Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​

Mahima Chaudhary | Anupam Kher: ಕ್ಯಾನ್ಸರ್​ನಿಂದಾಗಿ ಮಹಿಮಾ ಚೌಧರಿ ಅವರ ಜೀವನದಲ್ಲಿ ಹಲವು ಘಟನೆಗಳು ಎದುರಾದವು. ಇತರೆ ಕ್ಯಾನ್ಸರ್​ ರೋಗಿಗಳನ್ನು ನೋಡಿ ಅವರು ಧೈರ್ಯ ತಂದುಕೊಂಡರು.

Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​
ಮಹಿಮಾ ಚೌಧರಿ, ಅನುಪಮ್ ಖೇರ್
Follow us
TV9 Web
| Updated By: ಮದನ್​ ಕುಮಾರ್​

Updated on: Jun 09, 2022 | 4:07 PM

ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮಹಿಮಾ ಚೌಧರಿ (Mahima Chaudhary) ಅವರ ಅಭಿಮಾನಿಗಳಿಗೆ ಎರಡು ಸುದ್ದಿ ಇದೆ. ಒಂದು ಬೇಸರದ ಸುದ್ದಿ, ಇನ್ನೊಂದು ಖುಷಿಯ ಸುದ್ದಿ. ಬೇಸರದ ಸುದ್ದಿ ಏನೆಂದರೆ ಮಹಿಮಾ ಚೌಧರಿ ಅವರಿಗೆ ಸ್ತನ ಕ್ಯಾನ್ಸರ್​ (Breast Cancer) ಆಗಿದೆ.  ಖುಷಿಯ ಸುದ್ದಿ ಏನೆಂದರೆ ಅವರು ಈಗಾಗಲೇ ಆ ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ. ತಮಗೆ ಕ್ಯಾನ್ಸರ್​ ಆಗಿತ್ತು ಎಂಬ ವಿಷಯವನ್ನು ಇಷ್ಟು ದಿನಗಳವರೆಗೆ ಮಹಿಮಾ ಅವರು ಹೇಳಿಕೊಂಡಿರಲಿಲ್ಲ. ಆದರೆ ಈಗ ನಟ ಅನುಪಮ್​ ಖೇರ್​ (Anupam Kher) ಅವರು ಎಲ್ಲವನ್ನೂ ಬಹಿರಂಗಪಡಿಸುವಂತೆ ಮಾಡಿದ್ದಾರೆ. ಮಹಿಮಾ ಮತ್ತು ಅನುಪಮ್​ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅನುಪಮ್​ ಕೇಳಿದ ಹಲವು ಪ್ರಶ್ನೆಗಳಿಗೆ ಮಹಿಮಾ ಉತ್ತರ ನೀಡಿರುವ ಈ ವಿಡಿಯೋ ತುಂಬ ಎಮೋಷನಲ್​ ಆಗಿದೆ. ಮಹಿಮಾ ಈಗ ಸಂಫೂರ್ಣ ಗುಣಮುಖರಾಗಿದ್ದಾರೆ. ಹಾಗಿದ್ದರೂ ಕೂಡ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಅನುಪಮ್​ ಖೇರ್​ ಮನವಿ ಮಾಡಿಕೊಂಡಿದ್ದಾರೆ.

ತಮಗೆ ಮೊದಲ ಬಾರಿಗೆ ಕ್ಯಾನ್ಸರ್​ ಇದೆ ಎಂಬುದು ಗೊತ್ತಾದಾಗ ತಮ್ಮ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಮಹಿಮಾ ಚೌಧರಿ ವಿವರಿಸಿದ್ದಾರೆ. ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದುಕೊಂಡಿದ್ದರಿಂದ ಅವರ ತಲೆ ಕೂದಲು ಉದುರಿ ಹೋಗಿದೆ. ಹಾಗಾಗಿ ಅವರು ವಿಗ್​ ಧರಿಸಿ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಕ್ಯಾನ್ಸರ್​ನಿಂದಾಗಿ ಮಹಿಮಾ ಅವರ ಜೀವನದಲ್ಲಿ ಹಲವು ಘಟನೆಗಳು ಎದುರಾದವು. ಅನೇಕ ಬಗೆಯ ಜನರನ್ನು ಅವರು ಭೇಟಿ ಮಾಡಬೇಕಾಯಿತು. ಇತರೆ ಕ್ಯಾನ್ಸರ್​ ರೋಗಿಗಳನ್ನು ನೋಡಿ ಧೈರ್ಯ ತಂದುಕೊಂಡ ಮಹಿಮಾ ಅವರು ಈಗ ತಮ್ಮ ಸ್ವಂತ ಅನುಭವವನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ
Image
ಯಶಸ್ವಿಯಾಯ್ತು ಪ್ರಾಯೋಗಿಕ ಚಿಕಿತ್ಸೆ; ಬರಲಿದೆ ಕ್ಯಾನ್ಸರ್​​ ರೋಗದಿಂದ ಗುಣಮುಖ ಮಾಡುವ ಔಷಧಿ
Image
‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಯಶಸ್ಸು: ‘ಏನ್​ ಬೇಕಾದ್ರೂ ಆಗಬಹುದು’ ಅಂತ ಮತ್ತೆ ಹೇಳಿದ ಅನುಪಮ್​ ಖೇರ್​
Image
ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ
Image
Kirron Kher: ಅನುಪಮ್​ ಖೇರ್​ ಪತ್ನಿ, ಖ್ಯಾತ ನಟಿ ಕಿರಣ್​ ಖೇರ್​ ನಿಧನದ ವದಂತಿಗೆ ಬ್ರೇಕ್​

ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ

ಇಂಥ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದ ಮಹಿಮಾ ಚೌಧರಿಗೆ ಅನುಪಮ್​ ಖೇರ್​ ಅವರು ಶಹಬ್ಬಾಸ್​ ಎಂದಿದ್ದಾರೆ. ಕ್ಯಾನ್ಸರ್​ ಅನ್ನು ಮಣಿಸಿದ ಅವರೇ ನಿಜವಾದ ಹೀರೋ ಎಂದು ಬಣ್ಣಿಸಿದ್ದಾರೆ. ಅದೇ ರೀತಿ ಅನುಪಮ್​ ಖೇರ್​ ಅವರ ಒಳ್ಳೆಯತನ ಮತ್ತು ಬೆಂಬಲವನ್ನು ಮಹಿಮಾ ಅವರು ಕೊಂಡಾಡಿದ್ದಾರೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ. ಕಮೆಂಟ್​ಗಳ ಮೂಲಕ ಮಹಿಮಾಗೆ ಧೈರ್ಯ ತುಂಬಿದ್ದಾರೆ.

View this post on Instagram

A post shared by Anupam Kher (@anupampkher)

ಈ ವರ್ಷ ತೆರೆಕಂಡ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಿಂದ ಅನುಪಮ್​ ಖೇರ್​ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಜತೆಗೆ ಫಿಟ್ನೆಸ್​ ಕಡೆಗೂ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆ ಕುರಿತು ಕೂಡ ಅವರು ಕೆಲವು ದಿನಗಳ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ