Dasun Shanaka: ಕೊನೆಯ 3 ಓವರ್​ನಲ್ಲಿ 59 ರನ್ ಚೇಸ್: ಮೈ ಜುಮ್ ಎನಿಸಿದ ಶನಕ ಸ್ಫೋಟಕ ಆಟ

Sri Lanka vs Australia: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಿಕೊಂಡಿತು. ಆದರೆ, ಸಿಂಹಳೀಯರು ಕ್ಲೀನ್​ಸ್ವೀಪ್ ಮುಖಭಂಗದಿಂದ ಪಾರಾದರು. ಇದಕ್ಕೆ ಕಾರಣವಾಗಿದ್ದು ಲಂಕಾ ನಾಯಕ ಡಸನ್ ಶನಕ (Dasun Shanaka).

Dasun Shanaka: ಕೊನೆಯ 3 ಓವರ್​ನಲ್ಲಿ 59 ರನ್ ಚೇಸ್: ಮೈ ಜುಮ್ ಎನಿಸಿದ ಶನಕ ಸ್ಫೋಟಕ ಆಟ
Dasun Shanaka SL vs AUS
Follow us
TV9 Web
| Updated By: Vinay Bhat

Updated on: Jun 13, 2022 | 12:02 PM

ಶ್ರೀಲಂಕಾ ತಂಡ ಪ್ರವಾಸಿ ಆಸ್ಟ್ರೇಲಿಯಾ (Sri Lanka vs Australia) ವಿರುದ್ಧದ ಟಿ20 ಸರಣಿಯನ್ನು ಸೋತಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಿಕೊಂಡಿತು. ಆದರೆ, ಸಿಂಹಳೀಯರು ಕ್ಲೀನ್​ಸ್ವೀಪ್ ಮುಖಭಂಗದಿಂದ ಪಾರಾದರು. ಮೊದಲ ಎರಡೂ ಪಂದ್ಯದಲ್ಲಿ ಸೋಲುಂಡಿದ್ದ ಶ್ರೀಲಂಕಾ ಕೊನೆಯ ಪಂದ್ಯದಲ್ಲೂ ಸೋಲುವುದು ಖಚಿತವಾಗಿತ್ತು. ಆದರೆ, ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ಲಂಕಾ ನಾಯಕ ಡಸನ್ ಶನಕ (Dasun Shanaka). ಕೇವಲ 25 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 54 ರನ್ ಚಚ್ಚಿದ ಶನಕ ತಂಡಕ್ಕೆ ರೋಚಕ ಜಯ ತಂದಿಟ್ಟರು. ಕೊನೆಯ ಮೂರು ಓವರ್​ಗಳಲ್ಲಿ ಲಂಕಾಕ್ಕೆ ಗೆಲ್ಲಲು ಬರೋಬ್ಬರಿ 59 ರನ್​ಗಳು ಬೇಕಾಗಿದ್ದಾಗ ಇವರು ಆಡಿದ ಸ್ಫೋಟಕ ಆಟ ಎಲ್ಲರ ಹುಬ್ಬೇರುವಂತೆ ಮಾಡಿತು. ಇದು ಇಂದು ನೂತನ ದಾಖಲೆಯೇ ಆಗಿದೆ.

ಹೌದು, ಆಸ್ಟ್ರೇಲಿಯಾ ನೀಡಿದ್ದ 177 ರನ್​​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ 100 ರನ್​ಗೂ ಮೊದಲೇ ತನ್ನ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಗುಣತಿಲಕ 15 ಗಳಿಸಿ ಔಟಾದರೆ, ಪಥುಮ್ ನಿಸಾಂಕ 27 ಹಾಗೂ ಚರಿತಾ ಅಸಲಂಕ 26 ರನ್​ಗಳ ಕಾಣಿಕೆ ನೀಡಿದರು. ಭನುಕ ರಾಜಪಕ್ಷ 17 ಹಾಗೂ ಕುಸಲ್ ಮೆಂಡಿಸ್ 6 ರನ್​ಗೆ ಔಟಾದರು. ಈ ಸಂದರ್ಭ ಕ್ರೀಸ್​ಗೆ ಇಳಿದ ನಾಯಕ ಡಸನ್ ಶನಕ ಯಾರೂ ಊಹಿಸದ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದರು.

ಇದನ್ನೂ ಓದಿ
Image
Rishabh Pant: ಸತತ 2ನೇ ಸೋಲಿನ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ರಿಷಭ್ ಪಂತ್: ಏನಂದ್ರು ಗೊತ್ತೇ?
Image
IND vs SA: ಟೀಮ್ ಇಂಡಿಯಾ ಸೋಲಿಗೆ ಕಾರಣವಾಗಿದ್ದೇ ಈ ಮೂರು ಅಂಶಗಳು
Image
IPL 2023: ಐಪಿಎಲ್​ ಪ್ರತಿ ಪಂದ್ಯದ ಪ್ರಸಾರ ಹಕ್ಕು 105 ಕೋಟಿಗೆ ಮಾರಾಟ: ಇನ್ನೂ ಮುಗಿದಿಲ್ಲ..!
Image
Team India: ಟೀಮ್ ಇಂಡಿಯಾದ ಅತ್ಯಂತ ಕಿರಿಯ ನಾಯಕ ಯಾರು ಗೊತ್ತಾ?

Dinesh Karthik: 4,4,6,6,1: ಫಿನಿಶರ್ ದಿನೇಶ್ ಕಾರ್ತಿಕ್ ಸ್ಫೋಟಕ ಆಟ ಕಂಡು ಅಭಿಮಾನಿಗಳು ಏನಂದ್ರು ನೋಡಿ

ಶ್ರೀಲಂಕಾಕ್ಕೆ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 59 ರನ್​ಗಳು ಬೇಕಾಗಿದ್ದವು. ಆಗ ಶನಕ 12 ಎಸೆತಗಳಲ್ಲಿ 6 ರನ್ ಗಳಿಸಿ ಕ್ರೀಸ್​ನಲ್ಲಿದ್ದರು. 18ನೇ ಓವರ್ ಜೋಶ್ ಹ್ಯಾಜ್ಲೆವುಡ್ ಬೌಲಿಂಗ್ ಮಾಡಲು ಬಂದರು. ಇಲ್ಲಿಂದಲೇ ಶುರುವಾಗಿದ್ದು ಶನಕ ಸ್ಫೋಟಕ ಆಟ. ಈ ಓವರ್​ನಲ್ಲಿ 2 ಫೋರ್, 2 ಸಿಕ್ಸರ್ ಸಿಡಿಸಿ ಒಟ್ಟು 22 ರನ್ ಮೂಡಿಬಂದವು. ಮುಂದಿನ ಓವರ್​ನಲ್ಲಿ 19 ರನ್ ಚಚ್ಚಿದರು. ಪರಿಣಾಮ ಕೊನೆಯ ಓವರ್​ನಲ್ಲಿ ಗೆಲ್ಲಲು 19 ರನ್​ ಬೇಕಾಗಿದ್ದವು. ಇಲ್ಲೂ ಶನಕ ಬೊಂಬಾಟ್ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದಿಟ್ಟರು.

ವೈಟ್​ವಾಷ್ ಮುಖಭಂಗದಿಂದ ತಂಡವನ್ನು ಪಾರು ಮಾಡಿದ ಶನಕ ಅಜೇಯ ಅರ್ಧಶತಕ ಸಿಡಿಸಿ ಲಂಕಾದ ಮಾನ ಉಳಿಸಿದರು. ಶನಕ ಆಟವನ್ನು ಆಸ್ಟ್ರೇಲಿಯಾ ಆಟಗಾರರು ಕೂಡ ಮೆಚ್ಚಿದರು. ವಿಶೇಷ ಎಂದರೆ ಇದುವರೆಗೆ ಯಾವುದೇ ತಂಡ ಕೊನೆಯ 3 ಓವರ್​ನಲ್ಲಿ 59 ರನ್​ಗಳನ್ನು ಚೇಸ್ ಮಾಡಿದ ಇತಿಹಾಸವಿಲ್ಲ. ಈ ಮೂಲಕ ಶ್ರೀಲಂಕಾ ನೂತನ ದಾಖಲೆ ಬರೆಯಿತು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಕ್ಕೆ ನಾಯಕ ಆ್ಯರೋ ಫಿಂಚ್ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ಮೊದಲ ವಿಕೆಟ್‌ಗೆ 43 ರನ್‌ಗಳ ಜೊತೆಯಾಟ ಆಡಿದರು. ವಾರ್ನರ್ 39 ಮತ್ತು ಫಿಂಚ್ 29 ರನ್ ಗಳಿಸಿ ಔಟಾದರು. ಅಂತಿಮ ಪಂದ್ಯದಲ್ಲಿ ಮಾರ್ಕಸ್ ಸ್ಟೊಯಿನಿಸ್ 23 ಎಸೆತಗಳಲ್ಲಿ 38 ರನ್ ಗಳಿಸಿದರು. ಸ್ಟೀವ್ ಸ್ಮಿತ್ 27 ಎಸೆತಗಳಲ್ಲಿ 37 ರನ್ ಗಳಿಸಿದರು. ಆಸ್ಟ್ರೇಲಿಯಾ 20 ಓವರ್​ಗೆ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಲಂಕಾ ಪರ ಮಹಿಸ್ ತಿಕ್ಷಣ 2 ವಿಕೆಟ್ ಕಿತ್ತರು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ