಚ್ಚಹೊಸ ಹೈಬ್ರಿಡ್ ಎಸ್‌ಯುವಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಅನಾವರಣಗೊಳಿಸಿದೆ. ಇಂಜಿನ್ ಸೇರಿದಂತೆ ಇತರೆ ವೈಶಿಷ್ಟ್ಯಗಳು ಇಲ್ಲಿವೆ ನೋಡಿ.
Updated on:Jul 02, 2022 | 10:39 AM

Automobile Toyota Urban Cruiser hyryder car unveiled, see features here

Automobile Toyota Urban Cruiser hyryder car unveiled, see features here

17-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಕಾರಿನಲ್ಲಿ ಆಲ್-ವೀಲ್ ಡ್ರೈವ್ ತಂತ್ರಜ್ಞಾನವಿದೆ. ಹೆಡ್ ಅಪ್ ಡಿಸ್ಪ್ಲೇ ಕೂಡ ಇದೆ. ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ 1.5 L TNGA ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಶಕ್ತಿಯುತ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ.

ಇಂಧನ ದಕ್ಷತೆಯಲ್ಲೂ ಉತ್ತಮ ಕಾರ್ಯಕ್ಷಮತೆಯನ್ನು ಈ ಕಾರು ಹೊಂದಿದೆ ಎಂದು ಕಂಪನಿ ಹೇಳಿದೆ. ಹೊಸ ಹೈಬ್ರಿಡ್-ಎಲೆಕ್ಟ್ರಿಕ್ SUV LED DRL ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಕಾರು ಹೆಡ್-ಅಪ್ ಡಿಸ್ಪ್ಲೇ ಮತ್ತು 360-ಡಿಗ್ರಿ ವ್ಯೂ ಕ್ಯಾಮೆರಾದೊಂದಿಗೆ ಬರುತ್ತದೆ.

ಹೊಸ ಹೈರಿಡರ್‌ನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಲಭ್ಯವಿದೆ. ಮಾಲೀಕರು ಕಾರಿನ ಎಸಿಯನ್ನು ರಿಮೋಟ್ ಮೂಲಕ ಆನ್ ಮತ್ತು ಆಫ್ ಮಾಡಬಹುದು. ಈ ಕಾರಿನ ಬೆಲೆಯನ್ನು 10.5 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳವರೆಗೆ ನಿರೀಕ್ಷಿಸಬಹುದು.
Published On - 10:39 am, Sat, 2 July 22




