AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sushmita Sen: ಲಲಿತ್ ಮೋದಿ ಜತೆ ಡೇಟಿಂಗ್​ ರಹಸ್ಯ ಬಯಲಾದ ಬಳಿಕ ನಟಿ ಸುಶ್ಮಿತಾ ಸೇನ್​ ಮೊದಲ ಪ್ರತಿಕ್ರಿಯೆ ಏನು?

Sushmita Sen | Lalit Modi: ಒಂದೆಡೆ ಲಲಿತ್​ ಮೋದಿಯವರು ಲವ್​ ಮ್ಯಾಟರ್​ ಲೀಕ್​ ಮಾಡಿದ್ದಾರೆ. ಇನ್ನೊಂದೆಡೆ ಸುಶ್ಮಿತಾ ಸೇನ್​ ಅವರು ಸೂಚ್ಯವಾಗಿ ಒಂದು ವಾಕ್ಯವನ್ನು ಹಂಚಿಕೊಂಡಿದ್ದಾರೆ.

Sushmita Sen: ಲಲಿತ್ ಮೋದಿ ಜತೆ ಡೇಟಿಂಗ್​ ರಹಸ್ಯ ಬಯಲಾದ ಬಳಿಕ ನಟಿ ಸುಶ್ಮಿತಾ ಸೇನ್​ ಮೊದಲ ಪ್ರತಿಕ್ರಿಯೆ ಏನು?
ಲಲಿತ್ ಮೋದಿ, ಸುಶ್ಮಿತಾ ಸೇನ್
TV9 Web
| Edited By: |

Updated on: Jul 15, 2022 | 1:06 PM

Share

ಖ್ಯಾತ ನಟಿ ಸುಶ್ಮಿತಾ ಸೇನ್​ (Sushmita Sen) ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಶೀಘ್ರದಲ್ಲೇ ಅವರು ಹಸೆಮಣೆ ಏರಿದರೂ ಅಚ್ಚರಿ ಏನಿಲ್ಲ. ಈಗ ಅವರಿಗೆ 46 ವರ್ಷ ವಯಸ್ಸು. ತೀರಾ ಇತ್ತೀಚಿನ ದಿನಗಳವರೆಗೆ ರೋಹ್ಮನ್​ ಶಾಲ್​ ಜೊತೆ ಅವರು ಲಿವ್​-ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದರು. ಆದರೆ ಅವರ ಸಂಬಂಧ ಮುರಿದು ಬಿದ್ದ ಬಗ್ಗೆ ಕೆಲವೇ ತಿಂಗಳ ಹಿಂದೆ ಸುದ್ದಿ ಆಯಿತು. ಈಗ ಅವರು ಲಲಿತ್​ ಮೋದಿ ಜೊತೆ ಡೇಟಿಂಗ್ (Dating)​ ಮಾಡುತ್ತಿದ್ದಾರೆ. ಐಪಿಎಲ್​ ಮಾಜಿ ಚೇರ್ಮನ್​ ಆದಂತಹ ಲಲಿತ್​ ಮೋದಿ (Lalit Modi) ಅವರು ಸೋಶಿಯಲ್​ ಮೀಡಿಯಾ ಮೂಲಕ ಈ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. ಇಷ್ಟಾದರೂ ಕೂಡ ಸೈಲೆಂಟ್​ ಆಗಿದ್ದ ಸುಶ್ಮಿತಾ ಸೇನ್​ ಅವರು ಈಗೊಂದು ಪೋಸ್ಟ್​ ಮಾಡಿದ್ದು, ಅದರ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ರಿಲೇಷನ್​ಶಿಪ್​ ಬಗ್ಗೆಯೇ ಅವರು ಪೋಸ್ಟ್​ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಸುಶ್ಮಿತಾ ಸೇನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಫೋಟೋ ಮತ್ತು ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ. ಇತ್ತ, ಲಲಿತ್​ ಮೋದಿಯವರು ಲವ್​ ಮ್ಯಾಟರ್​ ಲೀಕ್​ ಮಾಡಿರುವಾಗ ಸುಶ್ಮಿತಾ ಸೇನ್​ ಅವರು ಸೂಚ್ಯವಾಗಿ ಒಂದು ವಾಕ್ಯವನ್ನು ಹಂಚಿಕೊಂಡಿದ್ದಾರೆ. ‘ಕೆಲವೊಮ್ಮೆ ನೀವು ಕತ್ತಲೆಯ ಜಾಗದಲ್ಲಿ ಮುಳುಗಿದ್ದಾಗ ನಿಮ್ಮನ್ನು ಹುಗಿದಂತೆ ಎನಿಸಬಹುದು. ಆದರೆ ನಿಮ್ಮನ್ನು ಬಿತ್ತಿರಬಹುದಲ್ಲವೇ?’ ಎಂಬ ವಾಕ್ಯವನ್ನು ಅವರು ಪೋಸ್ಟ್​ ಮಾಡಿದ್ದಾರೆ. ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ
Image
Sushmita Sen: 46ರ ಸುಶ್ಮಿತಾ ಸೇನ್​​​ ಮದುವೆ ಆಗದಿದ್ದರೂ 2 ಮಕ್ಕಳ ತಾಯಿ; 56ರ ಲಲಿತ್​ ಮೋದಿ ಜತೆ ಈಗ ಚಿಗುರಿದೆ ಪ್ರೀತಿ
Image
ಬಾಲಿವುಡ್ ನಟಿ ಸುಶ್ಮಿತಾ ಸೇನ್‌ ಜೊತೆ ಲಲಿತ್ ಮೋದಿ ಡೇಟಿಂಗ್
Image
Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?
Image
Oxygen Cylinder: ಆಸ್ಪತ್ರೆಗೆ ಆಕ್ಸಿಜನ್​ ನೀಡಲು ಮುಂದಾದ ನಟಿ ಸುಶ್ಮಿತಾ ಸೇನ್​​ಗೆ ತಪ್ಪಲಿಲ್ಲ ಟ್ರೋಲ್ ಕಾಟ

18ನೇ ವಯಸ್ಸಿನಲ್ಲೇ ಸುಶ್ಮಿತಾ ಸೇನ್​ ಅವರು ಮಿಸ್​ ಯೂನಿವರ್ಸ್​ ಮತ್ತು ಮಿಸ್​ ಇಂಡಿಯಾ ಕಿರೀಟ ಪಡೆದು ಬೀಗಿದರು. ಬಳಿಕ ಅವರಿಗೆ ಚಿತ್ರರಂಗದಿಂದ ಹೇರಳ ಅವಕಾಶ ಬಂತು. ತಮ್ಮ 24ನೇ ವಯಸ್ಸಿನಲ್ಲಿ ಅವರು ಹೆಣ್ಣು ಮಗುವನ್ನು ದತ್ತು ಪಡೆಯುವ ತೀರ್ಮಾನಕ್ಕೆ ಬಂದರು. ಆಗ ಅವರ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ಆಗದೇ ಮಗುವನ್ನು ಸಾಕುವುದು ಕಷ್ಟ ಎಂದು ಕೆಲವರು ಕಿವಿಮಾತು ಹೇಳಿದ್ದರು. ಆದರೆ ಅವುಗಳಿಗೆ ಸುಶ್ಮಿತಾ ಸೇನ್​ ತಲೆ ಕೆಡಿಸಿಕೊಳ್ಳಲಿಲ್ಲ. 2000ನೇ ಇಸವಿಯಲ್ಲಿ ರೀನೀ ಎಂಬ ಹೆಣ್ಣು ಮಗಳನ್ನು ಅವರು ದತ್ತು ಪಡೆದುಕೊಂಡರು. 2010ರಲ್ಲಿ ಆಲಿಶಾ ಎಂಬ ಮಗುವನ್ನು ಅವರು ದತ್ತು ಪಡೆದರು.

ಸುಶ್ಮಿತಾ ಸೇನ್​ ನಟಿಸಿದ ಮೊದಲ ಸಿನಿಮಾ ‘ದಸ್ತಕ್​’. ನಾಯಕಿಯಾಗಿ ನಟಿಸುವುದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿಯೂ ಅವರು ಜನಮನ ಗೆದ್ದರು. ಸುಶ್ಮಿತಾ ಸೇನ್​ ಅವರು ಈವರೆಗೂ ಮದುವೆ ಆಗಿಲ್ಲ. 2018ರಿಂದ 2022ರವರೆಗೆ ರೋಹ್ಮನ್​ ಶಾಲ್​ ಜೊತೆ ಅವರು ಲಿವ್​-ಇನ್-ರಿಲೇಶನ್​ಶಿಪ್​ನಲ್ಲಿ ಇದ್ದರು. ರೋಹ್ಮಲ್​ ಶಾಲ್​ಗೆ ಈಗಿನ್ನೂ 31 ವರ್ಷ ವಯಸ್ಸು. ಇತ್ತೀಚೆಗೆ ಅವರಿಬ್ಬರ ನಡುವೆ ಬ್ರೇಕಪ್​ ಆಯಿತು. ಐಪಿಎಲ್​ ಮಾಜಿ ಚೇರ್ಮನ್​ ಲಲಿತ್​ ಮೋದಿ ಜೊತೆ ಈಗ ಸುಷ್ಮಿತಾ ಸೇನ್​ ಡೇಟಿಂಗ್​ ಮಾಡುತ್ತಿರುವುದು ಜಗಜ್ಜಾಹೀರಾಗಿದೆ.

ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು