KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!

KL Rahul: ಈ ವಿಡಿಯೋದಲ್ಲಿ ರಾಹುಲ್ ಅನಾಯಾಸವಾಗಿ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರುವುದು ಕಾಣಬಹುದು. ಅಲ್ಲದೆ ಈ ವಿಡಿಯೋ ಮೂಲಕ ಕಂಬ್ಯಾಕ್ ಮಾಡುವ ಸೂಚನೆಯನ್ನೂ ಕೂಡ ಕೆಎಲ್​ಆರ್​ ನೀಡಿದ್ದಾರೆ.

KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
KL Rahul
TV9kannada Web Team

| Edited By: Zahir PY

Jun 11, 2022 | 10:01 PM

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದ ಕೆಎಲ್ ರಾಹುಲ್ (KL Rahul) ತೊಡೆಸಂದು ಗಾಯದ ಕಾರಣ ಹೊರಗುಳಿದಿದ್ದರು. ಚೊಚ್ಚಲ ಬಾರಿಗೆ ಟೀಮ್ ಇಂಡಿಯಾ (Team India) ಟಿ20 ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದ ರಾಹುಲ್ ಸದ್ಯ ತಂಡದಿಂದ ಹೊರಗುಳಿದಿದ್ದಾರೆ. ಆದರೆ ಗಾಯದ ಕಾರಣ ತಂಡದಿಂದ ಹೊರಗುಳಿದ ರಾಹುಲ್ ಇದೀಗ ಜಿಮ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಜಿಮ್​ನಲ್ಲಿ ಸಖರ್ ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದನ್ನು ರಾಹುಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅನೇಕರು ರಾಹುಲ್ ಅವರ ಗಾಯದ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ.

ಈ ವಿಡಿಯೋದಲ್ಲಿ ರಾಹುಲ್ ಅನಾಯಾಸವಾಗಿ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರುವುದು ಕಾಣಬಹುದು. ಅಲ್ಲದೆ ಈ ವಿಡಿಯೋ ಮೂಲಕ ಕಂಬ್ಯಾಕ್ ಮಾಡುವ ಸೂಚನೆಯನ್ನೂ ಕೂಡ ಕೆಎಲ್​ಆರ್​ ನೀಡಿದ್ದಾರೆ. ಆದರೆ ಗಾಯದ ಬಳಿಕ ರಾಹುಲ್ ಜಿಮ್​ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಕೆಎಲ್ ರಾಹುಲ್ ಅವರ ಗಾಯವು ಗಂಭೀರವಾಗಿಲ್ಲ. ಇದಾಗ್ಯೂ ಅವರಿಗೆ ವಿಶ್ರಾಂತಿ ನೀಡಲಾಗಿರುವುದು ಇಂಗ್ಲೆಂಡ್​ ವಿರುದ್ದದ ಸರಣಿಗಾಗಿ. ಏಕೆಂದರೆ ತೊಡೆಸಂದಿನ ಸಮಸ್ಯೆ ಹೆಚ್ಚಾದರೆ ಅವರು ಮುಂಬರುವ ಸರಣಿಯಿಂದ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.

ಕೆಎಲ್ ರಾಹುಲ್ ಕಳೆದ ವರ್ಷದ ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಆರಂಭಿಕನಾಗಿ ಹೊಸ ಚೆಂಡನ್ನು ಚೆನ್ನಾಗಿ ಆಡಿದರು. ಅಲ್ಲದೆ ಹಲವಾರು ಸಂದರ್ಭಗಳಲ್ಲಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ 84 ರನ್ ಗಳಿಸಿದ್ದರು. ಆ ಪಂದ್ಯ ಡ್ರಾ ಆಗಿತ್ತು. ಇದಾದ ಬಳಿಕ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಆರಂಭಿಕ ಜೋಡಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಭಾರತಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 126 ರನ್ ಸೇರಿಸಿದರು. ರಾಹುಲ್ 129 ರನ್ ಗಳನ್ನು ಬಾರಿಸಿದ್ದರು.

View this post on Instagram

A post shared by KL Rahul👑 (@klrahul)

ಕೆಎಲ್​ಆರ್​ ಇದುವರೆಗೆ ಇಂಗ್ಲೆಂಡ್‌ನಲ್ಲಿ 12 ಇನ್ನಿಂಗ್ಸ್‌ಗಳಲ್ಲಿ 526 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಇಂಗ್ಲೆಂಡ್​ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಕೆಎಲ್ ರಾಹುಲ್ ಬಹಳ ಮುಖ್ಯ. ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ತೊಡೆಸಂದು ಗಾಯದ ಸಮಸ್ಯೆ ಎದುರಾಗುತ್ತಿದ್ದಂತೆ, ವಿಶ್ರಾಂತಿ ನೀಡಲಾಗಿದೆ. ಅದರಂತೆ ಇಂಗ್ಲೆಂಡ್​ ವಿರುದ್ದದ ಸರಣಿಯ ಮೂಲಕ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada