Sign In

By signing in or creating an account, you agree with Associated Broadcasting Company's Terms & Conditions and Privacy Policy.

Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?

Who is Heinrich Klaasen: ಟೀಮ್ ಇಂಡಿಯಾ ವಿರುದ್ದ ಸಿಕ್ಕ ಅವಕಾಶದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಮೂಲಕ ಮತ್ತೆ ಭರ್ಜರಿಯಾಗಿ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

Heinrich Klaasen: ಬಡವರ ಧೋನಿ, RCB ಆಟಗಾರ...ಯಾರು ಈ ಹೆನ್ರಿಕ್ ಕ್ಲಾಸೆನ್..?
Heinrich Klaasen
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 13, 2022 | 5:18 PM

ಭಾರತ-ಸೌತ್ ಆಫ್ರಿಕಾ (IND vs SA T20) ನಡುವಣ 2ನೇ ಟಿ20 ಪಂದ್ಯ. ಪಂದ್ಯಕ್ಕೂ ಮುನ್ನ ತಂಡದ ಪ್ರಮುಖ ಆಟಗಾರ ಕ್ವಿಂಟನ್ ಡಿಕಾಕ್ ಗಾಯಗೊಂಡಿದ್ದರು. ಹೀಗಾಗಿ ಪ್ಲೇಯಿಂಗ್ ಇಲೆವೆನ್​ನಿಂದ ಹೊರಗುಳಿಯಲು ನಿರ್ಧರಿಸಿದ್ದರು. ಅವರ ಸ್ಥಾನದಲ್ಲಿ ಕಣಕ್ಕಿಳಿದ ಆಟಗಾರನೆಂದರೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಹೆನ್ರಿಕ್ ಕ್ಲಾಸೆನ್ (Heinrich Klaasen). ಸೌತ್ ಆಫ್ರಿಕಾ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಡಿಕಾಕ್ ಕಾಣಿಸದಿದ್ದಾಗ ನಿಟ್ಟುಸಿರು ಬಿಟ್ಟವರೇ ಹೆಚ್ಚು. ಆದರೆ ಕ್ಲಾಸೆನ್ ತಾನೆಂತಹ ಕ್ಲಾಸ್ ಬ್ಯಾಟ್ಸ್​ಮನ್​ ಎಂಬುದನ್ನು ಭರ್ಜರಿ ಬ್ಯಾಟಿಂಗ್ ಮೂಲಕ ನಿರೂಪಿಸಿದರು. ಕೇವಲ 46 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ 81 ರನ್ ಬಾರಿಸಿ ಮಿಂಚಿದ್ದರು. ಇದರ ಬೆನ್ನಲ್ಲೇ ಯಾರು ಈ ಕ್ಲಾಸೆನ್ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು.

ಅಷ್ಟಕ್ಕೂ ಯಾರು ಈ ಹೆನ್ರಿಕ್ ಕ್ಲಾಸೆನ್ ಎಂದು ನೋಡುವುದಾದರೆ, ಯುವ ಆಟಗಾರನಂತು ಅಲ್ಲ. ಏಕೆಂದರೆ ಅವರ ವಯಸ್ಸು 30 ವರ್ಷ. ಆದರೆ ಸೌತ್ ಆಫ್ರಿಕಾ ಪರ ಅವರು ಕೆಲವೇ ಕೆಲವು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದಕ್ಕೆ ಒಂದು ಕಾರಣ ಗಾಯದ ಸಮಸ್ಯೆ. ಹಲವು ಬಾರಿ ಗಾಯಗೊಂಡ ಪರಿಣಾಮ ಕ್ಲಾಸೆನ್ ತಂಡದಲ್ಲಿದ್ದಕ್ಕಿಂತ ಹೊರಗಿದ್ದಿದ್ದೇ ಹೆಚ್ಚು. ಇನ್ನು ವಿಕೆಟ್ ಕೀಪರ್ ಆಗಿ ಡಿಕಾಕ್ ಇದ್ದ ಕಾರಣ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಕ್ಕಿದ್ದು ಕೂಡ ಕಡಿಮೆ. ಆದರೆ ಟೀಮ್ ಇಂಡಿಯಾ ವಿರುದ್ದ ಸಿಕ್ಕ ಅವಕಾಶವನ್ನು ಹೆನ್ರಿಕ್ ಕ್ಲಾಸೆನ್ ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.

ವಿಶೇಷ ಎಂದರೆ ಹೆನ್ರಿಕ್ ಕ್ಲಾಸೆನ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ಟೀಮ್ ಇಂಡಿಯಾ ವಿರುದ್ದ.  ಟೆಸ್ಟ್​, ಏಕದಿನ ಹಾಗೂ ಟಿ20..ಹೀಗೆ ಮೂರು ಸ್ವರೂಪದಲ್ಲೂ ಕ್ಲಾಸೆನ್ ಟೀಮ್ ಇಂಡಿಯಾ ವಿರುದ್ದವೇ ಪದಾರ್ಪಣೆ ಮಾಡಿದ್ದರು. ಆದರೆ ಆರಂಭದಲ್ಲಿ ಅಬ್ಬರಿಸಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ 2018 ರಲ್ಲಿ ಟೀಮ್ ಇಂಡಿಯಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ 69 ರನ್‌ಗಳ ಸುಂಟರಗಾಳಿ ಬ್ಯಾಟಿಂಗ್ ಮೂಲಕ ತಮ್ಮ ಎಂಟ್ರಿಯನ್ನು ಸಾರಿದ್ದರು. ಆ ಪಂದ್ಯದಲ್ಲಿ ಚಾಹಲ್ ಅವರ 12 ಎಸೆತಗಳಲ್ಲಿ 41 ರನ್ ಗಳಿಸಿ ಅಬ್ಬರಿಸಿದ್ದರು. ಈ ಅಬ್ಬರದಿಂದಾಗಿ ಕ್ಲಾಸೆನ್ ಐಪಿಎಲ್​ನಲ್ಲೂ ಚಾನ್ಸ್ ಪಡೆದಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ.

ಇದನ್ನೂ ಓದಿ
Image
KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಹೌದು, ಕ್ಲಾಸೆನ್ ಐಪಿಎಲ್​ನಲ್ಲಿ ಎರಡು ತಂಡಗಳ ಭಾಗವಾಗಿದ್ದಾರೆ. ಅದರಲ್ಲೂ ಆರ್​ಸಿಬಿ ಪರ ಬ್ಯಾಟ್​ ಬೀಸಿದ್ದರು ಎಂಬುದು ವಿಶೇಷ. 2018 ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಕ್ಲಾಸೆನ್ 4 ಪಂದ್ಯವಾಡಿದ್ದರು. ಈ ವೇಳೆ ಕಲೆಹಾಕಿದ್ದು ಕೇವಲ 57 ರನ್​ ಮಾತ್ರ. ಮರುವರ್ಷ ರಾಜಸ್ಥಾನ್ ರಾಯಲ್ಸ್ ಸೌತ್ ಆಫ್ರಿಕಾ ಆಟಗಾರನನ್ನು ಬಿಡುಗಡೆ ಮಾಡಿತ್ತು.

2019 ರಲ್ಲಿ ಆರ್​ಸಿಬಿ ತಂಡವು ಕ್ಲಾಸೆನ್ ಅವರನ್ನು ಖರೀದಿಸುವ ಮೂಲಕ ಗಮನ ಸೆಳೆಯಿತು. ಅಲ್ಲದೆ ಆರ್​ಸಿಬಿ ಪರ 3 ಪಂದ್ಯವಾಡಿದ್ದರೂ ಒಂದೇ ಒಂದು ಉತ್ತಮ ಇನಿಂಗ್ಸ್ ಆಡಿರಲಿಲ್ಲ. ಸಿಕ್ಕ ಅವಕಾಶದಲ್ಲಿ ಕಲೆಹಾಕಿದ್ದು ಕೇವಲ 6 ರನ್​ ಮಾತ್ರ. ಹೀಗಾಗಿ ಆರ್​ಸಿಬಿ ಕೂಡ ತಂಡದಿಂದ ಕೈಬಿಟ್ಟಿತು. ಅಲ್ಲಿಗೆ ಹೆನ್ರಿಕ್ ಕ್ಲಾಸೆನ್ ಐಪಿಎಲ್ ಕೆರಿಯರ್ ಕೂಡ ಅಂತ್ಯವಾಯಿತು.

ಇದಾದ ಬಳಿಕ ಅಷ್ಟೇನು ಸುದ್ದಿಯಲ್ಲಿರದ ಹೆನ್ರಿಕ್ ಕ್ಲಾಸೆನ್ ಇದೀಗ ಮತ್ತೆ ಸೌತ್ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ವಿರುದ್ದ ಸಿಕ್ಕ ಅವಕಾಶದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಮೂಲಕ ಮತ್ತೆ ಭರ್ಜರಿಯಾಗಿ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ. ಸೌತ್ ಆಫ್ರಿಕಾ ಪರ 26 ಟಿ20 ಇನಿಂಗ್ಸ್ ಆಡಿರುವ ಕ್ಲಾಸೆನ್ ಇದುವರೆಗೆ 530 ರನ್ ಕಲೆಹಾಕಿದ್ದಾರೆ. ಹಾಗೆಯೇ 23 ಏಕದಿನ ಇನಿಂಗ್ಸ್​ನಿಂದ 613 ರನ್ ಬಾರಿಸಿದ್ದಾರೆ. ಈ ವೇಳೆ ಒಟ್ಟು 1 ಶತಕ ಹಾಗೂ 7 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದೀಗ ಟೀಮ್ ಇಂಡಿಯಾ ವಿರುದ್ದ ಉತ್ತಮ ಪ್ರದರ್ಶನ ನೀಡಿರುವ ಕಾರಣ ಮುಂದಿನ ಪಂದ್ಯದಲ್ಲೂ ಕ್ಲಾಸೆನ್ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಮುಂದಿನ ಪಂದ್ಯಗಳಲ್ಲೂ ಅಬ್ಬರಿಸಿದರೆ ಹೆನ್ರಿಕ್ ಕ್ಲಾಸೆನ್ ಮುಂಬರುವ​ ಐಪಿಎಲ್​ನಲ್ಲೂ ಕಾಣಿಸಿಕೊಳ್ಳಬಹುದು.

ಬಡವರ ಧೋನಿ: ಅಂದಹಾಗೆ ಹೆನ್ರಿಕ್ ಕ್ಲಾಸೆನ್ ಮೊದಲ ಬಾರಿಗೆ ಸುದ್ದಿಯಾಗಿದ್ದು 2015 ರಲ್ಲಿ. ಅಂದು ರಾಷ್ಟ್ರೀಯ ಅಕಾಡೆಮಿ ಕೋಚ್ ಆಗಿದ್ದ ದಕ್ಷಿಣ ಆಫ್ರಿಕಾದ U-19 ತಂಡದ ಪ್ರಸ್ತುತ ಕೋಚ್ ಶುಕ್ರಿ ಕಾನ್ರಾಡ್, ಕ್ಲಾಸೆನ್ ಅವರನ್ನು ಧೋನಿಗೆ ಹೋಲಿಸಿದ್ದರು. ಏಕೆಂದರೆ ಶಾಂತ ಸ್ವಭಾವದಿಂದ ಕೂಡಿದ್ದ ಕ್ಲಾಸೆನ್ ಆಕ್ರಮಣಕಾರಿ ಆಟಗಾರನಾಗಿದ್ದ. ಅಲ್ಲದೆ ವಿಕೆಟ್ ಕೀಪರ್ ಆಗಿಯೂ ಮಿಂಚಿದ್ದರು.

ಆತನ ಆಟವನ್ನು ನೋಡಿದರೆ ನನಗೆ ಧೋನಿ ನೆನಪಾಗುತ್ತಾರೆ. ಧೋನಿಯಂತೆ ವಿಕೆಟ್ ಹಿಂದೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ. ಅಲ್ಲದೆ ಅದ್ಭುತ ಆಕ್ರಮಣಕಾರಿ ಬ್ಯಾಟಿಂಗ್ ಕೌಶಲ್ಯ ಹೊಂದಿದ್ದಾರೆ. ಅವೆಲ್ಲಕ್ಕಿಂತ ಮುಖ್ಯವಾಗಿ ಶಾಂತ ಸ್ವಭಾವ ಹೊಂದಿದ್ದಾರೆ. ಒಂದಾರ್ಥದಲ್ಲಿ ಹೆನ್ರಿಕ್ ಕ್ಲಾಸೆನ್ ಬಡವರ ಧೋನಿ ಎಂದು ಕೋಚ್ ಶುಕ್ರಿ ಕಾನ್ರಾಡ್ ವರ್ಣಿಸಿದ್ದರು. ಇದೀಗ ಬಡವರ ಧೋನಿ ಟೀಮ್ ಇಂಡಿಯಾ ಪರ ಅಬ್ಬರಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ