T20 Blast: ಬ್ಯಾಟ್ಸ್​ಮನ್​ಗೆ ಚೆಂಡೆಸೆದು 5 ರನ್​ಗಳ ಶಿಕ್ಷೆಗೊಳಗಾದ ಬ್ರಾಥ್​ವೇಟ್

Carlos Brathwaite: ಕ್ರಿಕೆಟ್‌ನ ಕಾನೂನು ರೂಪಿಸುವ ಸಂಸ್ಥೆಯಾದ MCC ಯ ಅನ್‌ಫೇರ್ ಪ್ಲೇ ನಿಯಮಗಳ ಅಡಿಯಲ್ಲಿ ಕಾರ್ಲೋಸ್ ಬ್ರಾಥ್​ವೇಟ್​ ಅವರಿಗೆ ಶಿಕ್ಷೆ ವಿಧಿಸಲಾಯಿತು.

T20 Blast: ಬ್ಯಾಟ್ಸ್​ಮನ್​ಗೆ ಚೆಂಡೆಸೆದು 5 ರನ್​ಗಳ ಶಿಕ್ಷೆಗೊಳಗಾದ ಬ್ರಾಥ್​ವೇಟ್
Carlos brathwaite
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jun 21, 2022 | 5:46 PM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಕಾರ್ಲೋಸ್ ಬ್ರಾಥ್​ವೇಟ್ ತಪ್ಪೊಂದನ್ನು ಮಾಡಿ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಬರ್ಮಿಂಗ್ ಹ್ಯಾಮ್ ಬೇರ್ಸ್ ಮತ್ತು ಡರ್ಬಿಶೈರ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಬರ್ಮಿಂಗ್‌ಹ್ಯಾಮ್ ತಂಡದ 7 ವಿಕೆಟ್‌ ಕಳೆದುಕೊಂಡು 159 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಡರ್ಬಿಶೈರ್ ತಂಡದ ಸ್ಕೋರ್ ಒಂದು ವಿಕೆಟ್‌ಗೆ 111 ರನ್ ಆಗಿತ್ತು. ಇದೇ ವೇಳೆ ನಾಯಕ ಚೆಂಡನ್ನು ವೆಸ್ಟ್ ಇಂಡೀಸ್ ಕ್ರಿಕೆಟಿಗೆ ಕಾರ್ಲೋಸ್ ಬ್ರಾಥ್​ವೇಟ್ ಕೈಗಿತ್ತರು.

13ನೇ ಓವರ್ ಎಸೆದ ಬ್ರಾಥ್​ವೇಟ್ ಎಸೆತವನ್ನು ಬ್ಯಾಟ್ಸ್‌ಮನ್ ವೇಯ್ನ್ ಮ್ಯಾಡ್ಸೆನ್ ಬೌಲರ್ ಕಡೆಗೆ ಬಾರಿಸಿ 1 ರನ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಈ ಮಧ್ಯೆ ಬ್ರಾಥ್‌ವೇಟ್​ ಚೆಂಡನ್ನು ಎತ್ತಿಕೊಂಡು ವಿಕೆಟ್ ಕಡೆಗೆ ಹೊಡೆದರು. ಆದರೆ ಚೆಂಡು ನೇರವಾಗಿ ಬ್ಯಾಟ್ಸ್​ಮನ್​ ಮ್ಯಾಡ್ಸೆನ್‌ಗೆ ಬಡಿದಿದೆ. ಇದಾದ ಬಳಿಕ ಅಂಪೈರ್‌ಗಳು ಬ್ರಾಥ್​ವೇಟ್​ ನಡೆಗೆ ಬರ್ಮಿಂಗ್‌ಹ್ಯಾಮ್ ತಂಡಕ್ಕೆ 5 ರನ್‌ಗಳ ದಂಡ ವಿಧಿಸಿದರು.

ಇದನ್ನೂ ಓದಿ
Image
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Image
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
Image
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Image
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಕ್ರಿಕೆಟ್‌ನ ಕಾನೂನು ರೂಪಿಸುವ ಸಂಸ್ಥೆಯಾದ MCC ಯ ಅನ್‌ಫೇರ್ ಪ್ಲೇ ನಿಯಮಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಯಿತು. ಅದರಂತೆ ಬ್ರಾಥ್​ವೇಟ್ ನೇರವಾಗಿ ಬ್ಯಾಟ್ಸ್​ಮನ್​ ಅನ್ನು ಗುರಿಯಾಗಿಸಿ ಚೆಂಡೆಸೆದಿದ್ದಾರೆ ಎಂದು ಎದುರಾಳಿ ತಂಡಕ್ಕೆ 5 ರನ್‌ಗಳನ್ನು ನೀಡಲಾಯಿತು. ನಿಯಮ 42.3.1 ಪ್ರಕಾರ ಆಟಗಾರ, ಅಂಪೈರ್ ಅಥವಾ ಇತರ ಯಾವುದೇ ವ್ಯಕ್ತಿಯ ಮೇಲೆ ಅವಿವೇಕದ ಮತ್ತು ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಎಸೆಯುವ ಘಟನೆ ನಡೆದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಲ್ಲದೆ ಇದನ್ನು ಗಮನಿಸಿದ ಅಂಪೈರ್​ಗಳು ತಕ್ಷಣವೇ ಕ್ರಮ ಕೈಗೊಳ್ಳುವ ಅವಕಾಶವನ್ನೂ ಕೂಡ ಹೊಂದಿದ್ದಾರೆ.

ಬ್ಯಾಟ್ಸ್​ಮನ್ ಕ್ರೀಸ್​ನಲ್ಲಿದ್ದರೂ ಅವರನ್ನು ಗುರಿಯಾಗಿಸಿ ಕಾರ್ಲೋಸ್ ಬ್ರಾಥ್‌ವೈಟ್ ಚೆಂಡೆಸೆದಿದ್ದಾರೆ. ಇದನ್ನು ಅಂಪೈರ್‌ಗಳು ಅಸಡ್ಡೆ ಎಂದು ಪರಿಗಣಿಸಿ ಕಾರ್ಲೋಸ್ ಬ್ರಾಥ್​ವೇಟ್ ಅವರ ನಡೆಗೆ ಶಿಕ್ಷೆಯ ರೂಪದಲ್ಲಿ 5 ರನ್​ಗಳನ್ನು ನೀಡಲಾಯಿತು.

ಇಂತಹ ನಡೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಬೌಲರ್‌ಗೆ ಈ ವಿಷಯದಲ್ಲಿ ಡಿಮೆರಿಟ್ ಅಂಕಗಳೊಂದಿಗೆ ದಂಡವನ್ನೂ ವಿಧಿಸಲಾಗುತ್ತದೆ. ಐಪಿಎಲ್‌ನಲ್ಲಿ ಆಟಗಾರನಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಗುತ್ತಿದೆ. ಆದರೆ ಟಿ20 ಬ್ಲಾಸ್ಟ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ಎಂಸಿಸಿ ಈ ನಿಯಮವನ್ನು ಅಳವಡಿಸಿಕೊಂಡಿವೆ. ಇದರಿಂದ ಬ್ರಾಥ್‌ವೇಟ್ ಮತ್ತು ಅವರ ತಂಡಕ್ಕೆ 5 ರನ್‌ಗಳ ಶಿಕ್ಷೆ ವಿಧಿಸಲಾಯಿತು. ಇನ್ನು ಈ ಪಂದ್ಯದಲ್ಲಿ ಬರ್ಮಿಂಗ್​ಹ್ಯಾಮ್ ಬೇರ್ಸ್ ನೀಡಿದ 160 ರನ್​ಗಳ ಗುರಿಯನ್ನು ಡರ್ಬಿಶೈರ್ ತಂಡವು 18.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಚೇಸ್ ಮಾಡುವ ಮೂಲಕ ಭರ್ಜರಿ ಜಯ ಸಾಧಿಸಿತು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:46 pm, Tue, 21 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ