AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dinesh Karthik: 4,4,6,6,1: ಫಿನಿಶರ್ ದಿನೇಶ್ ಕಾರ್ತಿಕ್ ಸ್ಫೋಟಕ ಆಟ ಕಂಡು ಅಭಿಮಾನಿಗಳು ಏನಂದ್ರು ನೋಡಿ

IND vs SA: ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ದಿನೇಶ್ ಕಾರ್ತಿಕ್ (Dinesh Karthik) ಮಾತ್ರ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕೇವಲ 21 ಎಸೆತಗಳಲ್ಲಿ 2 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 30 ರನ್ ಚಚ್ಚಿದರು. ಇದರಿಂದಲೇ ಭಾರತದ ಸ್ಕೋರ್ 140 ರನ್ ಗಡಿ ದಾಟಿತು ಎನ್ನಬಹುದು.

Dinesh Karthik: 4,4,6,6,1: ಫಿನಿಶರ್ ದಿನೇಶ್ ಕಾರ್ತಿಕ್ ಸ್ಫೋಟಕ ಆಟ ಕಂಡು ಅಭಿಮಾನಿಗಳು ಏನಂದ್ರು ನೋಡಿ
Dinesh Karthik IND vs SA 2nd T20I
TV9 Web
| Updated By: Vinay Bhat|

Updated on: Jun 13, 2022 | 10:38 AM

Share

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಸ್ಫೋಟಕ ಆಟವಾಡಿದ್ದ ಭಾರತ (India vs South Africa) ದ್ವಿತೀಯ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. 200ಕ್ಕೂ ಅಧಿಕ ರನ್ ಸಿಡಿಸಿದ್ದ ಟೀಮ್ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ಗಳಿಸಿದ್ದು ಕೇವಲ 148 ರನ್. ಈ ಟಾರ್ಗೆಟ್ ಆಫ್ರಿಕಾನ್ನರಿಗೆ ದೊಡ್ಡ ಸವಾಲಾಗಿ ಪರಿಣಮಿಸಲೇ ಇಲ್ಲ. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ನಂತರ ಹೆನ್ರಿಚ್ ಕ್ಲಾಸೆನ್ ಅವರು ಪಂತ್ ಪಡೆಯ ಬೆವರಿಳಿಸಿ ಬಿಟ್ಟರು. ಭಾರತ ಪರ ಬ್ಯಾಟಿಂಗ್​ನಲ್ಲಿ ಶ್ರೇಯಸ್ ಅಯ್ಯರ್ (Shreyas Iyer) 35 ಎಸೆತಗಳಲ್ಲಿ 40 ರನ್​ಗಳ ಕಾಣಿಕೆ ನೀಡಿದರೆ, ದಿನೇಶ್ ಕಾರ್ತಿಕ್ (Dinesh Karthik) ಮಾತ್ರ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. 37 ವರ್ಷ ಪ್ರಾಯದ ಕಾರ್ತಿಕ್ ಕೇವಲ 21 ಎಸೆತಗಳಲ್ಲಿ 2 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 30 ರನ್ ಚಚ್ಚಿದರು. ಇದರಿಂದಲೇ ಭಾರತದ ಸ್ಕೋರ್ 140 ರನ್ ಗಡಿ ದಾಟಿತು ಎನ್ನಬಹುದು.

ಅಂತಿಮ ಹಂತದಲ್ಲಿ ಭಾರತದ ವಿಕೆಟ್​ಗಳು ಸರಾಗವಾಗಿ ಕಳೆದುಕೊಳ್ಳುತ್ತಿದ್ದ ಕಾರಣ ದಿನೇಶ್ ಕಾರ್ತಿಕ್ ಕೊನೆಯ ಓವರ್ ವರೆಗೂ ಸಾಗೋಣ ಎಂಬ ಕಾರಣಕ್ಕೆ ನಿಧಾನಗತಿಯ ಆಟಕ್ಕೆ ಮುಂದಾದರು. ಮೊದಲ 16 ಎಸೆತಗಳಲ್ಲಿ ಡಿಕೆ ಕಲೆಹಾಕಿದ್ದು ಕೇವಲ 9 ರನ್​ಗಳನ್ನಷ್ಟೆ. ಇವರಿಗೆ ಹರ್ಷಲ್ ಪಟೇಲ್ ಕೂಡ ಉತ್ತಮ ಸಾಥ್ ನೀಡಿದರು ಎಂಬುದನ್ನು ಮರೆಯುವಂತಿಲ್ಲ. ಕೊನೆಯ ಓವರ್​ಗೂ ಮುನ್ನ ದಿನೇಶ್ 18 ಎಸೆತಗಳಲ್ಲಿ 17 ರನ್ ಗಳಿಸಿದ್ದರು.

ಇದನ್ನೂ ಓದಿ
Image
IND vs SA: ಟೀಮ್ ಇಂಡಿಯಾ ಸೋಲಿಗೆ ಕಾರಣವಾಗಿದ್ದೇ ಈ ಮೂರು ಅಂಶಗಳು
Image
IPL 2023: ಐಪಿಎಲ್​ ಪ್ರತಿ ಪಂದ್ಯದ ಪ್ರಸಾರ ಹಕ್ಕು 105 ಕೋಟಿಗೆ ಮಾರಾಟ: ಇನ್ನೂ ಮುಗಿದಿಲ್ಲ..!
Image
Team India: ಟೀಮ್ ಇಂಡಿಯಾದ ಅತ್ಯಂತ ಕಿರಿಯ ನಾಯಕ ಯಾರು ಗೊತ್ತಾ?
Image
India vs South Africa 2nd T20 Highlights: ಮತ್ತೆ ಎಡವಿದ ಭಾರತ; 2ನೇ ಟಿ20ಯಲ್ಲೂ ಆಫ್ರಿಕಾಗೆ ಸುಲಭ ಜಯ

Rishabh Pant: ಸತತ 2ನೇ ಸೋಲಿನ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ರಿಷಭ್ ಪಂತ್: ಏನಂದ್ರು ಗೊತ್ತೇ?

20ನೇ ಓವರ್​ನ ಡ್ವೇನ್ ಪ್ರೆಟೋರಿಯಸ್ ಬೌಲಿಂಗ್​ನ ಮೊದಲ ಎಸೆತದಲ್ಲಿ ಹರ್ಷಲ್ ಫೋರ್ ಬಾರಿಸಿದರೆ, ಎರಡನೇ ಎಸೆತ ಡಾಟ್ ಆಯಿತು. ಮೂರನೇ ಎಸೆತದಲ್ಲಿ ಸಿಂಗಲ್ ರನ್ ಕಲೆಹಾಕಿದರು. ಮುಂದಿನ ಮೂರು ಎಸೆತದಲ್ಲಿ ಕಾರ್ತಿಕ್ 13 ರನ್ ಸಿಡಿಸಿದರು. 4ನೇ ಎಸೆತದಲ್ಲಿ ಮಿಡ್ ಆಫ್ ಮೂಲಕ ಸಿಕ್ಸರ್ ಬಾರಿಸಿದರೆ, 5ನೇ ಎಸೆತದಲ್ಲಿ ನೇರವಾಗಿ ಮತ್ತೊಂದು ಸಿಕ್ಸರ್ ಚಚ್ಚಿದರು. ಕೊನೆಯ ಎಸೆತದಲ್ಲಿ ಸರಿಯಾಗಿ ಕನೆಕ್ಟ್ ಆಗದ ಕಾರಣ ಒಂದು ರನ್ ಮೂಡಿಬಂತು. ಹೀಗೆ ಕೊನೆಯ ಓವರ್​ನಲ್ಲಿ ಒಟ್ಟಾರೆಯಾಗಿ 20 ರನ್​ಗಳು ಹರಿದುಬಂದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲಿಗೆ ಫೀಲ್ಡಿಂಗ್ ಅನ್ನು ಆಯ್ಕೆ ಮಾಡಿಕೊಂಡಿತು. ಪಂದ್ಯದ ಮೊದಲ ಓವರ್‌ ನಲ್ಲಿಯೇ ರುತುರಾಜ್ ಗಾಯಕವಾಡ್ ಔಟಾದರು. ಇಶಾನ್‌ ಕಿಶನ್‌ ಮೊದಲ ಪಂದ್ಯದ ಲಯದಲ್ಲೇ ಸಾಗಿದರು. ಇಶಾನ್‌ ಗಳಿಕೆ 21 ಎಸೆತಗಳಿಂದ 34 ರನ್‌ (4 ಬೌಂಡರಿ, 3 ಸಿಕ್ಸರ್‌). ಬೆನ್ನಲ್ಲೇ ರಿಷಭ್‌ ಪಂತ್‌ ಕೂಡ (5) ಪೆವಿಲಿಯನ್‌ ಸೇರಿಕೊಂಡರು. ಹಾರ್ದಿಕ್‌ ಪಾಂಡ್ಯ ಮೇಲಿನ ನಿರೀಕ್ಷೆ ಹುಸಿಯಾಯಿತುದಿನೇಶ್‌ ಕಾರ್ತಿಕ್‌-ಹರ್ಷಲ್‌ ಪಟೇಲ್‌ ಕೊನೆಯ 3 ಓವರ್‌ಗಳಲ್ಲಿ 36 ರನ್‌ ಪೇರಿಸಿ ಮೊತ್ತವನ್ನು 148ಕ್ಕೆ ಏರಿಸುವಲ್ಲಿ ಯಶಸ್ವಿಯಾದರು.

149 ರನ್‌ಗಳ ಪೈಪೋಟಿ ಮೊತ್ತ ಕಲೆಹಾಕಿದ ಸೌತ್‌ ಆಫ್ರಿಕಾ ಸಹ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಬಂದ ರೀಜಾ಼ ಹೆಂಡ್ರಿಕ್ಸ್‌(4), ಡ್ವೇನ್‌ ಪ್ರಿಟೋರಿಯಸ್‌(4) ಹಾಗೂ ದುಸೇನ್‌(1) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಪರಿಣಾಮ 29 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಈ ಹಂತದಲ್ಲಿ ಬಂದ ಹೆನ್ರಿಚ್‌ ಕ್ಲಾಸೇನ್‌ 81 ರನ್‌(46 ಬಾಲ್‌, 7 ಬೌಂಡರಿ, 5 ಸಿಕ್ಸ್‌) ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಭಾರತದ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕ್ಲಾಸೇನ್‌, ಬಿರುಸಿನ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದರು. ಕೊನೆ ಹಂತದಲ್ಲಿ ಡೇವಿಡ್‌ ಮಿಲ್ಲರ್‌ ಅಜೇಯ 20 ರನ್‌ಗಳಿಸಿ ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?