IND vs SA: ಮಿಲ್ಲರ್ ಔಟ್ ಮಾಡುವುದು ಹೇಗೆ? ಟೀಂ ಇಂಡಿಯಾ ಬೌಲರ್ಗಳಿಗೆ ವಿಡಿಯೋ ಸಲಹೆ ನೀಡಿದ ಟರ್ಬನೇಟರ್
IND vs SA: ಐಪಿಎಲ್ 2022 ರಲ್ಲೂ ಮಿಲ್ಲರ್ ಅದೇ ಶೈಲಿಯಲ್ಲಿ ಬ್ಯಾಟ್ ಮಾಡಿದರು. ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಿಲ್ಲರ್ ಈ ಬಾರಿಯ ಐಪಿಎಲ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ಕೇವಲ 7 ಬಾರಿ ವಿಕೆಟ್ ಕಳೆದುಕೊಂಡು ಒಟ್ಟು 481 ರನ್ ಗಳಿಸಿದ್ದರು.
ಐಪಿಎಲ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಡೇವಿಡ್ ಮಿಲ್ಲರ್ (David Miller) ಭಾರತ ವಿರುದ್ಧದ ಟಿ20 ಸರಣಿಯಲ್ಲೂ ಅದೇ ಆಕ್ರಮಣಶೀಲತೆಯನ್ನು ಮುಂದುವರಿಸಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಯಾವ ಬೌಲರ್‌ಗೂ ನಿಲ್ಲಲಾರದಷ್ಟು ವಿಧ್ವಂಸಕತೆಯನ್ನು ಸೃಷ್ಟಿಸಿದರು. ಮಿಲ್ಲರ್ ಅವರ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ಆಫ್ರಿಕಾ 211 ರನ್‌ಗಳ ಗುರಿಯನ್ನು ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು. ಎರಡನೇ ಟಿ20 ಪಂದ್ಯದಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ (Team India) ಮಿಲ್ಲರ್ ಸವಾಲನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ (Harbhajan Singh) ಮಿಲ್ಲರ್ ರನ್ನು ಔಟ್ ಮಾಡುವ ವಿಚಿತ್ರ ವಿಧಾನವನ್ನು ಟೀಂ ಇಂಡಿಯಾ ಬೌಲರ್ಗಳಿಗೆ ಹೇಳಿಕೊಟ್ಟಿದ್ದಾರೆ.
ಭಾರತ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದೆ. ರಿಷಬ್ ಪಂತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಎರಡನೇ ಟಿ20 ಗೆಲುವಿನೊಂದಿಗೆ ಮರಳುವುದು ಬಹಳ ಮುಖ್ಯ. ಮತ್ತೊಮ್ಮೆ ವಿಫಲವಾದರೆ ಸರಣಿ ಗೆಲ್ಲಲು ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು. ಈ ಸರಣಿಯಲ್ಲಿ ಸಹಜವಾಗಿಯೇ ಡೇವಿಡ್ ಮಿಲ್ಲರ್ ಸ್ಫೋಟಕ ಫಾರ್ಮ್‌ನಲ್ಲಿರುವ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದ್ದಾರೆ. ಮಿಲ್ಲರ್ 31 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ ಅಜೇಯ 64 ರನ್ ಗಳಿಸಿದರು ಮತ್ತು ವ್ಯಾನ್ ಡೆರ್ ದುಸೇನ್ 46 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 75 ರನ್ ಗಳಿಸಿದರು.
ಇದನ್ನೂ ಓದಿ:IND vs SA: ತವರಿನಲ್ಲೇ ಟೀಂ ಇಂಡಿಯಾವನ್ನು ಮಣಿಸಿ ವಿಭಿನ್ನ ದಾಖಲೆ ಬರೆದ ಆಫ್ರಿಕನ್ನರು..!
ಮಿಲ್ಲರ್ ಅವರನ್ನು ಔಟ್ ಮಾಡಲು ಭಜ್ಜಿ ಸಲಹೆ
ಭಾರತದ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ ಟೀಂ ಇಂಡಿಯಾಗೆ ಮಿಲ್ಲರ್ ವಿಕೆಟ್ ಹೇಗೆ ಪಡೆಯಬಹುದು ಎಂದು ಹೇಳಿದ್ದಾರೆ. ಹರ್ಭಜನ್ ಹಂಚಿಕೊಂಡ ವೀಡಿಯೊದಲ್ಲಿ, ಬ್ಯಾಟ್ಸ್‌ಮನ್ ಶಾಟ್ ಆಡಿದ ನಂತರ ರನ್‌ಗಳಿಗಾಗಿ ಓಡುತ್ತಾನೆ. ನಂತರ ಆತ ನಾನ್ ಸ್ಟ್ರೈಕರ್ ಅಂತ್ಯದ ಕಡೆಗೆ ಓಡಲು ಪ್ರಾರಂಭಿಸಿದ ತಕ್ಷಣ, ಬೌಲರ್ ಅವನನ್ನು ಕೆಳಕ್ಕೆ ತಳ್ಳಿದ್ದಾನೆ. ಇದನ್ನು ಕಂಡ ಬ್ಯಾಟರ್ ಆಶ್ಚರ್ಯಚಕಿತರಾಗಿ ಬೌಲರ್‌ನತ್ತ ನೋಡುತ್ತಲೇ ಇದ್ದಾನೆ. ಈ ವಿಡಿಯೋ ಹಂಚಿಕೊಂಡಿರುವ ಹರ್ಭಜನ್ ತಮ್ಮ ಶೀರ್ಷಿಕೆಯಲ್ಲಿ,ಡೇವಿಡ್ ಮಿಲ್ಲರ್ ಎಂತಹ ಅದ್ಭುತವಾದ ಲಯದಲ್ಲಿದ್ದಾರೆ, ಅವರನ್ನು ತಡೆಯಲು ಈಗ ಇದೊಂದೇ ಮಾರ್ಗವಾಗಿದೆ ಎಂದು ತೋರುತ್ತದೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಐಪಿಎಲ್‌ನಲ್ಲೂ ಮಿಲ್ಲರ್ ಬ್ಯಾಟ್ ಅಬ್ಬರ
ಐಪಿಎಲ್ 2022 ರಲ್ಲೂ ಮಿಲ್ಲರ್ ಅದೇ ಶೈಲಿಯಲ್ಲಿ ಬ್ಯಾಟ್ ಮಾಡಿದರು. ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಿಲ್ಲರ್ ಈ ಬಾರಿಯ ಐಪಿಎಲ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ಕೇವಲ 7 ಬಾರಿ ವಿಕೆಟ್ ಕಳೆದುಕೊಂಡು ಒಟ್ಟು 481 ರನ್ ಗಳಿಸಿದ್ದರು. ಅವರ ಬ್ಯಾಟಿಂಗ್ ಸರಾಸರಿ 68.71 ಮತ್ತು ಸ್ಟ್ರೈಕ್ ರೇಟ್ 142.72 ಆಗಿತ್ತು. ಇದರೊಂದಿಗೆ ಅವರು ಗುಜರಾತ್ ಟೈಟಾನ್ಸ್‌ಗೆ ಹಲವು ಬಾರಿ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಿದರು.
Published On - 8:10 pm, Sat, 11 June 22