IND vs ENG: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ನಾಯಕ? ತಂಡದಲ್ಲೂ ಸಂಪೂರ್ಣ ಬದಲಾವಣೆ
IND vs ENG: ಟೆಸ್ಟ್ ಸರಣಿಯ ನಂತರ ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಟಿ20 ಸರಣಿಯನ್ನು ಆಡಬೇಕಿದ್ದು, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡುವ ತಂಡವೇ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಬಹುದು ಎಂಬ ವರದಿಗಳಿವೆ.
ಶೀಘ್ರದಲ್ಲೇ ಭಾರತ ತಂಡ (Team India) ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ತೆರಳಲಿದೆ. ಮೊದಲ ಪಂದ್ಯ ಜೂನ್ 26 ರಂದು ನಡೆಯಲಿದ್ದು, ಎರಡನೇ ಪಂದ್ಯ ಜೂನ್ 28 ರಂದು ನಡೆಯಲಿದೆ. ಈ ತಂಡದ ಕಮಾಂಡ್ ಹಾರ್ದಿಕ್ ಪಾಂಡ್ಯ (Hardik Pandya) ಕೈಯಲ್ಲಿದೆ ಏಕೆಂದರೆ ನಾಯಕ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಐದನೇ ಪಂದ್ಯವನ್ನು ಆಡಲಿದೆ. ಕಳೆದ ವರ್ಷ ನಡೆದ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಕೊರೊನಾದಿಂದಾಗಿ ಮುಂದೂಡಲ್ಪಟ್ಟಿತು. ಈಗ ಅದೇ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಸರಣಿಯ ನಂತರ ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಟಿ20 ಸರಣಿಯನ್ನು ಆಡಬೇಕಿದ್ದು, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡುವ ತಂಡವೇ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಬಹುದು ಎಂಬ ವರದಿಗಳಿವೆ.
ರೋಹಿತ್ ಇದ್ದಾಗಲೂ ಹಾರ್ದಿಕ್ ಪಾಂಡ್ಯ ನಾಯಕನಾ?
ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಐರ್ಲೆಂಡ್‌ನಲ್ಲಿ ಟಿ 20 ಸರಣಿಯನ್ನು ಆಡುವ ಪಾಂಡ್ಯ ನಾಯಕತ್ವದ ಭಾರತ ತಂಡವೇ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯನ್ನು ಆಡಬಹುದು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್ ಜುಲೈ 5 ರಂದು ಕೊನೆಗೊಳ್ಳಲಿದ್ದು, ಜುಲೈ 7 ರಿಂದ ಟಿ20 ಸರಣಿ ಪ್ರಾರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರು ಟೆಸ್ಟ್‌ನಿಂದ ಟಿ 20 ಸ್ವರೂಪಕ್ಕೆ ಬದಲಾಗುವುದು ಕಷ್ಟಕರವಾಗಿದೆ. ಹಾಗಾಗಿ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡುವ ತಂಡವನ್ನೇ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ:T20 World Cup: ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸಲು ಐಸಿಸಿ ಗಡುವು; ಈ 4 ಸರಣಿಗಳಿಂದ ತಂಡ ಕಟ್ಟಬೇಕಿದೆ ಕೋಚ್ ರಾಹುಲ್
ಐರ್ಲೆಂಡ್ ವಿರುದ್ಧದ ಟಿ 20 ಸರಣಿಯ ನಂತರ, ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ ಜುಲೈ 1 ರಂದು ಡರ್ಬಿಶೈರ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಅದೇ ಸಮಯದಲ್ಲಿ ಜುಲೈ 3 ರಂದು ನಾರ್ಥಾಂಪ್ಟನ್‌ಶೈರ್ ವಿರುದ್ಧ ಟಿ20 ಅಭ್ಯಾಸ ಪಂದ್ಯವೂ ನಡೆಯಲಿದೆ. ಈ ವೇಳೆ ರೋಹಿತ್ ಶರ್ಮಾ ನೇತೃತ್ವದ ತಂಡ ಎಡ್ಜ್‌ಬಾಸ್ಟನ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ.
?????? ??ℎ? ?????? ??????? ?#TeamIndia?? arrives in Leicester prior to the Historic Test against England ???????#ENGvIND #SonySportsNetwork @BCCI pic.twitter.com/Ii3HzrNBqS
— Sony Sports Network (@SonySportsNetwk) June 21, 2022
ಐರ್ಲೆಂಡ್ಗೆ ಭಾರತ ಪ್ರವಾಸದ ವೇಳಾಪಟ್ಟಿ
– ಭಾರತ ವಿರುದ್ಧ ಐರ್ಲೆಂಡ್, 1ನೇ ಟಿ20 – 26 ಜೂನ್ – ಭಾರತ ವಿರುದ್ಧ ಐರ್ಲೆಂಡ್, 2ನೇ ಟಿ20 – 28 ಜೂನ್
ಭಾರತದ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ
ಜುಲೈ 1 – 5: ಏಕೈಕ ಟೆಸ್ಟ್ ಪಂದ್ಯ (ಎಡ್ಜ್‌ಬಾಸ್ಟನ್)
ಜುಲೈ 7: ಮೊದಲ ಟಿ20 ಪಂದ್ಯ (ಏಜಿಯಾಸ್ ಬೌಲ್)
ಜುಲೈ 9: 2ನೇ ಟಿ20 ಪಂದ್ಯ (ಎಡ್ಜ್‌ಬಾಸ್ಟನ್)
ಜುಲೈ 10: 3ನೇ ಟಿ20 ಪಂದ್ಯ (ಟ್ರೆಂಟ್ ಬ್ರಿಡ್ಜ್)
ಏಕದಿನ ಸರಣಿ ವೇಳಾಪಟ್ಟಿ:
ಜುಲೈ 12- ಮೊದಲ ಏಕದಿನ ಪಂದ್ಯ (ಕಿಯಾ ಓವಲ್)
ಜುಲೈ 14- 2ನೇ ಏಕದಿನ ಪಂದ್ಯ (ಲಾರ್ಡ್ಸ್)
ಜುಲೈ 17- 3ನೇ ಏಕದಿನ ಪಂದ್ಯ (ಮ್ಯಾಂಚೆಸ್ಟರ್)
ಭಾರತೀಯ ಟೆಸ್ಟ್ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಬ್ ಪಂತ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಪ್ರಸಿಧ್ದ್ ಕೃಷ್ಣ.