IND vs SA: ಭಾರತ- ಆಫ್ರಿಕಾ ಪಂದ್ಯದ ನಡುವೆ ಪರಸ್ಪರ ಬಡಿದಾಡಿಕೊಂಡ ಫ್ಯಾನ್ಸ್..! ವಿಡಿಯೋ ವೈರಲ್

IND vs SA: ಈ ವಿಡಿಯೋದಲ್ಲಿ ಒಬ್ಬರ ಮೇಲೊಬ್ಬರು ಮುಷ್ಟಿ ಮಳೆ ಸುರಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಈ ಗಲಾಟೆ ಶಾಂತಗೊಳಿಸಿದ್ದಾರೆ.

IND vs SA: ಭಾರತ- ಆಫ್ರಿಕಾ ಪಂದ್ಯದ ನಡುವೆ ಪರಸ್ಪರ ಬಡಿದಾಡಿಕೊಂಡ ಫ್ಯಾನ್ಸ್..! ವಿಡಿಯೋ ವೈರಲ್
ಪಂದ್ಯದ ನಡುವೆ ಫ್ಯಾನ್ಸ್ ಫೈಟ್
Follow us
TV9 Web
| Updated By: ಪೃಥ್ವಿಶಂಕರ

Updated on: Jun 11, 2022 | 3:30 PM

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20 ಸರಣಿಯಲ್ಲಿ ಭಾರತ (IND vs SA) ಉತ್ತಮ ಆರಂಭವನ್ನು ಪಡೆಯಲಿಲ್ಲ. ಗುರುವಾರ ಜೂನ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಸೋತಿತು. ಸದ್ಯ ರಿಷಬ್ ಪಂತ್ (Rishabh Pant) ನಾಯಕತ್ವದ ಟೀಂ ಇಂಡಿಯಾ ಮುಂದಿನ ಪಂದ್ಯವನ್ನು ಗೆಲ್ಲುವ ಪ್ಲಾನ್​ನಲ್ಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರ ಪ್ರದರ್ಶನ ನೋಡುಗರಲ್ಲಿ ಕುತೂಹಲ ಕೆರಳಿಸಿತ್ತು. ಇದೇ ವೇಳೆ ಪಂದ್ಯ ವೀಕ್ಷಿಸಲು ಬಂದ ಅಭಿಮಾನಿಗಳ ನಡುವೆ ನಡೆದ ವಾಗ್ವಾದ ಈಗ ಸಖತ್ ವೈರಲ್ ಆಗುತ್ತಿದೆ. ಈ ಸಂಚಿಕೆಯಲ್ಲಿ ಮೈದಾನದ ಈಸ್ಟ್ ಸ್ಟ್ಯಾಂಡ್‌ನಲ್ಲಿ ಆಟ ವೀಕ್ಷಿಸಲು ಬಂದ ಕೆಲವು ಪ್ರೇಕ್ಷಕರು ಮುಖಾಮುಖಿ ಬಡಿದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬರ ಮೇಲೊಬ್ಬರು ಮುಷ್ಟಿ ಮಳೆ ಸುರಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಈ ಗಲಾಟೆ ಶಾಂತಗೊಳಿಸಿದ್ದಾರೆ.

ಭಾನುವಾರ (ಜೂನ್ 12) ಕಟಕ್​ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡ ಅದರಲ್ಲೂ ಬೌಲರ್​ಗಳು ಅಮೋಘ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಮೊದಲ ಪಂದ್ಯದಲ್ಲಿ, ಎಲ್ಲಾ ಬೌಲರ್‌ಗಳು ಸುಲಭವಾಗಿ ರನ್ ನೀಡಿದರು, ಆದ್ದರಿಂದ ತಂಡವು ಬೃಹತ್ ಸ್ಕೋರ್ ಉಳಿಸಲು ಸಾಧ್ಯವಾಗಲಿಲ್ಲ. ಅನುಭವಿ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ತಮ್ಮ ಸ್ಪೆಲ್‌ನಲ್ಲಿ ತಲಾ 43 ರನ್ ನೀಡಿದರು. ಸ್ಪಿನ್ ಬೌಲರ್​ಗಳಾದ ಯುಜ್ವೇಂದ್ರ ಚಹಾಲ್ ಮತ್ತು ಅಕ್ಷರ್ ಪಟೇಲ್ ಕೂಡ ಹೆಚ್ಚಿನ ಕೊಡುಗೆ ನೀಡಿದರು. ಚಹಾಲ್ 2.1 ಓವರ್‌ಗಳಲ್ಲಿ 26 ಮತ್ತು ಅಕ್ಷರ್ ನಾಲ್ಕು ಓವರ್‌ಗಳಲ್ಲಿ 40 ರನ್ ನೀಡಿದರು.

ಇದನ್ನೂ ಓದಿ:IND vs SA: ಆಗ ಕೊಹ್ಲಿ.. ಈಗ ಪಂತ್; ಸೋಲಿನಲ್ಲಿ ಕಾಕತಾಳೀಯ ಇರಬೇಕು.. ಆದರೆ ಇಷ್ಟೊಂದಾ?

ಮೊದಲ ಪಂದ್ಯ ಹೀಗಿತ್ತು

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 211 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಐದು ಎಸೆತಗಳು ಬಾಕಿ ಇರುವಂತೆಯೇ ಈ ಗುರಿಯನ್ನು ಸಾಧಿಸಿತು. ಆಫ್ರಿಕಾ ಪರ ರಾಸಿ ವಾನ್ ಡೆರ್ ದುಸೇನ್ ಅಜೇಯ 75 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ, ಈ ಬ್ಯಾಟ್ಸ್‌ಮನ್ 46 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳ ಜೊತೆಗೆ ಐದು ಸಿಕ್ಸರ್‌ಗಳನ್ನು ಹೊಡೆದರು. ಇವರ ಹೊರತಾಗಿ ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ 64 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಮಿಲ್ಲರ್ ನಾಲ್ಕು ಬೌಂಡರಿಗಳ ಜೊತೆಗೆ ಐದು ಸಿಕ್ಸರ್‌ಗಳನ್ನು ಬಾರಿಸಿದರು.

ದುಸೇನ್ ಕ್ಯಾಚ್ ಬಿಟ್ಟ ಅಯ್ಯರ್

ದಕ್ಷಿಣ ಆಫ್ರಿಕಾ ತಂಡ ಸಂಕಷ್ಟದ ಸ್ಥಿತಿಯಲ್ಲಿತ್ತು. ಪ್ರವಾಸಿ ತಂಡಕ್ಕೆ ಐದು ಓವರ್‌ಗಳಲ್ಲಿ 63 ರನ್‌ಗಳ ಅಗತ್ಯವಿತ್ತು. ಮಿಲ್ಲರ್ ಮತ್ತು ದುಸ್ಸೇನ್ ಮೈದಾನದಲ್ಲಿದ್ದರು, ಇಬ್ಬರೂ ಉಳಿದರೆ ಪಂದ್ಯ ಕೈ ತಪ್ಪುತ್ತದೆ ಎಂದು ಟೀಂ ಇಂಡಿಯಾ ಅರಿತಿತ್ತು. 16ನೇ ಓವರ್‌ ಎಸೆಯಲು ಅವೇಶ್ ಖಾನ್ ಬಂದರು. ಅವೇಶ್ ಚೆಂಡನ್ನು ನಿಧಾನವಾಗಿ ಬೌಲ್ಡ್ ಮಾಡಿದರು, ದುಸೇನ್ ಅದನ್ನು ಡೀಪ್ ಮಿಡ್ವಿಕೆಟ್ ಕಡೆಗೆ ಆಡಿದರು. ಅಲ್ಲಿ ಶ್ರೇಯಸ್ ಅಯ್ಯರ್ ನಿಂತಿದ್ದರು. ಅಯ್ಯರ್‌ಗೆ ಕ್ಯಾಚ್ ಹಿಡಿಯುವ ಅವಕಾಶವಿತ್ತು, ಆದರೆ ಅತ್ಯುತ್ತಮ ಫೀಲ್ಡಿಂಗ್‌ಗೆ ಹೆಸರಾದ ಅಯ್ಯರ್ ನಿರ್ಣಾಯಕ ಸಮಯದಲ್ಲಿ ಈ ಮಹತ್ವದ ಕ್ಯಾಚ್ ಅನ್ನು ಕೈಬಿಟ್ಟರು. ಈ ವೇಳೆ ದುಸೇನ್ 29 ರನ್ ಗಳಿಸಿದ್ದರು. ಇದಾದ ಬಳಿಕ ಮುಂದಿನ 16 ಎಸೆತಗಳಲ್ಲಿ 46 ರನ್ ಗಳಿಸಿ ಭಾರತದ ಸೋಲಿಗೆ ಕಾರಣರಾದರು. ಅಯ್ಯರ್ ಈ ಕ್ಯಾಚ್ ಹಿಡಿದಿದ್ದರೆ ಪಂದ್ಯ ಬದಲಾಗಬಹುದಿತ್ತು.

ಭಾರತದ ಅದ್ಭುತ ಬ್ಯಾಟಿಂಗ್

ಅಯ್ಯರ್ ಅವರ ಈ ಕ್ಯಾಚ್ ಅವರ ಬ್ಯಾಟ್‌ನ ಶ್ರಮವನ್ನೂ ಹಾಳು ಮಾಡಿತು. ಅಯ್ಯರ್ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 27 ಎಸೆತಗಳಲ್ಲಿ ಒಂದು ಬೌಂಡರಿ, ಮೂರು ಸಿಕ್ಸರ್‌ಗಳ ಸಹಾಯದಿಂದ 36 ರನ್ ಗಳಿಸಿದರು. ಈ ಪಂದ್ಯದಲ್ಲಿ ಭಾರತದ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ ಅತಿ ಹೆಚ್ಚು ರನ್ ಗಳಿಸಿದರು. ಯುವ ಎಡಗೈ ಬ್ಯಾಟ್ಸ್‌ಮನ್ 48 ಎಸೆತಗಳನ್ನು ಎದುರಿಸಿ 11 ಬೌಂಡರಿ, ಮೂರು ಸಿಕ್ಸರ್‌ಗಳೊಂದಿಗೆ 76 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಕೊನೆಯ ಹಂತದಲ್ಲಿ 12 ಎಸೆತಗಳನ್ನು ಎದುರಿಸಿ 31 ರನ್ ಗಳಿಸಿದರು. ಈ ಸಮಯದಲ್ಲಿ, ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಹೊಡೆದರು.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ