SL vs AUS: 6 ಎಸೆತ, 19 ರನ್ ಬೇಕು; 3 ಬೌಂಡರಿ ಬಾರಿಸಿದ ಆಸೀಸ್! ಕೊನೆಯ ಓವರ್ ರೋಚಕತೆ ಹೇಗಿತ್ತು ಗೊತ್ತಾ?

SL vs AUS: ಆಸ್ಟ್ರೇಲಿಯಾ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಸಿಕ್ಸರ್ ನಿರೀಕ್ಷೆಯಲ್ಲಿದ್ದರು. ಆದರೆ ಇಲ್ಲಿ ಸಿಕ್ಸರ್ ಬರಲಿಲ್ಲ, ಆದರೆ ಬ್ಯಾಕ್ ಟು ಬ್ಯಾಕ್ ಎರಡು ಬೌಂಡರಿಗಳು ಬಂದವು.

SL vs AUS: 6 ಎಸೆತ, 19 ರನ್ ಬೇಕು; 3 ಬೌಂಡರಿ ಬಾರಿಸಿದ ಆಸೀಸ್! ಕೊನೆಯ ಓವರ್ ರೋಚಕತೆ ಹೇಗಿತ್ತು ಗೊತ್ತಾ?
ಶ್ರೀಲಂಕಾ ಕ್ರಿಕೆಟ್ ತಂಡ
Follow us
| Updated By: ಪೃಥ್ವಿಶಂಕರ

Updated on: Jun 22, 2022 | 11:54 AM

ಆಸ್ಟ್ರೇಲಿಯಾ (Australia) ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ (Sri Lanka) ಗೆಲುವು ಸಾಧಿಸಿದೆ. ಇದರೊಂದಿಗೆ 5 ಏಕದಿನ ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಆದರೆ, ಇಲ್ಲಿ ಮಾತನಾಡುತ್ತಿರುವುದು ಸೋಲು-ಗೆಲುವಿನ ಬಗ್ಗೆ ಅಲ್ಲ, ಪಂದ್ಯದ ಕೊನೆಯ ಓವರ್‌ನಲ್ಲಿ ಒಂದಲ್ಲ, ಎರಡಲ್ಲ,, ಬರೋಬ್ಬರಿ ಮೂರು ರೋಚಕ ಕ್ಷಣಗಳ ಬಗ್ಗೆ. ಈ 3 ರೋಚಕ ಕ್ಷಣಗಳು ಅಭಿಮಾನಿಗಳ ಹೃದಯ ಗೆದ್ದ ಕ್ಷಣಗಳಾಗಿವೆ. ಪಂದ್ಯದ ಕೊನೆಯ ಓವರ್ ಅಂದರೆ ಆಸ್ಟ್ರೇಲಿಯಾದ ಇನಿಂಗ್ಸ್​ನ ಕೊನೆಯ 6 ಎಸೆತಗಳು ಈ ರೋಚಕತೆಗೆ ಸಾಕ್ಷಿಯಾದವು. ಆ 6 ಎಸೆತಗಳಲ್ಲಿ ಆಸ್ಟ್ರೇಲಿಯಾ 19 ರನ್ ಗಳಿಸಬೇಕಿತ್ತು. ಕೈಯಲ್ಲಿ ಒಂದು ವಿಕೆಟ್ ಮಾತ್ರ ಉಳಿದಿತ್ತು. ಶ್ರೀಲಂಕಾ ಮೇಲುಗೈ ಸಾಧಿಸಿತು.

ಆಸ್ಟ್ರೇಲಿಯ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 4 ರನ್‌ಗಳ ಜಯ ಸಾಧಿಸಿದೆ. ಚರಿತ್ ಅಸಲಂಕಾ ಅವರ ಶತಕದ ಆಧಾರದ ಮೇಲೆ ಮೊದಲು ಆಡಿದ ಶ್ರೀಲಂಕಾ ನಾಲ್ಕನೇ ಏಕದಿನ ಪಂದ್ಯದಲ್ಲಿ 258 ರನ್ ಗಳಿಸಿತು. ಇದಕ್ಕುತ್ತರವಾಗಿ 259 ರನ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 254 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರ ಡೇವಿಡ್ ವಾರ್ನರ್ ಗರಿಷ್ಠ 99 ರನ್ ಗಳಿಸಿದರು.

ಇದನ್ನೂ ಓದಿ:SL vs AUS: ಲಂಕಾ ವಿರುದ್ಧದ ಮೊದಲ ಟಿ20ಗೆ ಆಸೀಸ್ ತಂಡ ಪ್ರಕಟ; ಐಪಿಎಲ್ ಫ್ಲಾಪ್ ಸ್ಟಾರ್​ಗಳಿಗೆ ತಂಡದಲ್ಲಿ ಸ್ಥಾನ

ಇದನ್ನೂ ಓದಿ
Image
Virat Kohli Covid-19: ಮಾಲ್ಡೀವ್ಸ್​ಗೆ ತೆರಳಿದ್ದ ವಿರಾಟ್ ಕೊಹ್ಲಿಗೆ ಕೊರೊನಾ ಪಾಸಿಟಿವ್..!
Image
Team India: ಇಂಗ್ಲೆಂಡ್ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಔಟ್..!
Image
T20 Blast: ಬ್ಯಾಟ್ಸ್​ಮನ್​ಗೆ ಚೆಂಡೆಸೆದು 5 ರನ್​ಗಳ ಶಿಕ್ಷೆಗೊಳಗಾದ ಬ್ರಾಥ್​ವೇಟ್

ಕೊನೆಯ ಓವರ್‌ನ ಮೊದಲ ರೋಚಕತೆ

ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಕೊನೆಯ ಓವರ್‌ನಲ್ಲಿ ಸಿಕ್ಕಿಹಾಕಿಕೊಂಡಿತು. ಕೊನೆಯ 6 ಎಸೆತಗಳಲ್ಲಿ ಅತಿಥಿ ಆಸ್ಟ್ರೇಲಿಯಾ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಆ ಕೊನೆಯ ಓವರ್‌ನಲ್ಲಿ ಶ್ರೀಲಂಕಾದ ಬೌಲಿಂಗ್‌ ಜವಬ್ದಾರಿಯನ್ನು ನಾಯಕ ಶನಕ ವಹಿಸಿಕೊಂಡರು. ಮೊದಲ ಚೆಂಡು ಡಾಟ್ ಆಗಿತ್ತು. ಎರಡನೇ ಎಸೆತವನ್ನು ಬೌಂಡರಿ ಬಾರಿಸಲಾಯಿತು. ಮೂರನೇ ಎಸೆತದಲ್ಲಿ 2 ರನ್‌ಗಳು ಬಂದವು. ಅಂದರೆ, ಓವರ್‌ನ ಮೊದಲ 3 ಎಸೆತಗಳಲ್ಲಿ 6 ರನ್‌ಗಳು ಬಂದವು.

ಕೊನೆಯ ಓವರ್‌ನ 2ನೇ ರೋಚಕತೆ

ಆಸ್ಟ್ರೇಲಿಯಾ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಸಿಕ್ಸರ್ ನಿರೀಕ್ಷೆಯಲ್ಲಿದ್ದರು. ಆದರೆ ಇಲ್ಲಿ ಸಿಕ್ಸರ್ ಬರಲಿಲ್ಲ, ಆದರೆ ಬ್ಯಾಕ್ ಟು ಬ್ಯಾಕ್ ಎರಡು ಬೌಂಡರಿಗಳು ಬಂದವು. ಅದರ ನಂತರ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ 5 ರನ್ ಗಳಿಸಬೇಕಿತ್ತು. ಅಂದರೆ, ಒಂದು ಸಿಕ್ಸರ್ ಈಗ ತಂಡದ ಗೆಲುವಿಗೆ ಅನಿವಾರ್ಯವಾಯಿತು. ಕನಿಷ್ಠ ಪಕ್ಷ ಒಂದು ಫೋರ್ ಬಂದಿದ್ದರೂ ಪಂದ್ಯ ಟೈ ಆಗುತ್ತಿತ್ತು.

ಕೊನೆಯ ಓವರ್‌ನ 3ನೇ ರೋಚಕತೆ

ಕೊನೆಯ ಎಸೆತ ಬೌಲಿಂಗ್ ಮಾಡಿದ ಶ್ರೀಲಂಕಾ ತಂಡದ ನಾಯಕ ಯಾವುದೇ ರನ್ ನೀಡದೆ ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಉರುಳಿಸಿದರು. ಈ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ಪಂದ್ಯ ಇದೀಗ 4 ರನ್​ಗಳ ಅಂತರದಲ್ಲಿ ಶ್ರೀಲಂಕಾದ ಪಾಲಾಯಿತು. ಹೀಗಾಗಿ ಸರಣಿಯನ್ನು ಶ್ರೀಲಂಕಾ ವಶಪಡಿಸಿಕೊಂಡಿದೆ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ