Sonu Sood: 4 ಕಾಲು, 4 ಕೈ ಇರುವ ಬಾಲಕಿಗೆ ಸರ್ಜರಿ ಮಾಡಿಸಿದ ಸೋನು ಸೂದ್​; ರಿಯಲ್​ ಹೀರೋಗೆ ಜನರ ಆಶೀರ್ವಾದ

ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಸೋನು ಸೂದ್​ಗೆ ಭೇಷ್​ ಎಂದಿದ್ದಾರೆ. ಸುನೀಲ್ ಶೆಟ್ಟಿ, ಇಶಾ ಗುಪ್ತಾ ಸೇರಿದಂತೆ ಅನೇಕರು ಸೋನು ಸೂದ್​ ಅವರನ್ನು ಪ್ರಶಂಸಿಸಿದ್ದಾರೆ.

Sonu Sood: 4 ಕಾಲು, 4 ಕೈ ಇರುವ ಬಾಲಕಿಗೆ ಸರ್ಜರಿ ಮಾಡಿಸಿದ ಸೋನು ಸೂದ್​; ರಿಯಲ್​ ಹೀರೋಗೆ ಜನರ ಆಶೀರ್ವಾದ
ಬಾಲಕಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ ಸೋನು ಸೂದ್
Follow us
TV9 Web
| Updated By: ಮದನ್​ ಕುಮಾರ್​

Updated on:Jun 10, 2022 | 12:28 PM

ನಟ ಸೋನು ಸೂದ್​ (Sonu Sood) ಅವರನ್ನು ಜನರು ದೇವರ ರೀತಿಯಲ್ಲಿ ಕಾಣುತ್ತಾರೆ. ಅದಕ್ಕೆ ಕಾರಣ ಆಗಿರುವುದು ಅವರ ರಿಯಲ್​ ಲೈಫ್​ ವ್ಯಕ್ತಿತ್ವ. ಲೆಕ್ಕವಿಲ್ಲದಷ್ಟು ಜನರಿಗೆ ಅವರು ಸಹಾಯ ಮಾಡಿದ್ದಾರೆ. ಮೊದಲ ಬಾರಿಗೆ ಲಾಕ್​ಡೌನ್​ ಆದಾಗ ಸೋನು ಸೂದ್​ ಅವರು ಜನಪರ ಕಾರ್ಯಗಳನ್ನು ಮಾಡಲು ಆರಂಭಿಸಿದರು. ಸೂದ್​ ಚಾರಿಟಿ ಫೌಂಡೇಷನ್ (Sood Charity Foundation) ಮೂಲಕ ಇಂದಿಗೂ ಅವರು ಈ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದ್ದಾರೆ. ಅವರಿಂದ ಸಹಾಯ ಕೋರಿ ಪ್ರತಿ ದಿನ ನೂರಾರು ಮಂದಿ ಮನವಿ ಸಲ್ಲಿಸುತ್ತಾರೆ. ಆ ಪೈಕಿ ಯೋಗ್ಯವಾದವರಿಗೆ ಸೋನು ಸೂದ್​ ಸಹಾಯ ಮಾಡುತ್ತಾರೆ. ಈಗ ಅವರು ಬಾಲಕಿಯೊಬ್ಬಳಿಗೆ ಶಸ್ತ್ರ ಚಿಕಿತ್ಸೆ (Surgery) ಮಾಡಿಸಿ ಗಮನ ಸೆಳೆದಿದ್ದಾರೆ. 4 ಕೈ ಮತ್ತು 4 ಕಾಲುಗಳನ್ನು ಹೊಂದಿದ್ದ ಚಾಹುಮುಖಿ ಎಂಬ ಬಾಲಕಿಗೆ ಹೊಸ ಜೀವನ ಸಿಕ್ಕಂತೆ ಆಗಿದೆ. ಈ ಕುರಿತು ಸೋನು ಸೂದ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚಾಹುಮುಖಿ ಬಡ ಕುಟುಂಬದಲ್ಲಿ ಜನಿಸಿದ ಮಗು. ಆಕೆ ಹುಟ್ಟುವಾಗ 4 ಕೈ, 4 ಕಾಲು ಇದ್ದಿದ್ದು ಕಂಡು ಪೋಷಕರು ಕಂಗಾಲಾಗಿದ್ದರು. ಶಸ್ತ್ರ ಚಿಕಿತ್ಸೆ ಮಾಡಿಸಲು ಅವರ ಬಳಿ ಹಣ ಇರಲಿಲ್ಲ. ಆಕೆಯ ಬಗ್ಗೆ ತಿಳಿದ ಸೋನು ಸೂದ್​ ಅವರು ನೆರವಿಗೆ ಧಾವಿಸಿದ್ದಾರೆ. ಆಪರೇಷನ್​ಗೆ ಬೇಕಾದ ಹಣವನ್ನು ನೀಡಿದ್ದಲ್ಲದೇ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಂದ್ದಾರೆ. ‘ಬಿಹಾರದ ಈ ಬಾಲಕಿಯ ಆಪರೇಷನ್​ ಯಶಸ್ವಿ ಆಗಿದೆ. ಮನೆಗೆ ತೆರಳಲು ಆಕೆ ಸಿದ್ಧಳಾಗಿದ್ದಾಳೆ’ ಎಂದು ಸೋನು ಸೂದ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ
Image
ಕೆಟ್ಟ ಹಿಂದಿ ಚಿತ್ರಗಳನ್ನು ಮಾಡದಂತೆ ಸೌತ್​ ನನ್ನನ್ನು ಉಳಿಸುತ್ತಿದೆ ಎಂದ ಸೋನು ಸೂದ್
Image
Sonu Sood: ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸೋನು ಸೂದ್​ಗೆ ಹಣ ಬರೋದು ಎಲ್ಲಿಂದ? ಪೂರ್ತಿ ವಿವರ ನೀಡಿದ ನಟ
Image
ಬಿಯರ್​ ದಾನ ಮಾಡಿ ಎಂದು ಸೋನು ಸೂದ್​ಗೆ ಮನವಿ ಮಾಡಿದ ಭೂಪ; ರಿಯಲ್​ ಹೀರೋ ಉತ್ತರ ಏನು?
Image
ಕಾಂಗ್ರೆಸ್​ ಸೇರಿದ ತಂಗಿ ಪರ ಪ್ರಚಾರಕ್ಕೆ ಇಳಿದ ಸೋನು ಸೂದ್​; ನೀವು ಮಾತು ತಪ್ಪಿದಿರಿ ಎಂದ ಫ್ಯಾನ್ಸ್​

ಸೋನು ಸೂದ್ ಅವರ ಈ ಕಾರ್ಯವನ್ನು ಕಂಡು ಜನರು ಮೆಚ್ಚುಗೆ ಸೂಚಿಸಿದ್ದಾರೆ. ‘ನೀವೇ ನಿಜವಾದ ಹೀರೋ’ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಸೋನು ಸೂದ್​ಗೆ ಭೇಷ್​ ಎಂದಿದ್ದಾರೆ. ಸುನೀಲ್ ಶೆಟ್ಟಿ, ಇಶಾ ಗುಪ್ತಾ ಸೇರಿದಂತೆ ಅನೇಕರು ಸೋನು ಸೂದ್​ ಅವರನ್ನು ಪ್ರಶಂಸಿಸಿದ್ದಾರೆ. ಸದ್ಯ ಈ ಫೋಸ್ಟ್​ ವೈರಲ್​ ಆಗಿದೆ.

View this post on Instagram

A post shared by Sonu Sood (@sonu_sood)

ಸೋನು ಸೂದ್​ ಅವರು ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಹಲವು ಆಫರ್​ಗಳು ಅವರಿಗೆ ಬರುತ್ತಿವೆ. ಕೋಟಿಗಟ್ಟಲೆ ಸಂಭಾವನೆ ಪಡೆಯುವ ಅವರು ಅದನ್ನು ಜನಸೇವೆಗೆ ಬಳಸುತ್ತಾರೆ. ಮೊದಲು ವಿಲನ್​ ಆಗಿ ನಟಿಸುತ್ತಿದ್ದ ಅವರಿಗೆ ಈಗ ಆ ರೀತಿಯ ಪಾತ್ರಗಳನ್ನು ನೀಡಲು ಸಾಧ್ಯವಿಲ್ಲ. ಸಿನಿಮಾದಲ್ಲಿಯೂ ಅವರನ್ನು ಹೀರೋ ಆಗಿಯೇ ನೋಡಲು ಜನರು ಬಯಸುತ್ತಿದ್ದಾರೆ. ಅಷ್ಟರಮಟ್ಟಿಗೆ ಸೋನು ಸೂದ್​ ಇಮೇಜ್​ ಬದಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:08 pm, Fri, 10 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ