Sushmita Sen: 46ರ ಸುಶ್ಮಿತಾ ಸೇನ್​​​ ಮದುವೆ ಆಗದಿದ್ದರೂ 2 ಮಕ್ಕಳ ತಾಯಿ; 56ರ ಲಲಿತ್​ ಮೋದಿ ಜತೆ ಈಗ ಚಿಗುರಿದೆ ಪ್ರೀತಿ

Sushmita Sen Dating Lalit Modi: ಸುಶ್ಮಿತಾ ಸೇನ್​ ಅವರು ಈವರೆಗೂ ಮದುವೆ ಆಗಿಲ್ಲ. ಈಗ ಅವರು ಲಲಿತ್​ ಮೋದಿ ಜೊತೆಗಿನ ಡೇಟಿಂಗ್ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ.

Sushmita Sen: 46ರ ಸುಶ್ಮಿತಾ ಸೇನ್​​​ ಮದುವೆ ಆಗದಿದ್ದರೂ 2 ಮಕ್ಕಳ ತಾಯಿ; 56ರ ಲಲಿತ್​ ಮೋದಿ ಜತೆ ಈಗ ಚಿಗುರಿದೆ ಪ್ರೀತಿ
ಸುಶ್ಮಿತಾ ಸೇನ್​ ಮಕ್ಕಳು, ಲಲಿತ್​ ಮೋದಿ
Follow us
TV9 Web
| Updated By: ಮದನ್​ ಕುಮಾರ್​

Updated on:Jul 15, 2022 | 7:46 AM

ನಟಿ ಸುಶ್ಮಿತಾ ಸೇನ್​ (Sushmita Sen) ಅವರು ಬಾಲಿವುಡ್​ನಲ್ಲಿ ಸಖತ್​ ಜನಪ್ರಿಯತೆ ಹೊಂದಿದ್ದಾರೆ. ಫ್ಯಾಷನ್​ ಜಗತ್ತಿನಲ್ಲಿ ಮಿಂಚಿದ ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಎರಡೂ ಕ್ಷೇತ್ರದಲ್ಲಿ ಅವರಿಗೆ ಯಶಸ್ಸು ಸಿಕ್ಕಿತು. ನಟಿಯಾಗಿ, ಮಾಡೆಲ್​ ಆಗಿ ಅವರು ಗೆಲುವು ಸಾಧಿಸಿದರು. ವೈಯಕ್ತಿಕ ಜೀವನದಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಅನೇಕರಿಗೆ ಅಚ್ಚರಿ ಉಂಟು ಮಾಡಿವೆ. ವಯಸ್ಸಿನಲ್ಲಿ ತಮಗಿಂತ 15 ವರ್ಷ ಚಿಕ್ಕ ಯುವಕನ ಜೊತೆ ಅವರು ಡೇಟಿಂಗ್​ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು. ಈಗ ಅವರು ತಮಗಿಂತ 10 ವರ್ಷ ಹಿರಿಯರಾದ ಲಲಿತ್​ ಮೋದಿ (Lalit Modi) ಜೊತೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಈವರೆಗೂ ಮದುವೆ ಆಗದ ಸುಶ್ಮಿತಾ ಸೇನ್​ ಅವರಿಗೆ ಇಬ್ಬರು ಮಕ್ಕಳು (Sushmita Sen Children) ಇದ್ದಾರೆ.

18ನೇ ವಯಸ್ಸಿನಲ್ಲೇ ಸುಶ್ಮಿತಾ ಸೇನ್​ ಅವರು ಮಿಸ್​ ಯೂನಿವರ್ಸ್​ ಮತ್ತು ಮಿಸ್​ ಇಂಡಿಯಾ ಕಿರೀಟ ಪಡೆದು ಬೀಗಿದರು. ಬಳಿಕ ಅವರಿಗೆ ಚಿತ್ರರಂಗದಿಂದ ಹೇರಳ ಅವಕಾಶ ಬಂತು. ತಮ್ಮ 24ನೇ ವಯಸ್ಸಿನಲ್ಲಿ ಅವರು ಹೆಣ್ಣು ಮಗುವನ್ನು ದತ್ತು ಪಡೆಯುವ ತೀರ್ಮಾನಕ್ಕೆ ಬಂದರು. ಆಗ ಅವರ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ಆಗದೇ ಮಗುವನ್ನು ಸಾಕುವುದು ಕಷ್ಟ ಎಂದು ಕೆಲವರು ಕಿವಿಮಾತು ಹೇಳಿದ್ದರು. ಆದರೆ ಅವುಗಳಿಗೆ ಸುಶ್ಮಿತಾ ಸೇನ್​ ತಲೆ ಕೆಡಿಸಿಕೊಳ್ಳಲಿಲ್ಲ. 2000ನೇ ಇಸವಿಯಲ್ಲಿ ರೀನೀ ಎಂಬ ಹೆಣ್ಣು ಮಗಳನ್ನು ಅವರು ದತ್ತು ಪಡೆದುಕೊಂಡರು. 2010ರಲ್ಲಿ ಆಲಿಶಾ ಎಂಬ ಮಗುವನ್ನು ಅವರು ದತ್ತು ಪಡೆದರು.

ಇದನ್ನೂ ಓದಿ
Image
ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ
Image
‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​
Image
ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಹಿಂದಿರುಗಿಸಿದರು ಒಂದು ಪ್ರಮುಖ ವಸ್ತು; ಏನದು?
Image
ಚಿತ್ರರಂಗದಲ್ಲಿ ಮುಂದುವರಿದ ವಿಚ್ಛೇದನ ಸರಣಿ; ಖ್ಯಾತ ನಿರ್ದೇಶಕನ ಡಿವೋರ್ಸ್​

ಸುಶ್ಮಿತಾ ಸೇನ್​ ಅವರು ಈವರೆಗೂ ಮದುವೆ ಆಗಿಲ್ಲ. 2018ರಿಂದ 2022ರವರೆಗೆ ರೋಹ್ಮನ್​ ಶಾಲ್​ ಜೊತೆ ಅವರು ಲಿವ್​-ಇನ್-ರಿಲೇಶನ್​ಶಿಪ್​ನಲ್ಲಿ ಇದ್ದರು. ರೋಹ್ಮಲ್​ ಶಾಲ್​ಗೆ ಈಗಿನ್ನೂ 31 ವರ್ಷ ವಯಸ್ಸು. ಇತ್ತೀಚೆಗೆ ಅವರಿಬ್ಬರ ನಡುವೆ ಬ್ರೇಕಪ್​ ಆಯಿತು. ಐಪಿಎಲ್​ ಮಾಜಿ ಚೇರ್ಮನ್​ ಲಲಿತ್​ ಮೋದಿ ಜೊತೆ ಈಗ ಸುಷ್ಮಿತಾ ಸೇನ್​ ಡೇಟಿಂಗ್​ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಶೀಘ್ರದಲ್ಲೇ ಅವರು ಮದುವೆ ಆಗುತ್ತಾರೆ ಎಂಬ ಮಾಹಿತಿ ಕೂಡ ಕೇಳಿಬಂದಿದೆ. ಲಲಿತ್​ ಮೋದಿ ಅವರಿಗೆ ಈಗ 56 ವರ್ಷ ವಯಸ್ಸು.

ಸುಶ್ಮಿತಾ ಸೇನ್​ ನಟಿಸಿದ ಮೊದಲ ಸಿನಿಮಾ ‘ದಸ್ತಕ್​’. ನಾಯಕಿಯಾಗಿ ನಟಿಸುವುದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿಯೂ ಅವರು ಜನಮನ ಗೆದ್ದರು. ‘ಬೀವಿ ನಂ.1’, ‘ಮೈ ಹೂ ನಾ’, ‘ಮೈ ನೇ ಪ್ಯಾರ್​ ಕ್ಯೂ ಕಿಯಾ’ ಮುಂತಾದವು ಸುಶ್ಮಿತಾ ಸೇನ್​ ಅವರು ಪ್ರಮುಖ ಸಿನಿಮಾಗಳು. ಇತ್ತೀಚೆಗೆ ಅವರು ‘ಆರ್ಯ’ ವೆಬ್​ ಸೀರಿಸ್​ನಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

Published On - 7:45 am, Fri, 15 July 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ