IND vs SA 2nd T20 Playing 11: ಭಾರತ ತಂಡದಲ್ಲಿ ಬೌಲಿಂಗ್ ಬದಲಾವಣೆ? ಎರಡೂ ತಂಡಗಳ ಆಡುವ XI
IND vs SA 2nd T20 Playing 11: ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ತಂಡ ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸರಣಿಯಲ್ಲಿ ಬಲಿಷ್ಠ ಶುಭಾರಂಭ ಮಾಡಿದೆ.
ಭಾನುವಾರ ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಎರಡನೇ ಟಿ20 ಪಂದ್ಯವನ್ನಾಡಲಿದೆ. ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ತಂಡ ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸರಣಿಯಲ್ಲಿ ಬಲಿಷ್ಠ ಶುಭಾರಂಭ ಮಾಡಿದೆ. ರಿಷಬ್ ಪಂತ್ (Rishabh Pant) ನಾಯಕತ್ವದ ಟೀಮ್ ಇಂಡಿಯಾ (Team India) ಇಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು ಆದರೆ ಕಳಪೆ ಬೌಲಿಂಗ್‌ನಿಂದಾಗಿ 211 ರನ್‌ಗಳ ಸ್ಕೋರ್ ಅನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ತಂಡಕ್ಕೆ ಈಗ ಕಟಕ್‌ನಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇನ್ನೊಂದು ಸೋಲಿನ ಅರ್ಥ ಪಂತ್ ನೇತೃತ್ವದ ತಂಡವು ಸರಣಿಯನ್ನು ಗೆಲ್ಲಲು ಸತತವಾಗಿ ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ, ಅದು ತುಂಬಾ ಕಷ್ಟಕರವಾಗಿರುತ್ತದೆ.
ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಉತ್ತಮ ಲಯದಲ್ಲಿ ಕಂಡು ಬಂದಿತ್ತು. ಇಶಾನ್ ಕಿಶನ್ ಬಿರುಸಿನ ಅರ್ಧಶತಕದ ಇನಿಂಗ್ಸ್ ಆಡಿದರು. ಶ್ರೇಯಸ್ ಅಯ್ಯರ್ ಮತ್ತು ಪಂತ್ ಕೂಡ ಪ್ರಮುಖ ಜೊತೆಯಾಟಗಳನ್ನು ಮಾಡಿದರು. ಅವರಲ್ಲದೆ, ಹಾರ್ದಿಕ್ ಪಾಂಡ್ಯ ಕೂಡ ಕೊನೆಯ ಓವರ್‌ಗಳಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದರು. ಇಂತಹ ಪರಿಸ್ಥಿತಿಯಲ್ಲಿ ಭಾರತ ಬ್ಯಾಟಿಂಗ್ನಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಪಂತ್‌ಗೆ ಬೌಲಿಂಗ್ ದೊಡ್ಡ ಸಮಸ್ಯೆಯಾಗಿದೆ. ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹಳೆಯ ವೇಗವನ್ನು ತೋರಲಿಲ್ಲ. ಅವರು ಕೊನೆಯ ಓವರ್‌ಗಳಲ್ಲಿ ಅಗ್ಗವಾಗಿ ರನ್ ಬಿಟ್ಟುಕೊಟ್ಟರು. ಎದುರಾಳಿ ಬ್ಯಾಟ್ಸ್‌ಮನ್‌ಗಳು ಹರ್ಷಲ್ ಪಟೇಲ್ ಮೇಲೆ ರನ್ ಮಳೆ ಸುರಿಸಿದರು. ಯುವ ವೇಗಿ ಅವೇಶ್ ಖಾನ್ ಕೂಡ ಪ್ರಭಾವ ಬೀರಲು ವಿಫಲರಾದರು, ಆದರೂ ಅವರು ಮೂವರಲ್ಲಿ ಹೆಚ್ಚು ಮಿತವ್ಯಯಕಾರಿಯಾಗಿದ್ದರು.
ಇದನ್ನೂ ಓದಿ:IND vs SA: 6 ವರ್ಷ, 56 ಟಿ20 ಪಂದ್ಯ; ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ನಾಯಕನ ಚೊಚ್ಚಲ ಪಂದ್ಯವಿದು
ಟೀಂ ಇಂಡಿಯಾದಲ್ಲಿ ಬದಲಾವಣೆ ಕಡಿಮೆ
ಬೌಲಿಂಗ್‌ನಲ್ಲಿ ಬದಲಾವಣೆಯಾದರೆ, ಅರ್ಷದೀಪ್ ಮತ್ತು ವೇಗದ ಬೌಲರ್ ಉಮ್ರಾನ್ ಮಲಿಕ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಬೇಕು. ಐಪಿಎಲ್‌ನಲ್ಲಿ ಅರ್ಶ್‌ದೀಪ್ ಮತ್ತು ಮಲಿಕ್ ಜೋಡಿಯು ತುಂಬಾ ಪರಿಣಾಮಕಾರಿಯಾಗಿತ್ತು, ಅದರ ಆಧಾರದ ಮೇಲೆ ಅವರಿಗೆ ಟೀಮ್ ಇಂಡಿಯಾದಿಂದ ಕರೆ ಬಂದಿತು. ಆದರೆ, ಭಾನುವಾರ ಪಾದಾರ್ಪಣೆ ಮಾಡುವ ಅವಕಾಶ ಸಿಗುತ್ತದೆಯೇ ಎಂಬುದು ನಿರ್ಧಾರವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಆಟಗಾರರನ್ನು ಬೆಂಬಲಿಸುವುದರಲ್ಲಿ ನಂಬಿಕೆ ಇಟ್ಟಿರುವ ರಾಹುಲ್ ದ್ರಾವಿಡ್. ದ್ರಾವಿಡ್ ಆಟಗಾರರ ಮೇಲೆ ಹೆಚ್ಚು ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ಅವರು ಕೇವಲ ಒಂದು ಪಂದ್ಯದ ನಂತರ ತಂಡವನ್ನು ಬದಲಾಯಿಸುವ ಸಾಧ್ಯತೆ ತೀರ ಕಡಿಮೆ.
ದಕ್ಷಿಣ ಆಫ್ರಿಕಾ ತಂಡದಲ್ಲೂ ಬದಲಾವಣೆ ಇಲ್ಲ
ತಂಡದ ಪರ ಡೇವಿಡ್ ಮಿಲ್ಲರ್ ಮತ್ತು ರಾಸಿ ದುಸೇನ್ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಹೆಚ್ಚಿನ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದ ಬೌಲರ್‌ಗಳು ಕೂಡ ಉತ್ತಮ ಲಯದಲ್ಲಿ ಕಾಣಲಿಲ್ಲ. ಇದರ ಹೊರತಾಗಿಯೂ, ತೆಂಬಾ ಬಾವುಮಾ ತನ್ನ ಗೆಲುವಿನ ಸಂಯೋಜನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ.
ಭಾರತದ ಸಂಭಾವ್ಯ ಆಟಗಾರರ XI – ರಿಷಬ್ ಪಂತ್ (ನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್ ಮತ್ತು ಅವೇಶ್ ಖಾನ್
ದಕ್ಷಿಣ ಆಫ್ರಿಕಾದ ಸಂಭಾವ್ಯ ಪ್ಲೇಯಿಂಗ್ XI: ತಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರಾಸಿ ವ್ಯಾನ್ ಡೆರ್ ದುಸೇನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪೆರ್ನೆಲ್, ಡ್ವೇನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ತಬರಿಜ್ ಶಮ್ಸಿ, ಕಗಿಸೊ ರಬಾಡ, ಅನ್ರಿಕ್ ನಾರ್ಕಿಯಾ
Published On - 4:20 pm, Sat, 11 June 22