IPL 2023: ಐಪಿಎಲ್​ ಪ್ರತಿ ಪಂದ್ಯದ ಪ್ರಸಾರ ಹಕ್ಕು 105 ಕೋಟಿಗೆ ಮಾರಾಟ: ಇನ್ನೂ ಮುಗಿದಿಲ್ಲ..!

IPL 2023-2027: ಈ ಬಾರಿ ಬಿಸಿಸಿಐ ನಾಲ್ಕು ಹಕ್ಕುಗಳ ಟೆಂಡರ್ ಮೂಲಕ ಹರಾಜು ನಡೆಸುತ್ತಿರುವುದು ವಿಶೇಷ. ಅಂದರಂತೆ ಮೊದಲ ಎರಡು ಪ್ಯಾಕೇಜ್​ನಲ್ಲೇ 43 ಸಾವಿರಕ್ಕೂ ಅಧಿಕ ಕೋಟಿ ಮೊತ್ತದ ಆದಾಯ ಬಿಸಿಸಿಐಗೆ ಲಭಿಸಿದೆ.

IPL 2023: ಐಪಿಎಲ್​ ಪ್ರತಿ ಪಂದ್ಯದ ಪ್ರಸಾರ ಹಕ್ಕು 105 ಕೋಟಿಗೆ ಮಾರಾಟ: ಇನ್ನೂ ಮುಗಿದಿಲ್ಲ..!
IPL
Follow us
| Updated By: ಝಾಹಿರ್ ಯೂಸುಫ್

Updated on:Jun 13, 2022 | 1:46 PM

ಐಪಿಎಲ್ 2023 ರಿಂದ 2027 ರವರೆಗಿನ (IPL 2023-27) ನೇರ ಪ್ರಸಾರ ಮಾಧ್ಯಮ ಹಕ್ಕುಗಳಿಗಾಗಿ ಬಿಸಿಸಿಐ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಭಾನುವಾರ ಎರಡು ಪ್ಯಾಕೇಜ್​ಗಳಿಗಾಗಿ ಬಿಡ್ಡಿಂಗ್ ನಡೆಸಲಾಗಿದೆ. ಈ ಹರಾಜಿನಲ್ಲಿ ರಿಲಯನ್ಸ್ ವಯಾಕಾಮ್ 18, ಡಿಸ್ನಿ ಸ್ಟಾರ್, ಸೋನಿ ನೆಟ್‌ವರ್ಕ್, ಝೀ ನೆಟ್​ವರ್ಕ್​, ಟೈಮ್ಸ್ ಇಂಟರ್ನೆಟ್ ಸೇರಿದಂತೆ ಪ್ರಮುಖ ಕಂಪೆನಿಗಳು ಭಾಗವಹಿಸಿದ್ದವು. ವಿಶೇಷ ಎಂದರೆ ಐಪಿಎಲ್ ಪ್ರಸಾರ ಹಕ್ಕಿಗಾಗಿ ಪ್ರಮುಖ ಕಂಪೆನಿಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬಂದಿದ್ದು, ಪರಿಣಾಮ ಮೊದಲ ದಿನವೇ 43 ಸಾವಿರ ಕೋಟಿವರೆಗೆ ಹರಾಜು ನಡೆದಿದೆ. ಅಂದರೆ ಪ್ರತಿ ಪಂದ್ಯಗಳ ನೇರ ಪ್ರಸಾರದ ಹಕ್ಕು 105 ಕೋಟಿಯನ್ನು ದಾಟಿದೆ. ಇದರೊಂದಿಗೆ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಸ್ಪೋರ್ಟ್ಸ್​​ ಲೀಗ್ ಆಗಿ ಐಪಿಎಲ್​ ಗುರುತಿಸಿಕೊಂಡಿದೆ. ಸದ್ಯ ಅಗ್ರಸ್ಥಾನದಲ್ಲಿ ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ಇದ್ದು, ಇದರ ಪ್ರತಿ ಪಂದ್ಯದ ನೇರ ಪ್ರಸಾರದ ಹಕ್ಕು 133 ಕೋಟಿಗೆ ಮಾರಾಟವಾಗಿದೆ. ಇದೀಗ ಐಪಿಎಲ್​ ಪ್ರತಿ ಪಂದ್ಯಗಳ ಪ್ರಸಾರ ಹಕ್ಕುಗಳು 105 ಕೋಟಿಯನ್ನು ದಾಟಿದೆ. ಸದ್ಯ ಹರಾಜನ್ನು ಸೋಮವಾರಕ್ಕೆ ಮುಂದೂಡಲಾಗಿದ್ದು, ಹೀಗಾಗಿ ಈ ಮೊತ್ತ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಭಾನುವಾರ ನಡೆದ ಹರಾಜಿನಲ್ಲಿ ಟಿವಿ ಪ್ರಸಾರ ಹಕ್ಕುಗಳಿಗಾಗಿ ಸೋನಿ ನೆಟ್‌ವರ್ಕ್, ರಿಲಯನ್ಸ್ ವಯಾಕಾಮ್ 18 ಮತ್ತು ಸ್ಟಾರ್​ ನೆಟ್​ವರ್ಕ್​ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಹಾಗೆಯೇ ಡಿಜಿಟಲ್ ಹಕ್ಕುಗಳಿಗಾಗಿ ಡಿಸ್ನಿ ಹಾಟ್‌ಸ್ಟಾರ್, ಝೀ ಮತ್ತು ರಿಲಯನ್ಸ್ ಜಿಯೋ (Viacom18) ಉತ್ತಮ ಬಿಡ್ಡಿಂಗ್ ನಡೆಸಿದೆ. ಹೀಗಾಗಿ ಈ ಬಾರಿ ಐಪಿಎಲ್​ ಪ್ರಸಾರ ಹಕ್ಕುಗಳು ಯಾರ ಪಾಲಾಗಲಿದೆ ಎಂಬುದೇ ಈಗ ಹೊಸ ಕುತೂಹಲಕ್ಕೆ ಕಾರಣವಾಗಿದೆ.

ಹೇಗೆ ನಡೆಯುತ್ತಿದೆ ಐಪಿಎಲ್ ನೇರ ಪ್ರಸಾರ ಹಕ್ಕಿನ ಬಿಡ್ಡಿಂಗ್? ಈ ಬಾರಿ ಬಿಸಿಸಿಐ ನಾಲ್ಕು ಹಕ್ಕುಗಳ ಟೆಂಡರ್ ಮೂಲಕ ಹರಾಜು ನಡೆಸುತ್ತಿರುವುದು ವಿಶೇಷ. ಅಂದರಂತೆ ಮೊದಲ ಎರಡು ಪ್ಯಾಕೇಜ್​ನಲ್ಲೇ 43 ಸಾವಿರಕ್ಕೂ ಅಧಿಕ ಕೋಟಿ ಮೊತ್ತದ ಆದಾಯ ಬಿಸಿಸಿಐಗೆ ಲಭಿಸಿದೆ. ಅಂದರೆ ಇಲ್ಲಿ ಪ್ಯಾಕೇಜ್​ ಅನ್ನು ನಾಲ್ಕು ಟೆಂಡರ್​ಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ಟೆಂಡರ್​ಗಳು ಈ ಕೆಳಗಿನಂತಿವೆ.

ಇದನ್ನೂ ಓದಿ
Image
KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್
  1. ಪ್ಯಾಕೇಜ್ ಎ – ಭಾರತೀಯ ಉಪಖಂಡದಲ್ಲಿ ನೇರ ಪ್ರಸಾರ: ಈ ಹರಾಜು 49 ಕೋಟಿಯಿಂದ ಪ್ರಾರಂಭವಾಗುತ್ತದೆ.
  2. ಪ್ಯಾಕೇಜ್ ಬಿ – ಭಾರತೀಯ ಉಪಖಂಡದಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ನೇರ ಪ್ರಸಾರ: ಈ ಹರಾಜು 33 ಕೋಟಿಯಿಂದ ಪ್ರಾರಂಭವಾಗುತ್ತದೆ.
  3. ಪ್ಯಾಕೇಜ್ ಸಿ– ನಾನ್ ಎಕ್ಸ್‌ಕ್ಲೂಸಿವ್ : ಕೆಲ ಪ್ರಮುಖ ಪಂದ್ಯಗಳ ನೇರ ಪ್ರಸಾರವನ್ನು ಒಳಗೊಂಡಿರುತ್ತದೆ: ಈ ಹರಾಜು 18 ಕೋಟಿಯಿಂದ ಪ್ರಾರಂಭವಾಗುತ್ತದೆ.
  4. ಪ್ಯಾಕೇಜ್ ಡಿ – ರೆಸ್ಟ್ ಆಫ್ ವರ್ಲ್ಡ್: ವಿದೇಶಗಳಲ್ಲಿ ಐಪಿಎಲ್​ ನೇರ ಪ್ರಸಾರದ ಹಕ್ಕು. ಈ ಬಿಡ್ಡಿಂಗ್ 3 ಕೋಟಿಯಿಂದ ಪ್ರಾರಂಭವಾಗುತ್ತದೆ,

ಅದರಂತೆ ಮೊದಲ ದಿನದ ಹರಾಜಿನಲ್ಲಿ ಪ್ಯಾಕೇಜ್ ಎ ಮತ್ತು ಪ್ಯಾಕೇಜ್​ ಬಿ ಹಕ್ಕುಗಳಿಗಾಗಿ ಬಿಡ್ಡಿಂಗ್ ನಡೆಸಲಾಗಿದೆ. ಈ ವೇಳೆ ಭಾರತದಲ್ಲಿನ ಟಿವಿ ಪ್ರಸಾರ ಹಕ್ಕು ಪ್ಯಾಕೇಜ್-ಎ ಬಿಡ್ಡಿಂಗ್ 23,370 ಕೋಟಿಗೆ ತಲುಪಿದೆ. ಅಂದರೆ ಪ್ರತಿ ಪಂದ್ಯಕ್ಕೆ 57 ಕೋಟಿ ರೂ. ಹಾಗೆಯೇ ಭಾರತದ ಡಿಜಿಟಲ್ ಹಕ್ಕುಗಳ ಪ್ಯಾಕೇಜ್-ಬಿ 19,700 ಕೋಟಿಗೆ ಬಂದು ನಿಂತಿದೆ. ಅಂದರೆ ಪ್ರತಿ ಪಂದ್ಯಕ್ಕೆ 48.04 ಕೋಟಿ ರೂ. ಅಂದರೆ ಮೊದಲ ದಿನದ ಹರಾಜಿನಲ್ಲಿ 43,050 ಕೋಟಿವರೆಗೆ ಬಿಡ್ಡಿಂಗ್ ನಡೆದಿದೆ. ಈ ಮೂಲಕ ಪ್ರತಿ ಪಂದ್ಯಗಳ ನೇರ ಪ್ರಸಾರ ಹಕ್ಕು 105.04 ಕೋಟಿಗೆ ಮಾರಾಟವಾಗಿದೆ. ಇನ್ನು ಈ ಹರಾಜು ಸೋಮವಾರ ಕೂಡ ಮುಂದುವರೆಯಲಿದೆ. ಅಷ್ಟೇ ಅಲ್ಲದೆ ಪ್ಯಾಕೇಜ್ ಸಿ ಮತ್ತು ಡಿ ಹರಾಜು ಕೂಡ ನಡೆಯಲಿದ್ದು, ಹೀಗಾಗಿ ಪ್ರತಿ ಪಂದ್ಯಗಳ ನೇರ ಪ್ರಸಾರ ಹಕ್ಕು ಸುಮಾರು 115 ಕೋಟಿಗೆ ಮಾರಾಟವಾಗುವ ನಿರೀಕ್ಷೆಯಲ್ಲಿದೆ ಬಿಸಿಸಿಐ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:36 pm, Sun, 12 June 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು