PAK vs WI: ಕೊರೊನಾ ಭಯವಂತೂ ಅಲ್ಲ; ಪಾಕ್ ವಿರುದ್ಧದ ಪಂದ್ಯದಲ್ಲಿ ಮಾಸ್ಕ್ ಧರಿಸಿ ಕಣಕ್ಕಿಳಿದ ವಿಂಡೀಸ್ ತಂಡ
PAK vs WI: ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಮುಲ್ತಾನ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಕೆರಿಬಿಯನ್ ಆಟಗಾರರು ಮಾಸ್ಕ್ ಧರಿಸಿ ಫೀಲ್ಡಿಂಗ್ ಮಾಡುತ್ತಿದ್ದ ದೃಶ್ಯ ಕಂಡುಬಂತು.
ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ( Pakistan and West Indies) ನಡುವೆ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ (last ODI match) ಮುಲ್ತಾನ್‌ನಲ್ಲಿ ನಡೆಯಿತು. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.ಹೀಗಾಗಿ ಕೆರಿಬಿಯನ್ ಮೊದಲು ದಾಳಿಯನ್ನಾರಂಭಿಸಿದರು. ಇದಕ್ಕೆ ಅವರಿಗೆ ತಕ್ಕ ಪ್ರತಿಫಲವೂ ಸಿಕ್ಕಿತು. ಆದರೆ ಈಗ ಸುದ್ದಿಯಾಗಿರುವುದು ವಿಂಡೀಸ್ ಆಟಗಾರರ ಪ್ರದರ್ಶನವಲ್ಲ. ಬದಲಿಗೆ, ಮೈದಾನದಲ್ಲಿ ವಿಂಡೀಸ್ ಆಟಗಾರರು ಮಾಸ್ಕ್ (masks) ಧರಿಸಿ ಫೀಲ್ಡಿಂಗ್ ಮಾಡುತ್ತಿದ್ದುದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಮೈದಾನದಲ್ಲಿ ಇಂತಹ ದೃಶ್ಯ ಕಾಣಸಿಗುವುದು ಅಪರೂಪ. ಕೊರೊನಾ ವೈರಸ್ ಜಗತ್ತಿನಾದ್ಯಂತ ಕೋಲಾಹಲವನ್ನು ಸೃಷ್ಟಿಸಿದಾಗಲೂ, ಆಟಗಾರರು ಮೈದಾನದಲ್ಲಿ ಮಾಸ್ಕ್ ಧರಿಸಿ ಆಡುತ್ತಿರುವುದು ಕಂಡುಬಂದಿಲ್ಲ. ಆದರೆ ಕೊರೊನಾದ ಅಬ್ಬರ ಕಡಿಮೆಯಾದ ನಂತರ, ವಿಂಡೀಸ್ ಆಟಗಾರರು ಮೈದಾನದಲ್ಲಿ ಮಾಸ್ಕ್ ಧರಿಸಿ ಕಾಣಿಸಿಕೊಂಡರು. ಆದರೆ ಇದರ ಹಿಂದಿನ ಕಾರಣ ಪ್ರೇಕ್ಷಕರಿಗೆ ಮೊದಮೊದಲು ಅರ್ಥವಾಗಿರಲಿಲ್ಲ.
ಮಾಸ್ಕ್ ಧರಿಸಲು ಕಾರಣವಿದು
ವಾಸ್ತವವಾಗಿ, ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡುವಾಗ, ಪಂದ್ಯವನ್ನು 35 ಓವರ್‌ಗಳ ನಂತರ ನಿಲ್ಲಿಸಬೇಕಾಗಿತ್ತು. ಇದರ ಹಿಂದಿನ ಕಾರಣ ಧೂಳಿನ ಬಿರುಗಾಳಿ. ಇದರಿಂದಾಗಿ ಇಡೀ ನಗರವು ಧೂಳು ಮತ್ತು ಕತ್ತಲೆಯಲ್ಲಿ ಮುಳುಗಿತು. ಹೀಗಾಗಿ ಕೆರಿಬಿಯನ್ ಆಟಗಾರರು ಧೂಳಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸಿ ಮೈದಾನದಲ್ಲಿ ಕಾಣಿಸಿಕೊಂಡರು. ಬಿರುಗಾಳಿಯ ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು, ಆದರೆ ಎರಡೂ ತಂಡಗಳ ತಲಾ 2 ಓವರ್‌ಗಳನ್ನು ನಿಗದಿತ ಓವರ್‌ಗಳಿಂದ ಕಡಿತಗೊಳಿಸಲಾಯಿತು.
a Shadab special, wow! #PAKvsWI pic.twitter.com/0NLX5eYE30
— Change of Pace (@ChangeofPace414) June 12, 2022
ಪಾಕಿಸ್ತಾನ 48 ಓವರ್‌ಗಳಲ್ಲಿ 9 ವಿಕೆಟ್‌ಗೆ 269 ರನ್ ಗಳಿಸಿತು. ಪಾಕಿಸ್ತಾನ ಪರ ಶದಾಬ್ ಖಾನ್ ಗರಿಷ್ಠ 86 ರನ್ ಗಳಿಸಿದರು. ಇಮಾನ್ ಉಲ್ ಹಕ್ 62 ರನ್ ಗಳಿಸಿದರು.
We’ve seen everything post-COVID now, the only thing which wasn’t tried out during COVID has now been done courtesy dust storm. #PAKvWI pic.twitter.com/rVikQMbyel
— Farid Khan (@_FaridKhan) June 12, 2022
ವಿಂಡೀಸ್ ಆಟಗಾರರು ಮಾಸ್ಕ್ ಧರಿಸಿರುವುದು ಇದೇ ಮೊದಲಲ್ಲ
ವಿಂಡೀಸ್ ತಂಡ ಈಗಾಗಲೇ ಮಾಸ್ಕ್ ಧರಿಸಿ ಮೈದಾನಕ್ಕೆ ಆಗಮಿಸಿದೆ. ಇದು ಸುಮಾರು 2019. ವಿಂಡೀಸ್ ತಂಡವು ಅಫ್ಘಾನಿಸ್ತಾನದ ವಿರುದ್ಧ ಏಕಾನಾ ಕ್ರೀಡಾಂಗಣದಲ್ಲಿ ವಾಯುಮಾಲಿನ್ಯದಿಂದಾಗಿ ಮುಖವಾಡ ಧರಿಸಿ ಮೈದಾನಕ್ಕೆ ಇಳಿದಾಗ. ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ 3 ಪಂದ್ಯಗಳ ಸರಣಿಯ ಕುರಿತು ಮಾತನಾಡುತ್ತಾ, ಪಾಕಿಸ್ತಾನ ಈಗಾಗಲೇ ಸರಣಿಯನ್ನು ಗೆದ್ದುಕೊಂಡಿದೆ ಮತ್ತು ಈಗ ಅದರ ಕಣ್ಣು ಕ್ಲೀನ್ ಸ್ವೀಪ್ ಮೇಲೆದೆ. ಮೊದಲ ಏಕದಿನ ಪಂದ್ಯವನ್ನು 5 ವಿಕೆಟ್‌ಗಳಿಂದ ಮತ್ತು ಎರಡನೇ ಪಂದ್ಯವನ್ನು ಪಾಕಿಸ್ತಾನ 120 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತು.
Published On - 3:49 pm, Mon, 13 June 22