ಪೆಟ್ರೋಲ್ ಪಂಪ್‌ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Roshan Mahanama: ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಅಗ್ಯತ್ಯ ವಸ್ತುಗಳಿಗೆ ಹರಸಾಹಸ ಪಡಬೇಕಾಗಿ ಬಂದಿದೆ.
ಶ್ರೀಲಂಕಾ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 1996ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶ್ರೀಲಂಕಾದ ಕ್ರಿಕೆಟಿಗ ರೋಷನ್ ಮಹಾನಾಮ (Roshan Mahanama) ಜನರ ನೆರವಿಗೆ ಮುಂದಾಗಿದ್ದಾರೆ. ಮಹಾನಾಮ ಪೆಟ್ರೋಲ್ ಪಂಪ್‌ನಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಜನರು ಅಗತ್ಯ ವಸ್ತುಗಳಿಗೆ ಮತ್ತು ಇತರೆ ಸಾಮಗ್ರಿಗಳಿಗೆ ಕ್ಯೂ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಹೀಗೆ ಕ್ಯೂನಲ್ಲಿರುವವರಿಗೆ ಚಹಾ ಮತ್ತು ಬನ್ಗಳನ್ನು ನೀಡುವ ಮೂಲಕ ಮಹಾನಾಮ ಮಾನವೀಯತೆ ಮರೆದಿದ್ದಾರೆ. ಈ ಫೋಟೋಗಳನ್ನು ಶ್ರೀಲಂಕಾ ಮಾಜಿ ಕ್ರಿಕೆಟಿಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
‘ವಾರ್ಡ್ ಪ್ಲೇಸ್ ಮತ್ತು ವಿಜೇರಾಮ ಮಠ ಸುತ್ತಮುತ್ತ ಪೆಟ್ರೋಲ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಜನರಿಗೆ ಚಹಾ ಮತ್ತು ಬನ್ ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ದಿನದಿಂದ ದಿನಕ್ಕೆ ಈ ಸರತಿ ಸಾಲುಗಳು ಉದ್ದವಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಹದಗೆಡುತ್ತಿದೆ. ದಯವಿಟ್ಟು ಹೀಗೆ ಕ್ಯೂನಲ್ಲಿ ಇರುವವರಿಗೆ ಪರಸ್ಪರ ಸಹಾಯ ಮಾಡಿ ಎಂದು ರೋಶನ್ ಮಹಾನಾಮ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ಇದೀಗ ರೋಶನ್ ಮಹಾನಾಮ ಅವರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, 1996 ರ ವಿಶ್ವಕಪ್ ಹೀರೋ ಇದೀಗ ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ರಿಯಲ್ ಹೀರೋ ಆಗಿದ್ದಾರೆ ಎಂದು ಹಲವರು ಮಾಜಿ ಕ್ರಿಕೆಟಿಗನನ್ನು ಕೊಂಡಾಡಿದ್ದಾರೆ.
We served tea and buns with the team from Community Meal Share this evening for the people at the petrol queues around Ward Place and Wijerama mawatha. The queues are getting longer by the day and there will be many health risks to people staying in queues. pic.twitter.com/i0sdr2xptI
— Roshan Mahanama (@Rosh_Maha) June 18, 2022
ಶ್ರೀಲಂಕಾ ಪರ 213 ಏಕದಿನ ಮತ್ತು 52 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಶನ್ ಮಹಾನಾಮ, ಟೆಸ್ಟ್‌ನಲ್ಲಿ 4 ಶತಕಗಳು ಮತ್ತು 11 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ 4 ಶತಕಗಳು ಮತ್ತು 35 ಅರ್ಧ ಶತಕಗಳೊಂದಿಗೆ 5162 ರನ್ ಗಳಿಸಿದ್ದಾರೆ. ಇನ್ನು 1996 ರಲ್ಲಿ ವಿಶ್ವಕಪ್ ಗೆದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ಭಾಗವಾಗಿದ್ದರು. ಅಲ್ಲದೆ 1999 ರಲ್ಲಿ ವಿಶ್ವಕಪ್ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಇದೀಗ ಸಾಮಾಜಿಕ ಕಳಕಳಿಯ ಮೂಲಕ ಮತ್ತೊಮ್ಮೆ ರೋಶನ್ ಮಹಾನಾಮ ಸುದ್ದಿಯಾಗಿದ್ದಾರೆ.
ಶ್ರೀಲಂಕಾದಲ್ಲಿ ಭೀಕರ ಆರ್ಥಿಕ ಬಿಕ್ಕಟ್ಟು: ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಅಗ್ಯತ್ಯ ವಸ್ತುಗಳಿಗೆ ಹರಸಾಹಸ ಪಡಬೇಕಾಗಿ ಬಂದಿದೆ. ದೇಶವು ಇಂಧನವನ್ನು ಆಮದು ಮಾಡಿಕೊಳ್ಳಲು ಸಹ ಹೆಣಗಾಡುತ್ತಿದೆ. ಅಲ್ಲದೆ ಪ್ರಸ್ತುತ ಇರುವ ಪೆಟ್ರೋಲ್ ಮತ್ತು ಡೀಸೆಲ್ ಸ್ವಲ್ಪ ಸಮಯದ ನಂತರ ಖಾಲಿಯಾಗುವ ಸಾಧ್ಯತೆಯಿದೆ. ಹೀಗಾಗಿಯೇ ಜನರು ಇಂಧನಕ್ಕಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್-ಡಿಸೇಲ್ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Mon, 20 June 22