Emergency: ನಟ ಅನುಪಮ್​ ಖೇರ್​ಗೆ ‘ಎಮರ್ಜೆನ್ಸಿ’ ಚಿತ್ರದಲ್ಲೊಂದು ಮುಖ್ಯ ಪಾತ್ರ; ಇಲ್ಲಿದೆ ಫಸ್ಟ್​ ಲುಕ್​

Kangana Ranaut | Anupam Kher: ಕಂಗನಾ ರಣಾವತ್​ ನಟನೆಯ ‘ಎಮರ್ಜೆನ್ಸಿ’ ಚಿತ್ರದಲ್ಲಿ ಅನುಪಮ್​ ಖೇರ್ ಅವರಿಗೆ ಪ್ರಮುಖ ಪಾತ್ರ ಸಿಕ್ಕಿದೆ. ಇದು ಅವರ 527ನೇ ಸಿನಿಮಾ ಎಂಬುದು ವಿಶೇಷ.

Emergency: ನಟ ಅನುಪಮ್​ ಖೇರ್​ಗೆ ‘ಎಮರ್ಜೆನ್ಸಿ’ ಚಿತ್ರದಲ್ಲೊಂದು ಮುಖ್ಯ ಪಾತ್ರ; ಇಲ್ಲಿದೆ ಫಸ್ಟ್​ ಲುಕ್​
ಕಂಗನಾ ರಣಾವತ್, ಅನುಪಮ್ ಖೇರ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 22, 2022 | 4:14 PM

ಬಾಲಿವುಡ್​ನಲ್ಲಿ ನಟ ಅನುಪಮ್​ ಖೇರ್​ (Anupam Kher) ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲ ಬಗೆಯ ಪಾತ್ರಗಳಿಗೂ ಬಣ್ಣ ಹಚ್ಚುವ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ವರ್ಷ ತೆರೆಕಂಡ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ಅವರು ಮಾಡಿದ್ದ ಕಾಶ್ಮೀರಿ ಪಂಡಿತನ ಪಾತ್ರ ಸಖತ್​ ಹೈಲೈಟ್​ ಆಗಿತ್ತು. ಈಗ ಅವರಿಗೆ ‘ಎಮರ್ಜೆನ್ಸಿ’ (Emergency) ಸಿನಿಮಾದಲ್ಲಿ ಕೂಡ ಒಂದು ಪ್ರಮುಖ ಪಾತ್ರ ನೀಡಲಾಗಿದೆ. ಹೌದು, ಈ ಬಹುನಿರೀಕ್ಷಿತ ಚಿತ್ರದಲ್ಲಿ ಅವರು ಜಯಪ್ರಕಾಶ್​ ನಾರಾಯಣ್​ ಪಾತ್ರವನ್ನು ಮಾಡುತ್ತಿದ್ದಾರೆ. ಈಗ ಆ ಪಾತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ಈ ಸಿನಿಮಾಗೆ ಕಂಗನಾ ರಣಾವತ್​ ನಾಯಕಿ ಮತ್ತು ನಿರ್ದೇಶಕಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ರಣಾವತ್​ (Kangana Ranaut) ಮಾಡುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ‘ಎಮರ್ಜೆನ್ಸಿ’ ಸಿನಿಮಾ ತಂಡದಿಂದ ಕಂಗನಾ ರಣಾವತ್ ಅವರ ಫಸ್ಟ್​ ಲುಕ್​ ಪೋಸ್ಟರ್​ ಟೀಸರ್​ ರಿಲೀಸ್​ ಆಗಿತ್ತು. ಇಂದಿರಾ ಗಾಂಧಿ ಅವತಾರದಲ್ಲಿ ಕಂಗನಾರನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಈಗ ಅನುಪಮ್​ ಖೇರ್​ ಅವರ ಪೋಸ್ಟರ್​ ಹೊರಬಂದಿದೆ. ಈ ಲುಕ್​ ಕೂಡ ಸಿನಿಪ್ರಿಯರಿಗೆ ಇಷ್ಟ ಆಗಿದೆ. ಇನ್ನೂ ಹಲವು ರಾಜಕಾರಣಿಗಳ ಪಾತ್ರ ಈ ಸಿನಿಮಾದಲ್ಲಿ ಇರಲಿದ್ದು, ಆ ಪಾತ್ರಗಳನ್ನು ಯಾವ ಕಲಾವಿದರು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ
Image
Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​
Image
‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ
Image
ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ
Image
ಖ್ಯಾತ ನಟ ಅನುಪಮ್​ ಖೇರ್​​ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ

‘ಭಾರತದ ಇತಿಹಾಸದಲ್ಲಿ ಮಹಾತ್ಮ ಗಾಂಧಿ ನಂತರದ ಅತಿ ಹೆಚ್ಚು ಪ್ರಬಲ ವ್ಯಕ್ತಿ ಆಗಿದ್ದವರು ಜಯಪ್ರಕಾಶ್​ ನಾರಾಯಣ್​. ಜನರ ಮೇಲೆ ಅವರು ಬೀರಿದ ಪ್ರಭಾವ ಅಪಾರ. ಅವರ ಪಾತ್ರಕ್ಕೆ ಅನುಪಮ್​ ಖೇರ್​ ಹೆಚ್ಚು ಸೂಕ್ತ ಆಗುತ್ತಾರೆ. ಅವರು ಈ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಕ್ಕೆ ತುಂಬ ಸಂತಸ ಆಗಿದೆ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

ಕಂಗನಾ ರಣಾವತ್​ ಅವರ ವೃತ್ತಿಜೀವನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಹುಮುಖ್ಯ ಆಗಲಿದೆ. ಅದಕ್ಕಾಗಿ ಅವರು ಸಖತ್​ ತಯಾರಿ ಮಾಡಿಕೊಂಡು ಶೂಟಿಂಗ್​ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಜಯಪ್ರಕಾಶ್​ ನಾರಾಯಣ್​ ಅವರ ಪಾತ್ರವನ್ನು ಮಾಡುತ್ತಿರುವುದಕ್ಕೆ ಅನುಪಮ್​ ಖೇರ್​ ಅವರಿಗೆ ಹೆಮ್ಮೆ ಇದೆ. ಇದು ಅವರ 527ನೇ ಸಿನಿಮಾ ಎಂಬುದು ವಿಶೇಷ. ಈ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Published On - 4:14 pm, Fri, 22 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ