- Kannada News Photo gallery Cristiano Ronaldos car accident 16 million Bugatti destroyed police registered a case
Cristiano Ronaldo: ಕ್ರಿಸ್ಟಿಯಾನೊ ರೊನಾಲ್ಡೊ ಕಾರು ಅಪಘಾತ; 17 ಕೋಟಿ ದುಬಾರಿ ಬೆಲೆಯ ಬುಗಾಟ್ಟಿ ಪುಡಿ ಪುಡಿ!
Cristiano Ronaldo: ಲೆಜೆಂಡರಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ 16 ಕೋಟಿ ರೂ. ದುಬಾರಿ ಬೆಲೆಯ ಬುಗಾಟಿ ಕಾರು ಮಜೋರ್ಕಾವದಲ್ಲಿ ಬೆಳಗ್ಗೆ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ
Updated on: Jun 22, 2022 | 12:16 PM

ಲೆಜೆಂಡರಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ 16 ಕೋಟಿ ರೂ. ದುಬಾರಿ ಬೆಲೆಯ ಬುಗಾಟಿ ಕಾರು ಮಜೋರ್ಕಾವದಲ್ಲಿ ಬೆಳಗ್ಗೆ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ ಆದರೆ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಅಪಘಾತದ ವೇಳೆ ರೊನಾಲ್ಡೊ ಅವರ ಅಂಗರಕ್ಷಕನೊಬ್ಬ ಮಾತ್ರ ವಾಹನದಲ್ಲಿ ಇದ್ದ ಎಂದು ವರದಿಯಾಗಿದೆ.

ಕ್ರಿಸ್ಟಿಯಾನೋ ರೊನಾಲ್ಡೊ ಪ್ರಸ್ತುತ ಕುಟುಂಬದೊಂದಿಗೆ ರಜೆಯ ಮಜದಲ್ಲಿದ್ದಾರೆ. ರೊನಾಲ್ಡೊ ಅವರು ಮಜೋರ್ಕಾದಲ್ಲಿ ತಮ್ಮ ಇಡೀ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅಪಘಾತಕ್ಕೀಡಾದ ಕಾರನ್ನು ರೊನಾಲ್ಡೊ ಇಲ್ಲಿ ತಿರುಗಾಡಲು ಬಳಸುತ್ತಿದ್ದರು.

ಅಪಘಾತದ ಸಮಯದಲ್ಲಿ ರೊನಾಲ್ಡೊ ಅವರ ಅಂಗರಕ್ಷಕ ಕಾರನ್ನು ಓಡಿಸುತ್ತಿದ್ದರು ಮತ್ತು ಕಾರಿನಲ್ಲಿ ಒಬ್ಬರೇ ಇದ್ದರು ಎಂದು ವರದಿಯಾಗಿದೆ. ಅಂಗರಕ್ಷಕನ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದೆ. ಇದರಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಬೇರೆ ಯಾವುದೇ ವಾಹನ ಅಪಘಾತಕ್ಕೀಡಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ಅವಘಡ ಸಂಭವಿಸಿದೆ. ಅಪಘಾತದ ಬಗ್ಗೆ ಚಾಲಕ ಮಾಹಿತಿ ನೀಡಿದ್ದಾನೆ.

ಅಲ್ಲಿದ್ದ ಮೂಲಗಳ ಪ್ರಕಾರ, 'ಕಾರು ಗೋಡೆಗೆ ಡಿಕ್ಕಿ ಹೊಡೆದರೂ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ. ಅಪಘಾತದ ಸಂಪೂರ್ಣ ಹೊಣೆಯನ್ನು ಚಾಲಕ ವಹಿಸಿಕೊಂಡಿದ್ದಾನೆ. ಕಾರು ರೊನಾಲ್ಡೊ ಹೆಸರಿನಲ್ಲಿದ್ದು, ಈ ಘಟನೆಯ ಕೇಸನ್ನು ಅದೇ ಹೆಸರಿನಲ್ಲಿ ಪೊಲೀಸರಲ್ಲಿ ದಾಖಲಿಸಿದ್ದಾರೆ. 2016ರಲ್ಲಿ ಯುರೋ ಕಪ್ ಗೆದ್ದ ನಂತರ ರೊನಾಲ್ಡೊ ಈ ಕಾರನ್ನು ಖರೀದಿಸಿದ್ದರು.

ಬುಗಾಟ್ಟಿ ರೊನಾಲ್ಡೊ ಅವರ ಐಷಾರಾಮಿ ಕಾರು ಸಂಗ್ರಹದ ಭಾಗವಾಗಿದೆ. ಅವರ ಸಂಗ್ರಹಣೆಯಲ್ಲಿ ಆಸ್ಟನ್ ಮಾರ್ಟಿನ್, ಬೆಂಟ್ಲಿ ಮತ್ತು ಫೆರಾರಿ ಮೊನ್ಜಾ ಕೂಡ ಸೇರಿದೆ. ರೊನಾಲ್ಡೊ, ಕೆಲವು ಸಮಯದ ಹಿಂದೆ ತಮ್ಮ ವಿಶೇಷ ಕಾರು ಸಂಗ್ರಹಣೆಯಲ್ಲಿ ರೂ 66 ಕೋಟಿ ಮೌಲ್ಯದ ಸೀಮಿತ ಆವೃತ್ತಿಯ ಬುಗಾಟಿ ಕಾರನ್ನು ಸಹ ಖರೀದಿಸಿದ್ದರು.



















