MS Dhoni Wedding Anniversary: ಲಂಡನ್​ನಲ್ಲಿ ತಮ್ಮ 12ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಧೋನಿ- ಸಾಕ್ಷಿ

MS Dhoni Wedding Anniversary: ಸಾಕ್ಷಿ ಇಂಟರ್ನ್‌ಶಿಪ್ ಮಾಡುತ್ತಿದ್ದ ಕೋಲ್ಕತ್ತಾದ ಅದೇ ಹೋಟೆಲ್‌ನಲ್ಲಿ ತಂಗಿದ್ದ ಧೋನಿ ಆಗ ತಾನೇ ಟೀಂ ಇಂಡಿಯಾದಲ್ಲಿ ಕಾಯಂ ಸ್ಥಾನ ಪಡೆದಿದ್ದರು. ಈ ವೇಳೆ ಸಾಕ್ಷಿಗೆ ಧೋನಿಯನ್ನು ಆ ಹೋಟೆಲ್​ನ ಮ್ಯಾನೇಜರ್ ಯುಧಾಜಿತ್ ದತ್ತಾ ಪರಿಚಯಿಸಿದ್ದರು.

MS Dhoni Wedding Anniversary: ಲಂಡನ್​ನಲ್ಲಿ ತಮ್ಮ 12ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಧೋನಿ- ಸಾಕ್ಷಿ
ಧೋನಿ ದಂಪತಿಗಳು
TV9kannada Web Team

| Edited By: pruthvi Shankar

Jul 04, 2022 | 3:04 PM

ಎಂಎಸ್ ಧೋನಿ (MS Dhoni) ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ ಜನರ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಅವರ ಕ್ರೇಜ್ ಹೋಗಿಲ್ಲ ಅಥವಾ ಹೋಗುವುದಿಲ್ಲ ಏಕೆಂದರೆ ಅಂತಹ ಚಾಂಪಿಯನ್ ಆಟಗಾರ ಭಾರತ ಕ್ರಿಕೆಟ್‌ನಲ್ಲಿ ಹಿಂದೆಂದೂ ಬಂದಿಲ್ಲ. ಆದರೆ, ಇಂದು ಧೋನಿ ಅವರ 12ನೇ ವಿವಾಹ ವಾರ್ಷಿಕೋತ್ಸ (Wedding Anniversary)ವದ ಕಾರಣ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅಂದರೆ ಧೋನಿ, ಸಾಕ್ಷಿಯವರನ್ನು ವಿವಾಹವಾಗಿ ಇಂದಿಗೆ 12 ವರ್ಷಗಳು ಪೂರ್ಣಗೊಂಡಿವೆ. 2010 ರಲ್ಲಿ, ಈ ದಿನ ಅಂದರೆ ಜುಲೈ 4 ರಂದು, ಧೋನಿ ಮತ್ತು ಸಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ಜೋಡಿಗೆ ಜೀವ ಎಂಬ ಮುದ್ದಾದ ಮಗಳು ಕೂಡ ಇದ್ದಾಳೆ.

ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವದಂದು ಹೆಚ್ಚಾಗಿ ಟೀಮ್ ಇಂಡಿಯಾದೊಂದಿಗೆ ಪ್ರವಾಸದಲ್ಲಿರುತ್ತಿದ್ದರು. ಹೀಗಾಗಿ ಅವರ ಮಡದಿಯೊಂದಿಗೆ ಈ ವಿಶೇಷ ದಿನವನ್ನು ಎಂಜಾಯ್ ಮಾಡಲಾಗುತ್ತಿರಲಿಲ್ಲ. ಆದರೆ ಈಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು, ತಮ್ಮ 12 ನೇ ವಿವಾಹ ವಾರ್ಷಿಕೋತ್ಸವವನ್ನು ಧೋನಿ ಮತ್ತು ಸಾಕ್ಷಿ ಒಟ್ಟಾಗಿ ಲಂಡನ್‌ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: MS Dhoni: ಸಿನಿಮಾ ನಿರ್ಮಾಣಕ್ಕಿಳಿದ ಧೋನಿ! ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ ಕ್ಯಾಪ್ಟನ್ ಕೂಲ್

ಜುಲೈ 4, 2010 ರಂದು ವಿವಾಹವಾದ ಧೋನಿ ಮತ್ತು ಸಾಕ್ಷಿ

ಧೋನಿ 4 ಜುಲೈ 2010 ರಂದು ಸಾಕ್ಷಿಯವರೊಂದಿಗೆ ಡೆಹ್ರಾಡೂನ್‌ನಲ್ಲಿ ವಿವಾಹವಾದರು. ಅವರ ಮದುವೆಯಲ್ಲಿ ಕೇವಲ ಅವರ ಹತ್ತಿರದ್ದವರು, ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಿದ್ದರು. ಈ ಹಿಂದೆ ಧೋನಿ ಜೀವನಾಧಾರಿತ ಸಿನಿಮಾ ಕೂಡ ತಯಾರಾಗಿದ್ದು, ಅದರಲ್ಲಿ ಅವರ ಜೀವನಕ್ಕೆ ಸಂಬಂಧಿಸಿದ ಅಂಶಗಳನ್ನು ತೋರಿಸಲಾಗಿದೆ. ಆದರೆ, ಧೋನಿ ಮತ್ತು ಸಾಕ್ಷಿ ಅವರ ಪ್ರೇಮಕಥೆಯು ಚಿತ್ರದಲ್ಲಿ ತೋರಿಸಿರುವ ಅವರ ಕಥೆಗಿಂತ ಸ್ವಲ್ಪ ಭಿನ್ನವಾಗಿದೆ.

2007 ರಲ್ಲಿ ಭೇಟಿ

ಧೋನಿ ಮತ್ತು ಸಾಕ್ಷಿ ಅವರ ತಂದೆ ರಾಂಚಿಯ ಮ್ಯಾಕಾನ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ರೀತಿಯಾಗಿ ಇಬ್ಬರೂ ಬಾಲ್ಯದಿಂದಲೂ ಪರಸ್ಪರ ತಿಳಿದಿದ್ದರು. ಆದರೆ ನಂತರ ಸಾಕ್ಷಿ ಕುಟುಂಬ ಡೆಹ್ರಾಡೂನ್‌ಗೆ ಸ್ಥಳಾಂತರಗೊಂಡಿತು. ಇದಾದ ನಂತರ 2007ರಲ್ಲಿ ಧೋನಿ ಮತ್ತು ಸಾಕ್ಷಿ ಮತ್ತೊಮ್ಮೆ ಭೇಟಿಯಾದರು. ಈ ಭೇಟಿ ಕೋಲ್ಕತ್ತಾದಲ್ಲಿ ನಡೆದಿತ್ತು. ಸಾಕ್ಷಿ ಇಂಟರ್ನ್‌ಶಿಪ್ ಮಾಡುತ್ತಿದ್ದ ಕೋಲ್ಕತ್ತಾದ ಅದೇ ಹೋಟೆಲ್‌ನಲ್ಲಿ ತಂಗಿದ್ದ ಧೋನಿ ಆಗ ತಾನೇ ಟೀಂ ಇಂಡಿಯಾದಲ್ಲಿ ಕಾಯಂ ಸ್ಥಾನ ಪಡೆದಿದ್ದರು. ಈ ವೇಳೆ ಸಾಕ್ಷಿಗೆ ಧೋನಿಯನ್ನು ಆ ಹೋಟೆಲ್​ನ ಮ್ಯಾನೇಜರ್ ಯುಧಾಜಿತ್ ದತ್ತಾ ಪರಿಚಯಿಸಿದ್ದರು.

ಇದನ್ನೂ ಓದಿ

ಈ ಪರಸ್ಪರ ಭೇಟಿಯ ಬಳಿಕ, ಇಬ್ಬರೂ ಮಾರ್ಚ್ 2008 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಸಾಕ್ಷಿ ಅದೇ ವರ್ಷ ಮುಂಬೈನಲ್ಲಿ ನಡೆದ ಧೋನಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಭೇಟಿಯ ಎರಡು ವರ್ಷಗಳ ನಂತರ, 2010 ರಲ್ಲಿ, ಧೋನಿ ಮತ್ತು ಸಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada