AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚೇರಿಗೆ ಮರಳಿದ ಭುವಿಗೆ ಮಾಲೆ ಹಾಕಿ ಸ್ವಾಗತ; ಸಾನಿಯಾ ಮಾಡಿದ್ದೇನು?

ಮಾಲಾ ಎಜ್ಯುಕೇಷನ್ ಸಂಸ್ಥೆಗೆ ಸಾನಿಯಾ ಎಂಡಿ. ಆದರೆ, ಅವಳಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿಲ್ಲ. ಇದು ಅವಳಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅವಳಿಗೆ ಬೇಸರವೂ ಇದೆ. ಆದರೆ, ಹಲ್ಲು ಕಿತ್ತ ಹಾವಿನಂತೆ ಇದ್ದಾಳೆ.

ಕಚೇರಿಗೆ ಮರಳಿದ ಭುವಿಗೆ ಮಾಲೆ ಹಾಕಿ ಸ್ವಾಗತ; ಸಾನಿಯಾ ಮಾಡಿದ್ದೇನು?
ಭುವಿ-ಸಾನಿಯಾ
TV9 Web
| Edited By: |

Updated on: Jul 15, 2022 | 6:30 AM

Share

‘ಕನ್ನಡತಿ’ ಧಾರಾವಾಹಿ (Kannadathi Serial) ಈಗ ಪ್ರಮುಖ ಘಟ್ಟ ದಾಟಿದೆ. ಹರ್ಷ ಹಾಗೂ ಭುವಿಯ ಮದುವೆ ಪೂರ್ಣಗೊಂಡಿದೆ. ಇನ್ನುಮುಂದೆ ಧಾರಾವಾಹಿ ಬೇರೆಯದೇ ರೀತಿಯಲ್ಲಿ ಸಾಗಲಿದೆ. ಭುವಿಗೆ (Bhuvi) ಸಾಕಷ್ಟು ಅಡೆತಡೆಗಳು ಎದುರಾಗಲಿವೆ. ಇದನ್ನು ಅವಳು ಹೇಗೆ ನಿಭಾಯಿಸುತ್ತಾರೆ ಅನ್ನೋದು ಸದ್ಯದ ಕುತೂಹಲ. ಈ ಮಧ್ಯೆ ಭುವಿಯನ್ನು ಸಿಕ್ಕಿಸಲು ಸಾನಿಯಾ ಸಾಕಷ್ಟು ಕಸರತ್ತು ಮಾಡುತ್ತಿದ್ದಾಳೆ. ಕಚೇರಿಗೆ ಮೊದಲ ದಿನ ಬಂದ ಭುವಿಗೆ ಮುಜುಗರ ತಂದಿದ್ದಾಳೆ ಸಾನಿಯಾ.

ಮಾಲಾ ಎಜ್ಯುಕೇಷನ್ ಸಂಸ್ಥೆಗೆ ಸಾನಿಯಾ ಎಂಡಿ. ಆದರೆ, ಅವಳಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿಲ್ಲ. ಇದು ಅವಳಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅವಳಿಗೆ ಬೇಸರವೂ ಇದೆ. ಆದರೆ, ಹಲ್ಲು ಕಿತ್ತ ಹಾವಿನಂತೆ ಇದ್ದಾಳೆ. ರತ್ನಮಾಲಾ ಯಾವ ರೀತಿಯಲ್ಲಿ ಹೇಳುತ್ತಾಳೋ ಆ ರೀತಿ ನಡೆಯುತ್ತಾಳೆ. ಈಗ ಹರ್ಷನ ಹೆಂಡತಿ ಆದ ಮೇಲೆ ಭುವಿಗೆ ಸಿಗುತ್ತಿರುವ ಗೌರವ ಹೆಚ್ಚಿದೆ. ಹರ್ಷನನ್ನು ಮದುವೆ ಆಗಿ ಬಂದ ಕಾರಣಕ್ಕೆ ಕಚೇರಿಯಲ್ಲಿ ಭುವಿಗೆ ಮಾಲೆ ಹಾಕಿ ಸ್ವಾಗತ ಮಾಡಲಾಗಿದೆ. ಇದು ಅವಳಿಗೆ ಮುಜುಗರ ತಂದಿದೆ. ಈ ಮಧ್ಯೆ ಸಾನಿಯಾ ಮತ್ತೊಂದು ಕೆಲಸ ಮಾಡಿದ್ದಾಳೆ.

ಇದನ್ನೂ ಓದಿ
Image
ಹರ್ಷ-ಭುವಿ ಮದುವೆಯಿಂದ ಅರ್ಧಕ್ಕೆ ನಿರ್ಗಮಿಸಿದ ‘ಕನ್ನಡತಿ’ಯ ರತ್ನಮಾಲಾ ನಿಜಕ್ಕೂ ಇರೋದೆಲ್ಲಿ? ಇಲ್ಲಿದೆ ಉತ್ತರ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಸಾನಿಯಾ ಕಚೇರಿಯ ಎಂಡಿ. ಭುವಿ ಆ ಕಚೇರಿಯಲ್ಲಿ ಕೇವಲ ಸಿಬ್ಬಂದಿ. ಆದಾಗ್ಯೂ ಸ್ವತಃ ಸಾನಿಯಾ ಹೂವಿನ ಗುಚ್ಚ ನೀಡಿ ಭುವಿಯನ್ನು ಸ್ವಾಗತಿಸಿದ್ದಾಳೆ. ಎಂಡಿಯೇ ಈ ರೀತಿ ಮಾಡಿದ್ದನ್ನು ನೋಡಿ ಭುವಿ ಮುಜುಗರಕ್ಕೆ ಒಳಗಾದಳು. ಹರ್ಷನ ಹೆಂಡತಿ ಎಂಬ ಕಾರಣಕ್ಕೆ ಅಟೆಂಡರ್ ಬಂದು ಅವಳಿಗೆ ಛತ್ರಿ ಹಿಡಿದಿದ್ದು ಕೂಡ ಭುವಿಗೆ ಇರಿಸುಮುರಿಸು ಉಂಟು ಮಾಡಿತು.

ಇದನ್ನೂ ಓದಿ: ಹರ್ಷ-ಭುವಿ ಮದುವೆಯಿಂದ ಅರ್ಧಕ್ಕೆ ನಿರ್ಗಮಿಸಿದ ‘ಕನ್ನಡತಿ’ಯ ರತ್ನಮಾಲಾ ನಿಜಕ್ಕೂ ಇರೋದೆಲ್ಲಿ? ಇಲ್ಲಿದೆ ಉತ್ತರ

ಈಗಾಗಲೇ ರತ್ನಮಾಲಾ ಕಡೆಯಿಂದ ಭುವಿಗೆ ಸೂಚನೆ ಒಂದು ಬಂದಿದೆ. ಎಲ್ಲಾ ಜವಾಬ್ದಾರಿಗಳನ್ನು ನೀನೆ ವಹಿಸಿಕೊಳ್ಳಬೇಕು ಎಂದು ಭುವಿಗೆ ಸೂಚನೆ ನೀಡಿದ್ದಾಳೆ ರತ್ನಮಾಲಾ. ಆದರೆ, ಇದನ್ನು ಅವಳಿಗೆ ಹೇಗೆ ಸ್ವೀಕರಿಸಬೇಕು ಎಂಬುದು ತಿಳಿದಿಲ್ಲ. ತನ್ನ ಎದುರು ಎಷ್ಟು ದೊಡ್ಡ ಜವಾಬ್ದಾರಿ ಇದೆ ಎಂಬ ಐಡಿಯಾ ಕೂಡ ಅವಳಿಗೆ ಇಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ