Sania Mirza: ಭಾವನಾತ್ಮಕ ಪೋಸ್ಟ್ ಮೂಲಕ ತನ್ನ ಕೊನೆಯ ವಿಂಬಲ್ಡನ್ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ
Sania Mirza: ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾನಿಯಾ 2009 ಆಸ್ಟ್ರೇಲಿಯನ್ ಓಪನ್, 2012 ಫ್ರೆಂಚ್ ಓಪನ್ ಮತ್ತು 2014 ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 2015ರಲ್ಲಿ ವಿಂಬಲ್ಡನ್, 2016ರಲ್ಲಿ ಯುಎಸ್ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ಗೆದ್ದುಕೊಂಡಿದ್ದರು.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza), ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾದ ವಿಂಬಲ್ಡನ್ (Wimbledon 2022) ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸಾನಿಯಾ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಕ್ರೊಯೇಷಿಯಾದ ಪಾಲುದಾರ ಪಾವಿಕ್ ಅವರೊಂದಿಗೆ ಸೆಮಿಫೈನಲ್‌ನಲ್ಲಿ ಆಡಿದರು. ಇದರೊಂದಿಗೆ ವಿಂಬಲ್ಡನ್ ಚಾಂಪಿಯನ್ ಶಿಪ್ನಲ್ಲಿ ಮಿಶ್ರ ಡಬಲ್ಸ್ ಗೆಲ್ಲಬೇಕೆನ್ನುವ ಸಾನಿಯಾ ಆಸೆ ಕನಸಾಗಿಯೇ ಉಳಿಯಿತು. ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಟೆನಿಸ್ ರಾಣಿಗೆ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾನಿಯಾ 2009 ಆಸ್ಟ್ರೇಲಿಯನ್ ಓಪನ್, 2012 ಫ್ರೆಂಚ್ ಓಪನ್ ಮತ್ತು 2014 ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 2015ರಲ್ಲಿ ವಿಂಬಲ್ಡನ್, 2016ರಲ್ಲಿ ಯುಎಸ್ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ಗೆದ್ದುಕೊಂಡಿದ್ದರು. ಡಬ್ಲ್ಯುಟಿಎ ಸರ್ಕ್ಯೂಟ್‌ನಲ್ಲಿ ಇದು ಕೊನೆಯ ವರ್ಷ ಎಂದು ಸಾನಿಯಾ ಈ ಹಿಂದೆ ಘೋಷಿಸಿದ್ದರು. ವಿಂಬಲ್ಡನ್ ಟೂರ್ನಿಗೆ ವಿದಾಯ ಹೇಳಿದ ಬಳಿಕ ಹೈದರಾಬಾದಿ ಟೆನಿಸ್ ತಾರೆ ಭಾವುಕರಾಗಿ, ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
View this post on Instagram
ಕ್ರೀಡೆ ನಮ್ಮಿಂದ ಬಹಳಷ್ಟು ತೆಗೆದುಕೊಳ್ಳುತ್ತದೆ. ಕ್ರೀಡೆಗಳು ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿವು ಮಾಡುತ್ತವೆ. ಗಂಟೆಗಳ ಕಠಿಣ ಪರಿಶ್ರಮ ಮತ್ತು ಸೋಲಿನ ನಂತರ ನಿದ್ರೆಯಿಲ್ಲದ ರಾತ್ರಿಗಳು ಎದುರಾಗುತ್ತವೆ. ಆದರೆ ಇದೆಲ್ಲವೂ ಅನೇಕ ಪ್ರತಿಫಲಗಳನ್ನು ನೀಡುತ್ತವೆ. ಬೇರೆ ಯಾವುದೇ ಉದ್ಯೋಗಗಳು ಈ ರೀತಿಯ ಏನನ್ನೂ ನೀಡಲು ಸಾಧ್ಯವಿಲ್ಲ. ಹಾಗಾಗಿ ಕ್ರೀಡೆಗೆ ನಾನು ಸದಾ ಚಿರಋಣಿ. ಕಣ್ಣೀರು, ಹೋರಾಟ ಮತ್ತು ಸಂತೋಷ ನನ್ನ ಕ್ರೀಡಾ ಜೀವನದ ಭಾಗವಾಗಿದೆ. ವಿಂಬಲ್ಡನ್‌ನಲ್ಲಿ ಆಡುವುದೇ ಒಂದು ಪವಾಡ. ಈ ಬಾರಿ ನಾನು ವಿಂಬಲ್ಡನ್‌ನಲ್ಲಿ ವೀಕ್ಷಕ್ಷಿಯಾಗಿ ಬಿಟ್ಟಿದ್ದೆ. ಕಳೆದ 20 ವರ್ಷಗಳಿಂದ ವಿಂಬಲ್ಡನ್‌ನಲ್ಲಿ ಆಡುವುದು ನನಗೆ ಹೆಮ್ಮೆ ಎನಿಸಿದೆ ಎಂದು ಸಾನಿಯಾ ಭಾವುಕರಾಗಿ ಬರೆದುಕೊಂಡಿದ್ದಾರೆ.



