ENG vs NZ: ಆಂಗ್ಲರ ವಿರುದ್ಧ ಸತತ ಎರಡನೇ ಶತಕ ಸಿಡಿಸಿದ ಕಿವೀಸ್ ಬ್ಯಾಟರ್ ಮಿಚೆಲ್..!

ENG vs NZ: ಇದಕ್ಕೂ ಮೊದಲು ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಶತಕ ಬಾರಿಸಿದ್ದರು. ಮಿಚೆಲ್ ಅವರ ಶತಕದ ಆಧಾರದ ಮೇಲೆ, ನ್ಯೂಜಿಲೆಂಡ್ ಎರಡನೇ ದಿನದಲ್ಲಿ ಉತ್ತಮವಾಗಿ ಆರಂಭ ಮಾಡಿ ಶೀಘ್ರದಲ್ಲೇ 350 ರನ್ ಗಡಿ ದಾಟಿತು.

ENG vs NZ: ಆಂಗ್ಲರ ವಿರುದ್ಧ ಸತತ ಎರಡನೇ ಶತಕ ಸಿಡಿಸಿದ ಕಿವೀಸ್ ಬ್ಯಾಟರ್ ಮಿಚೆಲ್..!
ಡ್ಯಾರಿಲ್ ಮಿಚೆಲ್
TV9kannada Web Team

| Edited By: pruthvi Shankar

Jun 11, 2022 | 5:35 PM

ಇಂಗ್ಲೆಂಡ್ ವಿರುದ್ಧದ ನಾಟಿಂಗ್ ಹ್ಯಾಮ್ ಟೆಸ್ಟ್​ನ (Nottingham Test against England) ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್​ಮನ್ ಡ್ಯಾರಿಲ್ ಮಿಚೆಲ್ (Daryl Mitchell) ಶತಕ ಸಿಡಿಸಿದ್ದಾರೆ. ಜೂನ್ 11 ಶನಿವಾರ, ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಟೆಸ್ಟ್‌ನ ಎರಡನೇ ದಿನದಂದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಿಚೆಲ್ ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೂರನೇ ಶತಕವಾಗಿದೆ. ಈ ಮೂಲಕ ಮಿಚೆಲ್ ಸತತ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಶತಕ ಬಾರಿಸಿದ್ದರು. ಮಿಚೆಲ್ ಅವರ ಶತಕದ ಆಧಾರದ ಮೇಲೆ, ನ್ಯೂಜಿಲೆಂಡ್ ಎರಡನೇ ದಿನದಲ್ಲಿ ಉತ್ತಮವಾಗಿ ಆರಂಭ ಮಾಡಿ ಶೀಘ್ರದಲ್ಲೇ 350 ರನ್ ಗಡಿ ದಾಟಿತು.

ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ದಿನದಂದು ನ್ಯೂಜಿಲೆಂಡ್ 4 ವಿಕೆಟ್‌ಗೆ 318 ರನ್ ಗಳಿಸಿ ತನ್ನ ಇನ್ನಿಂಗ್ಸ್ ಅನ್ನು ಮುಂದುವರಿಸಿದೆ. ಮಿಚೆಲ್ 81 ರನ್‌ಗಳಿಂದ ಇನ್ನಿಂಗ್ಸ್ ಆರಂಭಿಸಿದರು. ನಂತರ ಮಿಚೆಲ್ ಶತಕ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ದಿನದ 10ನೇ ಓವರ್​ನಲ್ಲಿ ಮ್ಯಾಥ್ಯೂ ಪಾಟ್ಸ್ ಎಸೆತದಲ್ಲಿ ಬೌಂಡರಿ ಬಾರಿಸಿ ಶತಕ ಪೂರೈಸಿದರು. ಮಿಚೆಲ್ ಶತಕ ತಲುಪಲು 184 ಎಸೆತಗಳನ್ನು ಎದುರಿಸಿದರು. ಮಿಚೆಲ್ ಅವರ ಈ ಇನ್ನಿಂಗ್ಸ್ ಅದ್ಭುತವಾಗಿತ್ತು ಮತ್ತು ಇದರಲ್ಲಿ ಅವರು ಯಾವುದೇ ದೊಡ್ಡ ತಪ್ಪಿಲ್ಲದೆ ಶತಕದವರೆಗೆ ಪ್ರಯಾಣಿಸಿದರು.

ಅದೃಷ್ಟದಿಂದ ತಂಡಕ್ಕೆ ಎಂಟ್ರಿ

ಮಿಚೆಲ್ ಕೇವಲ 11ನೇ ಟೆಸ್ಟ್ ಆಡುತ್ತಿದ್ದು, ಕೊರೊನಾ ವೈರಸ್ ಸೋಂಕಿಗೆ ಒಳಗಾದ ಹೆನ್ರಿ ನಿಕೋಲ್ಸ್ ಬದಲಿಗೆ ಅವರನ್ನು ಲಾರ್ಡ್ಸ್ ಟೆಸ್ಟ್‌ನಲ್ಲಿ ತಂಡಕ್ಕೆ ಸೇರಿಸಲಾಯಿತು. ಅವರು ಶತಕ ಬಾರಿಸುವ ಮೂಲಕ ಎರಡನೇ ಟೆಸ್ಟ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿದರು. ಈ ಬಾರಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿದರು. ವಿಶೇಷವೆಂದರೆ ಸ್ವತಃ ಶತಕದ ಸಮೀಪದಲ್ಲಿರುವ ಟಾಮ್ ಬ್ಲಂಡೆಲ್ ಅವರಿಂದ ಉತ್ತಮ ಬೆಂಬಲ ಕೂಡ ಸಿಕ್ಕಿದೆ.

ಇದನ್ನೂ ಓದಿ

ಮಿಚೆಲ್ ಮತ್ತು ಬ್ಲಂಡೆಲ್ ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 195 ರನ್ ಜೊತೆಯಾಟವನ್ನು ಹಂಚಿಕೊಂಡು ನ್ಯೂಜಿಲೆಂಡ್ ಅನ್ನು ಉತ್ತಮ ಸ್ಥಿತಿಯಲ್ಲಿಟ್ಟರು, ಆದರೆ ಇದರ ಹೊರತಾಗಿಯೂ ನ್ಯೂಜಿಲೆಂಡ್ ಸೋಲನ್ನು ಎದುರಿಸಬೇಕಾಯಿತು. ಈ ಬಾರಿಯೂ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಮತ್ತೊಂದು ಉತ್ತಮ ಜೊತೆಯಾಟ ನಡೆಸಿದರು. ಇಬ್ಬರೂ ಲಾರ್ಡ್ಸ್ ಟೆಸ್ಟ್‌ಗಿಂತಲೂ ಈ ಟೆಸ್ಟ್​ನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಈ ಬಾರಿ 200 ಕ್ಕೂ ಹೆಚ್ಚು ರನ್ ಸೇರಿಸಿ ತಂಡವನ್ನು 400 ರನ್‌ಗಳ ಗಡಿ ದಾಟಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada