ಅಪ್ರಾಪ್ತೆ ಆಗಿದ್ದಾಗ ಲೈಂಗಿಕ ಶೋಷಣೆ: ಮರುಕ ವ್ಯಕ್ತಪಡಿಸಿದವರಿಗೆ ಒಂದೇ ಮಾತಲ್ಲಿ ಉತ್ತರಿಸಿದ ಕುಬ್ರಾ ಸೇಠ್​

ಸೋಶಿಯಲ್ ಮೀಡಿಯಾದಲ್ಲಿ ಕುಬ್ರಾ ಪರ ಅನೇಕರು ಧ್ವನಿ ಎತ್ತಿದ್ದರು. ಕುಬ್ರಾ ಪಾಲಿಗೆ ಆ ಘಟನೆ ಮುಗಿದು ಹೋದ ಅಧ್ಯಾಯ. ಅದನ್ನೇ ಅವರು ಒತ್ತಿ ಹೇಳಿದ್ದಾರೆ.

ಅಪ್ರಾಪ್ತೆ ಆಗಿದ್ದಾಗ ಲೈಂಗಿಕ ಶೋಷಣೆ: ಮರುಕ ವ್ಯಕ್ತಪಡಿಸಿದವರಿಗೆ ಒಂದೇ ಮಾತಲ್ಲಿ ಉತ್ತರಿಸಿದ ಕುಬ್ರಾ ಸೇಠ್​
ಕುಬ್ರಾ
TV9kannada Web Team

| Edited By: Rajesh Duggumane

Jul 01, 2022 | 4:00 PM

ನಟಿ ಕುಬ್ರಾ ಸೇಠ್ (Kubbra Sait) ಅವರು ಇತ್ತೀಚೆಗೆ ತಮ್ಮ ಆತ್ಮಕಥನ ಬಿಡುಗಡೆ ಮಾಡಿದ್ದರು. ‘ಓಪನ್​ ಬುಕ್’ (Open Book) ಹೆಸರಿನ ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ನಡೆದ ಸಾಕಷ್ಟು ಘಟನೆಗಳನ್ನು ಅವರು ವಿವರಿಸಿದ್ದರು. ಆ ಪೈಕಿ 17ನೇ ವಯಸ್ಸಿಗೆ ಅವರು ಲೈಂಗಿಕ ಶೋಷಣೆಗೆ ಒಳಗಾಗಿದ್ದರು ಎಂಬುದು ಕೂಡ ಒಂದು. ಈ ಘಟನೆ ಬಗ್ಗೆ ಹೇಳಿಕೊಂಡಾಗ ಅನೇಕರು ಮರುಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕುಬ್ರಾ ಮಾತನಾಡಿದ್ದಾರೆ. ಜನರು ಅನುಕಂಪ ತೋರಲಿ ಎಂದು ನಾನು ಇದನ್ನು ಬರೆದಿಲ್ಲ ಎಂದು ಅವರು ಹೇಳಿದ್ದಾರೆ.

ಕುಬ್ರಾ 17ನೇ ವಯಸ್ಸಿನಲ್ಲಿರುವಾಗ ಅವರ ತಾಯಿಗೆ ರೆಸ್ಟೋರೆಂಟ್​ನ ಮಾಲೀಕ ಹಣದ ಸಹಾಯ ಮಾಡಿದ್ದ. ಆತ ಪದೇಪದೇ ಕುಬ್ರಾ ಮನೆಗೆ ಬರುತ್ತಿದ್ದ. ಕುಬ್ರಾರನ್ನು ಕೆಟ್ಟ ರೀತಿಯಲ್ಲಿ ಮುಟ್ಟುತ್ತಿದ್ದ. ಅವರಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ. ಈ ಬಗ್ಗೆ ಕುಬ್ರಾ ಪುಸ್ತಕದಲ್ಲಿ ಬರೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರ ಪರ ಅನೇಕರು ಧ್ವನಿ ಎತ್ತಿದ್ದರು. ಕುಬ್ರಾ ಪಾಲಿಗೆ ಆ ಘಟನೆ ಮುಗಿದು ಹೋದ ಅಧ್ಯಾಯ. ಅದನ್ನೇ ಅವರು ಒತ್ತಿ ಹೇಳಿದ್ದಾರೆ.

‘ನಾನು ಓರ್ವ ಮಾನ್​ಸ್ಟರ್​ನನ್ನು ಜನರ ಮುಂದಿಡಬೇಕು ಎಂದು ಆ ಘಟನೆ ಬಗ್ಗೆ ಹೇಳಿಲ್ಲ. ನಾನು ಬರೆದ ಪುಸ್ತಕವನ್ನು ಓದಿ ತಪ್ಪು ಮಾಡಿದ ವ್ಯಕ್ತಿ ಬಂದು ಕ್ಷಮೆ ಕೇಳಲಿ ಎಂಬುದೂ ನನ್ನ ಉದ್ದೇಶ ಅಲ್ಲ. ನಾನು ಏನು ಎಂಬುದನ್ನು ಅವನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಾನು ಅದಕ್ಕೂ ಮೇಲಿದ್ದೇನೆ. ಆ ಘಟನೆ ನನ್ನ ಮನಸ್ಸಿಗೆ ಹತ್ತಿರವಾಗಿಲ್ಲ. ಅದನ್ನು ಮತ್ತೆ ಪುನರ್ಮನನ ಮಾಡಿಕೊಳ್ಳಬೇಕು ಅನಿಸುವುದಿಲ್ಲ’ ಎಂದಿದ್ದಾರೆ ಕುಬ್ರಾ.

‘ನಾನು ದುಃಖದಲ್ಲಿದ್ದೇನೆ ಎಂದು ಹೇಳುವ ಉದ್ದೇಶ ನನ್ನದಲ್ಲ. ಅಂತಹ ಘಟನೆಯಿಂದ ನಮಗೆ ದುಃಖ ಆಗುತ್ತದೆ ನಿಜ. ಆದರೆ, ನಾನು ಆ ಪರಿಸ್ಥಿತಿಯಿಂದ ಎಷ್ಟೋ ದೂರ ಬಂದಿದ್ದೇನೆ. ನಾನು ಹೊರ ಜಗತ್ತಿನ ವ್ಯಕ್ತಿಯಾಗಿ ಆ ಘಟನೆಯನ್ನು ನೋಡುತ್ತಿದ್ದೇನೆ. ಲೈಂಗಿಕ ಶೋಷಣೆ ಎಂಬುದು ನನ್ನನ್ನು ವ್ಯಾಖ್ಯಾನಿಸುವುದಿಲ್ಲ’ ಎಂಬುದು ಕುಬ್ರಾ ಮಾತು.

ನಟ, ಆ್ಯಂಕರ್​ ಹಾಗೂ ಆರ್​ಸಿಬಿ ಇನ್​ಸೈಡರ್ ಆಗಿರುವ​ ದ್ಯಾನಿಶ್ ಸೇಠ್​ ಸಹೋದರಿಯೇ ಕುಬ್ರಾ ಸೇಠ್. ಅವರು ಕೂಡ​ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವೆಬ್​ ಸೀರಿಸ್​ನಲ್ಲಿ ಮಿಂಚಿರುವ ಅವರಿಗೆ ಹಾಲಿವುಡ್​ನಿಂದಲೂ ಆಫರ್​ ಇದೆ. ‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ಕುಬ್ರಾ ಸೇಠ್​ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಅತ್ತಿದ್ದ ಕುಬ್ರಾ ಸೇಠ್​

ಇದನ್ನೂ ಓದಿ

‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada