Wimbledon 2022: ವಿಂಬಲ್ಡನ್ ಮಿಶ್ರ ಡಬಲ್ಸ್​ ಕ್ವಾರ್ಟರ್ ಫೈನಲ್​ಗೆ ಸಾನಿಯಾ ಮಿರ್ಜಾ ಜೋಡಿ ಎಂಟ್ರಿ

Wimbledon 2022: ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಕ್ ಅವರು ವಿಂಬಲ್ಡನ್ ಮಿಶ್ರ ಡಬಲ್ಸ್​ನ ಎರಡನೇ ಸುತ್ತನ್ನು ಆಡದೆ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

Wimbledon 2022: ವಿಂಬಲ್ಡನ್ ಮಿಶ್ರ ಡಬಲ್ಸ್​ ಕ್ವಾರ್ಟರ್ ಫೈನಲ್​ಗೆ ಸಾನಿಯಾ ಮಿರ್ಜಾ ಜೋಡಿ ಎಂಟ್ರಿ
ಸಾನಿಯಾ ಮಿರ್ಜಾ-ಮ್ಯಾಟ್ ಪಾವಿಕ್
TV9kannada Web Team

| Edited By: pruthvi Shankar

Jul 04, 2022 | 4:17 PM

ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಕ್ (Sania Mirza and Mate Pavic) ಅವರು ವಿಂಬಲ್ಡನ್ ಮಿಶ್ರ ಡಬಲ್ಸ್ (Wimbledon mixed doubles)​ನ ಎರಡನೇ ಸುತ್ತನ್ನು ಆಡದೆ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಭಾನುವಾರ ನಡೆದ ಟೂರ್ನಿಯಲ್ಲಿ ಆರನೇ ಶ್ರೇಯಾಂಕದ ಜೋಡಿ ಮುಂದಿನ ಸುತ್ತಿಗೆ ಮುನ್ನಡೆಯಲು ಕಷ್ಟಪಡಬೇಕಾಗಿರಲಿಲ್ಲ. ಎದುರಾಳಿಗಳಾದ ಇವಾನ್ ಡೊಡಿಗ್ ಮತ್ತು ಲತಿಶಾ ಚಾನ್ ವಾಕ್ ಓವರ್ ನೀಡಿದರು. ಹಾಗಾಗಿ ಇಂಡೋ-ಕ್ರೊಯೇಟ್ ಜೋಡಿ ಎರಡನೇ ಸುತ್ತಿನಲ್ಲಿ ಆಡದೆ ಕೊನೆಯ ಎಂಟರ ಘಟ್ಟ ತಲುಪಿತು. ಮೊದಲ ಸುತ್ತಿನಲ್ಲಿ ಶ್ರೇಯಾಂಕ ರಹಿತ ಸ್ಪ್ಯಾನಿಷ್ ಜೋಡಿ ಜಾರ್ಜಿಯಾ ನಟೆಲಾ ಝಲಮಿಡೆಜ್ ಮತ್ತು ಡೇವಿಡ್ ವೇಗಾ ಹೆರ್ನಾಂಡೆಜ್ ಮಿರ್ಜಾ ಜೋಡಿಯ ಎದುರಾಳಿಗಳಾಗಿದ್ದರು. ಬೋನ್ ಟು ಬೋನ್ ಹೋರಾಟದಲ್ಲಿ ಸಾನಿಯಾ-ಪಾವಿಕ್ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದರು.

2011, 2013, 2015 ರ ನಂತರ ಮತ್ತೊಮ್ಮೆ ವಿಂಬಲ್ಡನ್ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಾನಿಯಾ ಮಿರ್ಜಾ ಆಡಲಿದ್ದಾರೆ. ಈ ಬಾರಿ ಅವರ ಜೊತೆಗಾರ ಆರು ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ಕ್ರೊಯೇಷಿಯಾದ ಮ್ಯಾಟ್ ಪಾವಿಕ್ ಆಗಿರುವುದು ಪ್ಲಸ್ ಪಾಯಿಂಟ್. ಇದಕ್ಕೂ ಮುನ್ನ ಮೂರು ಬಾರಿ ಮಿಶ್ರ ಡಬಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮಿರ್ಜಾ ಜೋಡಿ ಸೋತು ಪಂದ್ಯಾವಳಿಯಿಂದ ಹೊರಬಿದ್ದಿತ್ತು. ಸಾನಿಯಾ ತಮ್ಮ ವೃತ್ತಿಜೀವನದ ಕೊನೆಯ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ ಫೈನಲ್​ ಗೆದ್ದು ಸೆಮಿ ಫೈನಲ್​ಗೇರುವ ತವಕದಲ್ಲಿದ್ದಾರೆ. ಭಾರತದ ಟೆನಿಸ್​ನ ಪೋಸ್ಟರ್ ಗರ್ಲ್ ಕ್ರೊಯೇಷಿಯಾದ ಟೆನಿಸ್ ಆಟಗಾರ ಮ್ಯಾಟ್ ಪಾವಿಕ್ ಜೊತೆಗೂಡಿ ಆ ಗುರಿಯತ್ತ ಸಾಗುತ್ತಿದ್ದಾರೆ. ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನಿಂದಲೇ ಹೊರಬಿದ್ದಿದ್ದರೂ, ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ದಾಪುಗಾಲು ಹಾಕುತ್ತಿದ್ದಾರೆ.

ಇದನ್ನೂ ಓದಿ: Wimbledon 2022: ಕೊನೆಯ ವಿಂಬಲ್ಡನ್‌ ಆಡುತ್ತಿರುವ ಸಾನಿಯಾ ಮಿರ್ಜಾಗೆ ಎರಡನೇ ಸುತ್ತಿನಲ್ಲಿ ಅಮೋಘ ಜಯ

ಇದನ್ನೂ ಓದಿ

ಸಾನಿಯಾ ಅವರಂತೆ ಪಾವಿಕ್ ಆರು ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. ಹಾಲಿ ವಿಂಬಲ್ಡನ್ ಬಾಲಕರ ಡಬಲ್ಸ್ ಚಾಂಪಿಯನ್ ಕೂಡ ಆಗಿದ್ದಾರೆ. ಲುಕಾ ಮ್ಯಾಡ್ರಿಚ್ ಟೆನಿಸ್ ಆಟಗಾರ 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಕೊನೆಯ ನಾಲ್ಕರ ಸುತ್ತಿಗೆ ತಲುಪಲು ಸಾನಿಯಾ ಬ್ರೆಜಿಲ್‌ನ ಬ್ರೂನೋ ಸೌರೆಜ್ ಮತ್ತು ಬೀಟ್ರಿಜ್ ಹದದ್ ಮಾಯಾ ಅಥವಾ ಆಸ್ಟ್ರೇಲಿಯಾ-ಕೆನಡಾದ ಜಾನ್ ಪಿಯರ್ಸ್ ಮತ್ತು ಗೇಬ್ರಿಯೆಲಾ ದಬ್ರೊಸ್ಕಿ ಅವರ ಸವಾಲನ್ನು ಎದುರಿಸಬೇಕಾಗಿದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada