ಟೆಸ್ಟ್​​ನ ಒಂದೇ ಓವರ್​ನಲ್ಲಿ ಹೆಚ್ಚು ರನ್ ನೀಡಿದ ಟೀಮ್ ಇಂಡಿಯಾ ಬೌಲರ್ ಯಾರು ಗೊತ್ತಾ?

Team India Bowlers:

Jul 04, 2022 | 2:53 PM
TV9kannada Web Team

| Edited By: Zahir PY

Jul 04, 2022 | 2:53 PM

ಟೆಸ್ಟ್​ ಕ್ರಿಕೆಟ್ ಅನ್ನು ಬ್ಯಾಟ್ಸ್‌ಮನ್‌ಗಳ ತಾಳ್ಮೆಯ ಪರೀಕ್ಷೆ ಎನ್ನಲಾಗುತ್ತದೆ. ಇದಾಗ್ಯೂ ಈ ಸ್ವರೂಪದಲ್ಲಿ ಕೆಲ ಬ್ಯಾಟ್ಸ್​ಮನ್​ಗಳು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಾರೆ. ಪ್ರಸ್ತುತ ಸರಣಿಯ ಉದಾಹರಣೆ ತೆಗೆದುಕೊಂಡರೆ ರಿಷಭ್ ಪಂತ್, ಜಾನಿ ಬೈರ್​ಸ್ಟೋವ್ ಟೆಸ್ಟ್​ ಕ್ರಿಕೆಟ್​ನಲ್ಲೂ ಸ್ಪೋಟಕ ಇನಿಂಗ್ಸ್ ಆಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

1 / 5
 ಇನ್ನು ಕೆಲವೊಮ್ಮೆ ಆಕ್ರಮಣಕಾರಿ ಆಟವಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿರುತ್ತದೆ. ಅದರಲ್ಲೂ ಅಂತಿಮ ವಿಕೆಟ್ ಮಾತ್ರ ಬಾಕಿಯಿರುವಾಗ ಬಿರುಸಿನ ಬ್ಯಾಟಿಂಗ್ ಮೂಲಕ ಹೆಚ್ಚಿನ ರನ್​ಗಳಿಸಲು ಎಲ್ಲಾ ಬ್ಯಾಟ್ಸ್​ಮನ್​ಗಳು ಮುಂದಾಗುತ್ತಾರೆ. ಅದರಂತೆ ಇಂಗ್ಲೆಂಡ್​ ವಿರುದ್ದದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ ಜಸ್​ಪ್ರೀತ್ ಬುಮ್ರಾ ಅಬ್ಬರಿಸಿದ್ದರು. ಸ್ಟುವರ್ಟ್​ ಬ್ರಾಡ್ ಅವರ ಓವರ್​ನಲ್ಲಿ 35 ರನ್​ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

2 / 5
ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಕೆಟ್ಟ ದಾಖಲೆ ಸ್ಟುವರ್ಟ್ ಬ್ರಾಡ್ ಪಾಲಾಯಿತು. ಇದಾಗ್ಯೂ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ನೀಡಿದ ಬೌಲರ್ ಯಾರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಆ ಇಬ್ಬರು ಬೌಲರ್​ಗಳ ಕಿರುಪರಿಚಯ ಇಲ್ಲಿದೆ.

3 / 5
ಮುನಾಫ್ ಪಟೇಲ್: ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಮುನಾಫ್ ಪಟೇಲ್ 2ನೇ ಸ್ಥಾನದಲ್ಲಿದ್ದಾರೆ. 2006ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮುನಾಫ್ ಪಟೇಲ್ ಒಂದೇ ಓವರ್‌ನಲ್ಲಿ 25 ರನ್ ನೀಡಿದ್ದರು. ಅಂದು ಮುನಾಫ್ ಪಟೇಲ್ ಅವರ ಆ ಓವರ್‌ನಲ್ಲಿ ವೆಸ್ಟ್ ಇಂಡೀಸ್​ನ ರಾಮ್​ ನರೇಶ್ ಸರ್ವಾನ್ 6 ಬೌಂಡರಿಗಳನ್ನು ಬಾರಿಸಿ ಅಬ್ಬರಿಸಿದ್ದರು.

4 / 5
ಹರ್ಭಜನ್ ಸಿಂಗ್: ಟೆಸ್ಟ್ ಕ್ರಿಕೆಟ್​ನ ಅತ್ಯುತ್ತಮ ಸ್ಪಿನ್ನರ್​ಗಳಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು. ಆದರೆ ಭಾರತದ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ನೀಡಿದ ಕೆಟ್ಟ ದಾಖಲೆ ಕೂಡ ಭಜ್ಜಿ ಹೆಸರಿನಲ್ಲಿದೆ. 2005-06ರಲ್ಲಿ ಲಾಹೋರ್‌ನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಹರ್ಭಜನ್ ಸಿಂಗ್ 27 ರನ್ ನೀಡಿದ್ದರು. ಅಂದು ಹರ್ಭಜನ್ ಅವರ ಆ ಓವರ್‌ನಲ್ಲಿ ಶಾಹಿದ್ ಅಫ್ರಿದಿ 4 ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರಿಸಿದ್ದರು. 17 ವರ್ಷಗಳ ಹಿಂದಿನ ಈ ಕೆಟ್ಟ ದಾಖಲೆ ಈಗಲೂ ಹರ್ಭಜನ್ ಸಿಂಗ್ ಹೆಸರಿನಲ್ಲಿದೆ.

5 / 5

Follow us on

Most Read Stories

Click on your DTH Provider to Add TV9 Kannada