IND vs SL: ಶೆಫಾಲಿ- ಮಂಧಾನ 174 ರನ್‌ಗಳ ಜೊತೆಯಾಟ; ಸರಣಿಯೊಂದಿಗೆ ಭಾರತಕ್ಕೆ 10 ವಿಕೆಟ್‌ ಜಯ

IND vs SL: ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ನಡುವಿನ ಮುರಿಯದ 174 ರನ್‌ಗಳ ಜೊತೆಯಾಟದ ಆಧಾರದ ಮೇಲೆ ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು.

IND vs SL: ಶೆಫಾಲಿ- ಮಂಧಾನ 174 ರನ್‌ಗಳ ಜೊತೆಯಾಟ; ಸರಣಿಯೊಂದಿಗೆ ಭಾರತಕ್ಕೆ 10 ವಿಕೆಟ್‌ ಜಯ
ಸ್ಮೃತಿ ಮಂಧಾನ
TV9kannada Web Team

| Edited By: pruthvi Shankar

Jul 04, 2022 | 4:35 PM

ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ (Smriti Mandhana and Shefali Verma) ನಡುವಿನ ಮುರಿಯದ 174 ರನ್‌ಗಳ ಜೊತೆಯಾಟದ ಆಧಾರದ ಮೇಲೆ ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 174 ರನ್‌ಗಳ ಗುರಿ ನೀಡಿತ್ತು. ಭಾರತ ತಂಡ ಈ ಟಾರ್ಗೆಟ್​ ಅನ್ನು 146 ಎಸೆತಗಳಲ್ಲಿ ಸಾಧಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮಂಧಾನ ಮತ್ತು ಶೆಫಾಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇಬ್ಬರೂ ಸೇರಿ ಶ್ರೀಲಂಕಾ ಬೌಲರ್‌ಗಳನ್ನು ಸಾಕಷ್ಟು ದಂಡಿಸಿದರು. ಈ ಮೊದಲು ಭಾರತದ ಬೌಲರ್ ರೇಣುಕಾ ಸಿಂಗ್ (Renuka Singh) ಅದ್ಭುತ ಬೌಲಿಂಗ್ ಮಾಡಿ 28 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಶ್ರೀಲಂಕಾ ದೊಡ್ಡ ಸ್ಕೋರ್ ಮಾಡುವುದಕ್ಕೆ ಬ್ರೇಕ್ ಹಾಕಿದ್ದರು.

ಇದನ್ನೂ ಓದಿ: ICC Women Ranking: ಎಂಟನೇ ಸ್ಥಾನ ಉಳಿಸಿಕೊಂಡ ಸ್ಮೃತಿ ಮಂಧಾನ; ಹಿಂಬಡ್ತಿ ಪಡೆದ ಜೂಲನ್ ಗೋಸ್ವಾಮಿ

ರೇಣುಕಾ ಮಾರಕ ಬೌಲಿಂಗ್

ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಸ್ವಲ್ಪ ಹೊತ್ತಿನಲ್ಲೇ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಈ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಯಿತು. ರೇಣುಕಾ ಮೊದಲ ಓವರ್‌ನಲ್ಲಿ ಹಾಸಿನಿ ಪೆರೇರಾ ರೂಪದಲ್ಲಿ ಶ್ರೀಲಂಕಾಕ್ಕೆ ಮೊದಲ ಹೊಡೆತ ನೀಡಿದರು. ಇದಾದ ನಂತರ ರೇಣುಕಾ 7 ರನ್‌ಗಳಿಗೆ ವಿಶ್ಮಿ ಅವರನ್ನು ಔಟ್ ಮಾಡುವ ಮೂಲಕ ಎರಡನೇ ಹೊಡೆತ ನೀಡಿದರು. ಇಬ್ಬರೂ ಆರಂಭಿಕರು ಪೆವಿಲಿಯನ್‌ಗೆ ಮರಳಿದ ನಂತರ, ಶ್ರೀಲಂಕಾ ತಂಡಕ್ಕೆ ನಿಂತು ಆಡಲು ಸಾಧ್ಯವಾಗಲಿಲ್ಲ. ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಲೇ ಇದ್ದವು. ಒಂದು ಸಮಯದಲ್ಲಿ ಎಮ್ಮಾ ಕಾಂಚನಾ ಸ್ವಲ್ಪ ಪ್ರತಿರೋಧ ತೋರಿದರು. ಆದರೆ ಅವರಿಗೆ ಇನ್ನೊಂದು ತುದಿಯಲ್ಲಿ ಸರಿಯಾದ ಸಾಥ್ ಸಿಗಲಿಲ್ಲ. ಕಾಂಚನಾ 47 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರನ್ನು ಹೊರತುಪಡಿಸಿ ನೀಲಾಕ್ಷಿ 32 ರನ್ ಗಳಿಸಿದರು. ಈ ಇಬ್ಬರಿಂದಾಗಿ ಶ್ರೀಲಂಕಾ ತಂಡ ನಿಗದಿತ ಓವರ್‌ನಲ್ಲಿ 173 ರನ್ ಗಳಿಸಲಷ್ಟೇ ಶಕ್ತವಾಯಿತು. ರೇಣುಕಾ ಹೊರತಾಗಿ ದೀಪ್ತಿ ಶರ್ಮಾ ಮತ್ತು ಮೇಘನಾ ಸಿಂಗ್ ತಲಾ 2 ವಿಕೆಟ್ ಪಡೆದರು.

ಮಂಧಾನ- ಶೆಫಾಲಿ ಅದ್ಭುತ ಜೊತೆಯಾಟ

ಇದನ್ನೂ ಓದಿ

ಗುರಿ ಬೆನ್ನಟ್ಟಿದ ಭಾರತ ತಂಡವು ಬಿರುಸಿನ ಆರಂಭವನ್ನು ಮಾಡಿತು. ರೇಣುಕಾ ನಂತರ, ಶೆಫಾಲಿ ವರ್ಮಾ ಮತ್ತು ಮಂಧಾನ ಅವರ ವಿಧ್ವಂಸಕ ಬ್ಯಾಟಿಂಗ್ ಶ್ರೀಲಂಕಾದ ಗೆಲುವಿನ ಕನಸಿಗೆ ನೀರೇರೆಚಿತು. ಭಾರತದ ಆರಂಭಿಕ ಜೋಡಿ ಶ್ರೀಲಂಕಾದ ಬೌಲರ್‌ಗಳನ್ನು ಎರಡೂ ತುದಿಗಳಿಂದ ದಂಡಿಸಿದರು. ಆದರೆ ಮಂಧಾನಾಗೆ ಶತಕ ಪೂರೈಸಲು ಸಾಧ್ಯವಾಗಲಿಲ್ಲ. ಮಂಧಾನ 83 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 94 ರನ್ ಗಳಿಸಿ ಅಜೇಯರಾಗಿ ಉಳಿದರು. ಶೆಫಾಲಿ 71 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು. ಜೊತೆಗೆ ಶೆಫಾಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡ ಬಾರಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada