Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​

Kangana Ranaut | Emergency First Look: ‘ಎಮರ್ಜೆನ್ಸಿ’ ಚಿತ್ರದಲ್ಲಿ ಕಂಗನಾ ರಣಾವತ್​ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾದ ಫಸ್ಟ್​ ಲುಕ್​ ಟೀಸರ್​ ಬಿಡುಗಡೆಯಾಗಿ ಸಖತ್​ ಸದ್ದು ಮಾಡುತ್ತಿದೆ.

Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
ಕಂಗನಾ ರಣಾವತ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 14, 2022 | 1:38 PM

ನಟಿ ಕಂಗನಾ ರಣಾವತ್​ (Kangana Ranaut) ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಎಮರ್ಜೆನ್ಸಿ’ ಚಿತ್ರದಿಂದ ಬಿಗ್​ ಅಪ್​ಡೇಟ್​ ಸಿಕ್ಕಿದೆ. ಈ ಸಿನಿಮಾಗೆ ಶೂಟಿಂಗ್​ ಆರಂಭ ಆಗಿದೆ. ಅಷ್ಟೇ ಅಲ್ಲ, ಚಿಕ್ಕದೊಂದು ಟೀಸರ್​ ಬಿಡುಗಡೆ ಮಾಡಲಾಗಿದೆ. ಈ ಟೀಸರ್​ ಚಿಕ್ಕದಿರಬಹದು. ಆದರೆ ಅದು ಸೃಷ್ಟಿ ಮಾಡುತ್ತಿರುವ ಹವಾ ದೊಡ್ಡದಾಗಿದೆ. ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಕಂಗನಾ ರಣಾವತ್​ ನಿಭಾಯಿಸುತ್ತಿದ್ದಾರೆ. ಫಸ್ಟ್​ಲುಕ್​ ಟೀಸರ್​ ನೋಡಿ ಎಲ್ಲರೂ ಅಚ್ಚರಿ ಹೊರಹಾಕುತ್ತಿದ್ದಾರೆ. ಯಾಕೆಂದರೆ, ಇದರಲ್ಲಿ ಕಂಗನಾ ರಣಾವತ್​ ಅವರು ಥೇಟ್​ ಇಂದಿರಾ ಗಾಂಧಿ (Indira Gandhi) ರೀತಿಯೇ ಕಾಣಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಬಾಡಿ ಲಾಂಗ್ವೇಜ್​, ಧ್ವನಿ ಏರಿಳಿತ ಕೂಡ ಇಂದಿರಾ ಗಾಂಧಿ ರೀತಿಯೇ ಇದೆ. ಅದನ್ನು ಕಂಡು ಎಲ್ಲರೂ ಕಂಗನಾಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ‘ಎಮರ್ಜೆನ್ಸಿ’ ಫಸ್ಟ್​ಲುಕ್​ (Emergency First Look) ಟೀಸರ್​ ಸಖತ್​ ವೈರಲ್​ ಆಗುತ್ತಿದೆ.

ಕಂಗನಾ ರಣಾವತ್​ ಅವರ ವೃತ್ತಿಜೀವನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಹುಮುಖ್ಯ ಆಗಲಿದೆ. ಅದಕ್ಕಾಗಿ ಅವರು ಸಖತ್​ ತಯಾರಿ ಮಾಡಿಕೊಂಡು ಶೂಟಿಂಗ್​ ಆರಂಭಿಸಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಬೇರೆ ನಟಿಯರು ಮಾಡಿದ್ದಾರೆ. ಆದರೆ ಅವರೆಲ್ಲರಿಗಿಂತಲೂ ಕಂಗನಾ ರಣಾವತ್​ ಅವರ ಲುಕ್​ ಹೆಚ್ಚು ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಕಂಗನಾ ನಟಿಸುವುದು ಮಾತ್ರವಲ್ಲದೇ ನಿರ್ದೇಶನವನ್ನೂ ಮಾಡುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.

ನಟಿ ಕಂಗನಾ ರಣಾವತ್​ ಅವರಿಗೆ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಸಿನಿಮಾ ಮೂಲಕ ಸದ್ದು ಮಾಡಿದ್ದಕ್ಕಿಂತಲೂ ಅವರು ವಿವಾದದಿಂದ ಸುದ್ದಿ ಆಗಿದ್ದೇ ಹೆಚ್ಚು. ‘ಮೆಂಟಲ್​ ಹೈ ಕ್ಯಾ’, ‘ಪಂಗಾ’, ‘ತಲೈವಿ’, ‘ಧಾಕಡ್​’ ಸಿನಿಮಾಗಳ ಮೂಲಕ ಕಂಗನಾ ಸೋತಿದ್ದಾರೆ. ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಿದೆ. ‘ಎಮರ್ಜೆನ್ಸಿ’ ಚಿತ್ರದ ಮೂಲಕ ಅವರು ಮತ್ತೆ ಯಶಸ್ಸಿನ ಹಳಿಗೆ ಮರಳಬಹುದು ಎಂಬ ನಿರೀಕ್ಷೆ ಇದೆ.

Published On - 1:23 pm, Thu, 14 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ