AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Michael Rippon: ಪಾದಾರ್ಪಣೆ ಮಾಡಿದ ತಂಡದ ವಿರುದ್ದವೇ ಮೊದಲ ಪಂದ್ಯವಾಡಲಿರುವ ರಿಪ್ಪನ್..!

Michael Rippon: ನ್ಯೂಜಿಲೆಂಡ್ ತಂಡವು ಆಗಸ್ಟ್ 4 ಮತ್ತು 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಗಳನ್ನು ಆಡಲಿದೆ. ಈ ಸರಣಿಯಲ್ಲಿ ಕಿವೀಸ್ ತಂಡದ ಭಾಗವಾಗಿರುವ ಮೈಕೆಲ್ ರಿಪ್ಪನ್​ಗೆ ಅವಕಾಶ ಸಿಗಲಿದೆಯಾ ಕಾದು ನೋಡಬೇಕಿದೆ.

Michael Rippon: ಪಾದಾರ್ಪಣೆ ಮಾಡಿದ ತಂಡದ ವಿರುದ್ದವೇ ಮೊದಲ ಪಂದ್ಯವಾಡಲಿರುವ ರಿಪ್ಪನ್..!
Michael Rippon
TV9 Web
| Edited By: |

Updated on: Jun 22, 2022 | 2:36 PM

Share

ಒಂದು ದೇಶದಲ್ಲಿ ಹುಟ್ಟಿ ಬೇರೆ ದೇಶಗಳ ಪರ ಆಡಿದ ಅನೇಕ ಕ್ರಿಕೆಟಿಗರಿದ್ದಾರೆ. ಇವರಲ್ಲಿ ಮೈಕೆಲ್ ರಿಪ್ಪನ್ (Michael Rippon) ಕೂಡ ಒಬ್ಬರು. ಏಕೆಂದರೆ ರಿಪ್ಪನ್ ಮೂಲತಃ ಸೌತ್​ ಆಫ್ರಿಕಾದವರು. ಆದರೆ ಪಾದಾರ್ಪಣೆ ಮಾಡಿದ್ದು ನೆದರ್​ಲ್ಯಾಂಡ್ಸ್​ ಪರ ಎಂಬುದು ವಿಶೇಷ. ಇದರಲ್ಲೇನು ವಿಶೇಷ ಎಂದು ನೀವಂದುಕೊಂಡರೆ, ಇಲ್ಲೇ ಇರುವುದು ಟ್ವಿಸ್ಟ್. ಏಕೆಂದರೆ ಮೈಕೆಲ್ ರಿಪ್ಪನ್ ಇದೀಗ ನೆದರ್​ಲ್ಯಾಂಡ್ಸ್​ ವಿರುದ್ದವೇ ಆಡಲು ಸಜ್ಜಾಗಿದ್ದಾರೆ. ಹೌದು, ನೆದರ್​ಲ್ಯಾಂಡ್ಸ್​ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ರಿಪ್ಪನ್ ಇದೀಗ ನ್ಯೂಜಿಲೆಂಡ್​ ಪರ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಅಂದರೆ ನೆದರ್​ಲ್ಯಾಂಡ್ಸ್​ ತಂಡದಿಂದ ಹೊರಗುಳಿದಿದ್ದ ಇವರು ಆ ಬಳಿಕ ನ್ಯೂಜಿಲೆಂಡ್​ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಿದ್ದರು.

ನೆದರ್​ಲ್ಯಾಂಡ್ಸ್​ ರಾಷ್ಟ್ರೀಯ ತಂಡದ ಜೊತೆಗಿನ ಒಪ್ಪಂದ ಮುಗಿದ ಬಳಿಕ ಮೈಕೆಲ್ ರಿಪ್ಪನ್ ನ್ಯೂಜಿಲೆಂಡ್​ನಲ್ಲಿ ದೇಶೀಯ ಕ್ರಿಕೆಟ್ ಆಡಿದ್ದರು. ಅಲ್ಲದೆ ಈ ಅವಧಿಯಲ್ಲಿ ಮತ್ತೊಂದು ದೇಶವನ್ನು ಪ್ರತಿನಿಧಿಸುವ ಕ್ಲಿಯರೆನ್ಸ್ ಕೂಡ ಪಡೆದುಕೊಂಡಿದ್ದಾರೆ. ಅದರಂತೆ ಇದೀಗ ರಿಪ್ಪನ್ ಅವರು ನೆದರ್​ಲ್ಯಾಂಡ್ಸ್​ ವಿರುದ್ದದ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ತಾನು ಪಾದಾರ್ಪಣೆ ಮಾಡಿದ ಅಂತಾರಾಷ್ಟ್ರೀಯ ತಂಡದ ವಿರುದ್ದವೇ ಇದೀಗ ನ್ಯೂಜಿಲೆಂಡ್​ ಪರ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ.

ಇನ್ನು ಮೈಕೆಲ್ ರಿಪ್ಪನ್ ನೆದರ್​ಲ್ಯಾಂಡ್ಸ್​ ಪರ 18 ಟಿ20 ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಟ್ಟು 396 ರನ್​ ಹಾಗೂ 28 ವಿಕೆಟ್ ಕಬಳಿಸಿದ್ದಾರೆ. ವಿಶೇಷ ಎಂದರೆ ಈ ಹಿಂದೆ ರಿಪ್ಪನ್ ನ್ಯೂಜಿಲೆಂಡ್ ವಿರುದ್ದ ಕೂಡ ಆಡಿದ್ದರು. ಇದೀಗ ಅದೇ ತಂಡದ ಆಟಗಾರನಾಗಿ ಪಾದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ
Image
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Image
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
Image
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Image
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಇಲ್ಲಿ ಮತ್ತೊಂದು ವಿಶೇಷ ಎಂದರೆ ದಕ್ಷಿಣ ಆಫ್ರಿಕಾ ಮೂಲದವರಾಗಿರುವ ರಿಪ್ಪನ್ 2010-11ರಲ್ಲಿ ದಕ್ಷಿಣ ಆಫ್ರಿಕಾದ ದೇಶೀಯ ತಂಡ ಕೋಬ್ರಾಸ್‌ ಪರ ತಮ್ಮ ಚೊಚ್ಚಲ ಟಿ20 ಪಂದ್ಯವನ್ನು ಆಡಿದ್ದರು. ಹಾಗೆಯೇ ಲಿಸ್ಟ್-ಎ ಮತ್ತು ನಂತರ ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ಕಾಣಿಸಿಕೊಂಡಿದ್ದರು.​ ಆದರೆ, ದಕ್ಷಿಣ ಆಫ್ರಿಕಾ ಪರ ಆಡುವ ಅವಕಾಶ ಸಿಗದ ಕಾರಣ ಅವರು ಮರುವರ್ಷವೇ ಇಂಗ್ಲಿಷ್ ಕೌಂಟಿ ತಂಡವಾದ ಸಸೆಕ್ಸ್‌ನೊಂದಿಗೆ ಸಹಿ ಹಾಕಿ ಚೊಚ್ಚಲ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ನೆದರ್​ಲ್ಯಾಂಡ್ಸ್​ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ಕಿವೀಸ್​ನಲ್ಲಿ ದೇಶೀಯ ಕ್ರಿಕೆಟ್ ಮುಂದುವರೆಸಿದ್ದರು. ಇದೀಗ ನ್ಯೂಜಿಲೆಂಡ್ ತಂಡದಲ್ಲಿ ಅವಕಾಶ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನ್ಯೂಜಿಲೆಂಡ್ ತಂಡವು ಆಗಸ್ಟ್ 4 ಮತ್ತು 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಗಳನ್ನು ಆಡಲಿದೆ. ಈ ಸರಣಿಯಲ್ಲಿ ಕಿವೀಸ್ ತಂಡದ ಭಾಗವಾಗಿರುವ 30ರ ಹರೆಯದ ಎಡಗೈ ಆಲ್​ರೌಂಡರ್​ ಮೈಕೆಲ್ ರಿಪ್ಪನ್​ಗೆ ಮೊದಲ ಪಂದ್ಯದಲ್ಲೇ ಚಾನ್ಸ್​ ಸಿಗಲಿದೆಯಾ ಕಾದು ನೋಡಬೇಕಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ