AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಸಿನಿಮಾ ನಿರ್ಮಾಣಕ್ಕಿಳಿದ ಧೋನಿ! ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ ಕ್ಯಾಪ್ಟನ್ ಕೂಲ್

MS Dhoni: ಎಂಎಸ್ ಧೋನಿ ನಿರ್ಮಾಪಕರಾಗುವ ತಯಾರಿಯಲ್ಲಿದ್ದಾರೆ. ಮಹೀ ಇಘ ಸೌತ್‌ ಸೂಪರ್‌ಸ್ಟಾರ್ ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

MS Dhoni: ಸಿನಿಮಾ ನಿರ್ಮಾಣಕ್ಕಿಳಿದ ಧೋನಿ! ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ ಕ್ಯಾಪ್ಟನ್ ಕೂಲ್
ಎಂಎಸ್ ಧೋನಿ, ದಳಪತಿ ವಿಜಯ್
TV9 Web
| Updated By: ಪೃಥ್ವಿಶಂಕರ|

Updated on:Jun 22, 2022 | 2:52 PM

Share

ಎಂಎಸ್ ಧೋನಿ (MS Dhoni) ನಿರ್ಮಾಪಕರಾಗುವ ತಯಾರಿಯಲ್ಲಿದ್ದಾರೆ. ಮಹೀ ಇಘ ಸೌತ್‌ ಸೂಪರ್‌ಸ್ಟಾರ್ ದಳಪತಿ ವಿಜಯ್ (South’s superstar Thalapathy Vijay) ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಇದೀಗ ಕಾಲಿವುಡ್‌ಗೂ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಧೋನಿ ಕೂಡ ಅತಿಥಿ ಪಾತ್ರವನ್ನು ಮಾಡಬಹುದು ಎನ್ನಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಧೋನಿ ಸ್ವತಃ ಸೌತ್ ಸೂಪರ್‌ಸ್ಟಾರ್‌ ವಿಜಯ್​ಗೆ ಕರೆ ಮಾಡಿ ಈ ಚಿತ್ರವನ್ನು ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಂತಹ ಪರಿಸ್ಥಿತಿಯಲ್ಲಿ ಈಗ ವಿಜಯ್ ಈ ಸಿನಿಮಾ ಮಾಡುತ್ತಾರೆ ಎಂಬ ನಂಬಿಕೆ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಎಂಎಸ್ ಧೋನಿ ಸಂಬಂಧ ಒಂದು ದಶಕದಷ್ಟು ಹಳೆಯದು. ನಟ ವಿಜಯ್ ತಮಿಳುನಾಡಿನಲ್ಲಿ ಬಹಳ ಜನಪ್ರಿಯ ನಟ.ಮಹೇಂದ್ರ ಸಿಂಗ್ ಧೋನಿಯನ್ನು ಥಲ ಧೋನಿ ಅಂದರೆ ನಾಯಕ ಎಂದು ಕರೆಯಲು ಇದೇ ಕಾರಣ. ಎಂಎಸ್ ಧೋನಿ ಇತ್ತೀಚೆಗೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದರು. ಇದರಡಿಯಲ್ಲಿ ಅನಿಮೇಟೆಡ್ ಸರಣಿಯನ್ನು ಇತ್ತೀಚೆಗೆ ರಚಿಸಲಾಗಿದೆ. ಈ ಹಿಂದೆ ಎಂಎಸ್ ಧೋನಿ ಅವರ ಜೀವನಾಧಾರಿತ ‘ಎಂಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ’ ಚಿತ್ರಕ್ಕೆ ಎಂಎಸ್ ಧೋನಿ ಬಂಡವಾಳ ಹೂಡಿದ್ದರು.

ಇದನ್ನೂ ಓದಿ
Image
IND vs ENG: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ನಾಯಕ? ತಂಡದಲ್ಲೂ ಸಂಪೂರ್ಣ ಬದಲಾವಣೆ
Image
ಆರ್​ಸಿಬಿ ತಂಡದ ಮಾಜಿ ಓಪನರ್ ಕ್ರಿಸ್ ಗೇಲ್ ಭೇಟಿಯಾದ ವಿಜಯ್ ಮಲ್ಯ; ನೆಟ್ಟಿಗರ ರಿಯಾಕ್ಷನ್ ಹೇಗಿದೆ ಗೊತ್ತಾ?

ಇದನ್ನೂ ಓದಿ: ಧೋನಿಯ ಆ ನಿರ್ಧಾರದಿಂದಾಗಿ ನಾನು ಏಕದಿನ ಕ್ರಿಕೆಟ್​ಗೆ ಗುಡ್​ ಬೈ ಹೇಳಲು ಬಯಸಿದ್ದೆ! ಸೆಹ್ವಾಗ್ ಶಾಕಿಂಗ್ ಹೇಳಿಕೆ

ನನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸುತ್ತೇನೆ: ಧೋನಿ

ನಾವು ಧೋನಿ ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ, ಎಂಎಸ್ ಧೋನಿ ಅವರು 2023 ರಂದು ಕ್ರಿಕೆಟ್ ಜಗತ್ತಿನಲ್ಲಿ ಕೊನೆಯ ಬಾರಿಗೆ ಐಪಿಎಲ್ ಆಡುತ್ತಾರೆ ಎಂದು ಊಹಿಸಲಾಗಿದೆ. ಐಪಿಎಲ್ 2022 ರ ಸಮಯದಲ್ಲಿ ಧೋನಿಯನ್ನು ನಿಮ್ಮ ಕೊನೆಯ ಪಂದ್ಯ ಯಾವುದಾಗಿರಲಿದೆ ಎಂದು ಕೇಳಿದಕ್ಕೆ ಉತ್ತರಿಸಿದ್ದ ಧೋನಿ, ನನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸುವುದಾಗಿ ಹೇಳಿದ್ದರು. ಹಾಗಾಗಿ ಮುಂದಿನ ಆವೃತ್ತಿಯಲ್ಲಿ ಧೋನಿ ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ವಿಜಯ್ ಜನ್ಮದಿನ

ದಕ್ಷಿಣ ಭಾರತದ ಖ್ಯಾತ ನಟ ‘ದಳಪತಿ’ ವಿಜಯ್ ಅವರ ಅಭಿಮಾನಿಗಳಿಗೆ ಜೂನ್​ 22 ಎಂದರೆ ಹಬ್ಬವೇ ಸರಿ. ಯಾಕೆಂದರೆ, ಇಂದು ವಿಜಯ್ ಹುಟ್ಟುಹಬ್ಬ. ಕಾಲಿವುಡ್​ನ ಈ ಸ್ಟಾರ್​ ನಟನಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. 48ನೇ ವಸಂತಕ್ಕೆ ಕಾಲಿಟ್ಟಿರುವ ದಳಪತಿ ವಿಜಯ್​ ಅವರಿಗೆ ಎಲ್ಲೆಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು ಹರಿದುಬರುತ್ತಿವೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ವಿಶ್​ ಮಾಡುತ್ತಿದ್ದಾರೆ.

Published On - 2:38 pm, Wed, 22 June 22