SL vs AUS: ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ; ಯಾರಿಗೆಲ್ಲ ಅವಕಾಶ?

SL vs AUS: ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜೂನ್ 14 ರಿಂದ ಪ್ರಾರಂಭವಾಗುತ್ತಿದೆ. ಟಿ20 ಸರಣಿಯನ್ನು 2-1 ರಿಂದ ವಶಪಡಿಸಿಕೊಂಡ ಆಸ್ಟ್ರೇಲಿಯಾ, ಏಕದಿನ ಸರಣಿಯಲ್ಲೂ ಗೆಲುವಿನ ಮೇಲೆ ಕಣ್ಣಿಟ್ಟಿದೆ.

SL vs AUS: ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ; ಯಾರಿಗೆಲ್ಲ ಅವಕಾಶ?
ಆಸೀಸ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Jun 13, 2022 | 4:09 PM

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್ (Aaron Finch) ತಂಡದ ಆಡುವ ಇಲೆವೆನ್ ಬಗ್ಗೆ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿರುವ ಹನ್ನೊಂದು ಆಟಗಾರರ ಹೆಸರನ್ನು ಅವರು ಸೀಲ್ ಮಾಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ (Australia and Sri Lanka) ನಡುವಿನ ಐದು ಪಂದ್ಯಗಳ ಏಕದಿನ ಸರಣಿಯು ಜೂನ್ 14 ರಿಂದ ಪ್ರಾರಂಭವಾಗುತ್ತಿದೆ. ಟಿ20 ಸರಣಿಯನ್ನು 2-1 ರಿಂದ ವಶಪಡಿಸಿಕೊಂಡ ಆಸ್ಟ್ರೇಲಿಯಾ, ಏಕದಿನ ಸರಣಿಯಲ್ಲೂ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆಸ್ಟ್ರೇಲಿಯ ತಂಡದಲ್ಲಿ ಅನುಭವಿಗಳಿದ್ದು, ಸರಣಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ತಂಡದ ಮುಂದಿರುವ ಸಮಸ್ಯೆಗಳೆಂದರೆ, ತಂಡದ ಕೆಲವು ಸ್ಟಾರ್ ಆಟಗಾರರ ಅಲಭ್ಯತೆ. ವಾಸ್ತವವಾಗಿ, ಕೆಲವು ಆಟಗಾರರು ಗಾಯ ಮತ್ತು ವೈಯಕ್ತಿಕ ಕಾರಣಗಳಿಂದ ಮತ್ತು ಕೆಲವರು ಮೊದಲ ODI ನಿಂದ ಹೊರಗುಳಿದಿದ್ದಾರೆ.

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಕ್ಯಾಂಡಿಯಲ್ಲಿ ನಡೆಯಲಿದೆ. ಜೂನ್ 14 ರಂದು ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ಮತ್ತು ಕೇನ್ ರಿಚರ್ಡ್ಸನ್ ಅವರನ್ನು ಮಿಸ್ ಮಾಡಿಕೊಳ್ಳಲಿದೆ. ಇವರಲ್ಲದೇ ಆಡಮ್ ಝಂಪಾ ಕೂಡ ತಂಡದಲ್ಲಿ ಇರುವುದಿಲ್ಲ.

ಇದನ್ನೂ ಓದಿ
Image
PAK vs WI: ಕೊರೊನಾ ಭಯವಂತೂ ಅಲ್ಲ; ಪಾಕ್ ವಿರುದ್ಧದ ಪಂದ್ಯದಲ್ಲಿ ಮಾಸ್ಕ್ ಧರಿಸಿ ಕಣಕ್ಕಿಳಿದ ವಿಂಡೀಸ್ ತಂಡ
Image
MS Dhoni: ಮನೆಗೆ ಬಂದ ಹೊಸ ಅತಿಥಿಗಳನ್ನು ಪರಿಚಯಿಸಿದ ಧೋನಿ ಪತ್ನಿ ಸಾಕ್ಷಿ..!
Image
IND vs SA: ದಿನೇಶ್ ಕಾರ್ತಿಕ್​ಗೂ ಮೊದಲ ಅಕ್ಷರ್ ಬ್ಯಾಟಿಂಗ್; ಪಂತ್ ನಾಯಕತ್ವದ ಮೇಲೆ ಪ್ರಶ್ನೆ ಎತ್ತಿದ ಫ್ಯಾನ್ಸ್

ಇದನ್ನೂ ಓದಿ:SL vs AUS: ಲಂಕಾ ವಿರುದ್ಧದ ಮೊದಲ ಟಿ20ಗೆ ಆಸೀಸ್ ತಂಡ ಪ್ರಕಟ; ಐಪಿಎಲ್ ಫ್ಲಾಪ್ ಸ್ಟಾರ್​ಗಳಿಗೆ ತಂಡದಲ್ಲಿ ಸ್ಥಾನ

ಗಾಯಗೊಂಡ ಆಟಗಾರರ ಬಗ್ಗೆ ಕ್ಯಾಪ್ಟನ್‌ ಹೇಳಿದ್ದೇನು?

ಮೊದಲ ODIಗೆ ಆಡುವ ಹನ್ನೊಂದು ಆಟಗಾರರ ಹೆಸರನ್ನು ಘೋಷಿಸುವ ಮೊದಲು ಆಸ್ಟ್ರೇಲಿಯಾದ ನಾಯಕ ತಮ್ಮ ಗಾಯಗೊಂಡ ಆಟಗಾರರ ಬಗ್ಗೆ ಮಾಹಿತಿ ನೀಡಿದರು. ಕೇನ್ ರಿಚರ್ಡ್ಸನ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಇದರಿಂದ ಚೇತರಿಸಿಕೊಳ್ಳಲು 6 ವಾರಗಳು ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು. ಇವರಲ್ಲದೆ, ಮಿಚೆಲ್ ಸ್ಟಾರ್ಕ್ ಬೆರಳಿಗೆ ಗಾಯವಾಗಿದ್ದರೆ, ಮಿಚೆಲ್ ಮಾರ್ಷ್ ತೀವ್ರ ಗಾಯಗೊಂಡಿದ್ದಾರೆ.

ಪ್ಯಾಟ್ ಕಮ್ಮಿನ್ಸ್ ತಂಡದಲ್ಲಿ

ಗಾಯಗೊಂಡ ಆಟಗಾರನ ಅನುಪಸ್ಥಿತಿಯಲ್ಲಿ, ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಆಡುವ XI ನಲ್ಲಿ ಸೇರಿಸಲಾಗಿದೆ. ಅವರು ಜೋಶ್ ಹ್ಯಾಜಲ್‌ವುಡ್ ಮತ್ತು ಜಾಯ್ ರಿಚರ್ಡ್‌ಸನ್ ಅವರೊಂದಿಗೆ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಇವರನ್ನು ಬಿಟ್ಟರೆ ಸ್ಪಿನ್ ವಿಭಾಗದಲ್ಲಿ ಆಡಮ್ ಝಂಪಾ ಇಲ್ಲದಿದ್ದರೆ ಜವಾಬ್ದಾರಿ ಆಸ್ಟನ್ ಅಗರ್ ಮೇಲಿರಲಿದೆ.

ಮೊದಲ ಏಕದಿನ ಪಂದ್ಯಕ್ಕೆ ಆಸ್ಟ್ರೇಲಿಯಾದ ಪ್ಲೇಯಿಂಗ್ ಇಲೆವೆನ್

ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ, ಆಸ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ರಿಚರ್ಡ್ಸನ್, ಜೋಶ್ ಹ್ಯಾಜಲ್‌ವುಡ್

Published On - 4:09 pm, Mon, 13 June 22