ಆರ್‌ಸಿಬಿ ತಂಡದ ಮಾಜಿ ಓಪನರ್ ಕ್ರಿಸ್ ಗೇಲ್ ಭೇಟಿಯಾದ ವಿಜಯ್ ಮಲ್ಯ; ನೆಟ್ಟಿಗರ ರಿಯಾಕ್ಷನ್ ಹೇಗಿದೆ ಗೊತ್ತಾ?
Vijay Mallya: ಮಲ್ಯ ಅವರು 9,000 ಕೋಟಿ ರೂಪಾಯಿಗಳ ಸಾಲ ದುರ್ಬಳಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದಾರೆ. ಈ ಸಾಲವನ್ನು ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಹಲವು ಬ್ಯಾಂಕ್‌ಗಳು ನೀಡಿವೆ.
ಮಧ್ಯದ ದೊರೆ, ಆರ್‌ಸಿಬಿ ತಂಡದ ಮಾಜಿ ಓನರ್ ವಿಜಯ್ ಮಲ್ಯ (Vijay Mallya) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮಾಜಿ ಆರಂಭಿಕ ಆಟಗಾರ ಕ್ರಿಸ್ ಗೇಲ್ (Chris Gayle) ಅವರನ್ನು ಭೇಟಿಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಆರಂಭದಲ್ಲಿ ಮದ್ಯದ ವ್ಯಾಪಾರಿ ವಿಜಯ್ ಮಲ್ಯ ಅವರ ಒಡೆತನದಲ್ಲಿತ್ತು. ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ವರ್ಷಗಳ ಕಾಲ ಆಡುವ ಮೂಲಕ ಸಂಚಲನ ಮೂಡಿಸಿದ್ದರು.
ಬ್ಯಾಂಕ್‌ಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಅವರು ತಮ್ಮ ಮಾಜಿ ಸ್ನೇಹಿತ, ಜನಪ್ರಿಯ ಕ್ರಿಕೆಟಿಗ ಗೇಲ್ ಅವರನ್ನು ಭೇಟಿಯಾದ ಫೋಟೋವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ಪೋಸ್ಟ್ ಮಾಡಿರುವ ಮಲ್ಯ, ”ನನ್ನ ಉತ್ತಮ ಸ್ನೇಹಿತ ಕ್ರಿಸ್ಟೋಫರ್ ಹೆನ್ರಿ ಗೇಲ್ ಅವರನ್ನು ಭೇಟಿಯಾಗಲು ಸಂತಸವಾಗಿದೆ. ನಾನು ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಾಗಿನಿಂದ ಅವರು ಮತ್ತು ನನ್ನ ನಡುವೆ ಒಳ್ಳೇಯ ಸ್ನೇಹ ಬೆಳೆದಿದೆ. ನಾನು ಅತ್ಯುತ್ತಮ ಆಟಗಾರನನ್ನು ಖರೀದಿಸಿದ್ದೇನೆ ಎಂದು ಮಲ್ಯ ಬರೆದುಕೊಂಡಿದ್ದಾರೆ.
Great to catch up with my good friend Christopher Henry Gayle @henrygayle , the Universe Boss. Super friendship since I recruited him for RCB. Best acquisition of a player ever. pic.twitter.com/X5Ny9d6n6t
— Vijay Mallya (@TheVijayMallya) June 22, 2022
ಆರ್ಸಿಬಿಯಲ್ಲಿ ಗೇಲ್ ಆಟ
2011 ರಲ್ಲಿ RCB ಗೆ ಸೇರಿಕೊಂಡ ಗೇಲ್, 2017 ರವರೆಗೆ ಫ್ರಾಂಚೈಸಿಗಾಗಿ ಆಡಿದ್ದರು. RCB ಯಲ್ಲಿದ್ದಾಗ ಲೀಗ್‌ನಲ್ಲಿ ಅಬ್ಬರಿಸಿದ್ದ ಗೇಲ್ 91 ಪಂದ್ಯಗಳಲ್ಲಿ 43.29 ರ ಸರಾಸರಿಯಲ್ಲಿ 3420 ರನ್ ಮತ್ತು 21 ಅರ್ಧಶತಕಗಳು ಹಾಗೂ 5 ಶತಕಗಳು ಸೇರಿದಂತೆ 154.40 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಅಲ್ಲದೆ, ಅವರು RCB ಪರ ಆಡುವಾಗ ಔಟಾಗದೆ 175 ರನ್ ಗಳಿಸಿದರು, ಇದು ಪಂದ್ಯಾವಳಿಯ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿದ ಆರೋಪದಲ್ಲಿ ಮಲ್ಯ
ಮಲ್ಯ ಅವರು ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿದ ಆರೋಪದಲ್ಲಿ ಮಾರ್ಚ್ 2016 ರಲ್ಲಿ ಯುಕೆಗೆ ಪಲಾಯನ ಮಾಡಿದರು. ಮಲ್ಯ, 9,000 ಕೋಟಿ ರೂಪಾಯಿಗಳ ಸಾಲ ದುರ್ಬಳಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದಾರೆ. ಈ ಸಾಲವನ್ನು ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಹಲವು ಬ್ಯಾಂಕ್‌ಗಳು ನೀಡಿವೆ. 65 ವರ್ಷದ ಮಲ್ಯ ಸದ್ಯ ಯುಕೆಯಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ದೇಶದಲ್ಲಿ ಆಶ್ರಯ ನೀಡುವ ವಿಷಯದ ಬಗ್ಗೆ ಗೌಪ್ಯ ಕಾನೂನು ಪ್ರಕ್ರಿಯೆಗಳು ಇತ್ಯರ್ಥವಾಗುವವರೆಗೆ ಅವರು ಜಾಮೀನಿನ ಮೇಲೆ ಉಳಿಯಬಹುದು ಎಂದು ತಿಳಿದುಬಂದಿದೆ.
ನೆಟ್ಟಿಗರ ರಿಯಾಕ್ಷನ್ ಹೀಗಿದೆ.
Any one who has seen this daru pe charcha episode can relate this . ?? pic.twitter.com/0r12dNNUqX
— थोमस पोखरेल ♏ (@Thomaspokharel1) June 22, 2022
Paisa kab dega tu ? Tu mere se 2 rupiya udhaar liya thaa yaad hain jab tu vaag gaya tha taab main tujhko 2 rupiya wala ek biscuit diya tha paisa de de ?
— Sandy ? (@Sayantanrt) June 22, 2022
Ghar Aaja Pardesi tujh ko desh bulaye re Chor+bhagodha+darpok+dakaet= Vijay malya Gayle kala h par istime mujhe gora lag raha h Tere kale kaarnamo ki wajah se ???
— Syed Qasim raza rizvi (@0851741e741a429) June 22, 2022